ಶಿವಮೊಗ್ಗ ಐಸಿಸ್ ಸಂಚು ಕೇಸ್: ಅರಾಫತ್ ವಿರುದ್ಧ ಎನ್‌ಐಎ ಚಾರ್ಜ್‌ಶೀಟ್
ಅರಾಫತ್‌ನ ಕಳೆದ ಸೆ.14ರಂದು ಕೀನ್ಯಾದಿಂದ ಆಗಮಿಮಿಸಿದ ವೇಳೆ ಎನ್‌ಐಎ ಅಧಿಕಾರಿಗಳು ಬಂಧಿಸಿದ್ದರು. ಇದಲ್ಲದೇ ಇದೇ ಪ್ರಕರಣ ಸಂಬಂಧ ಮಾಝ್ ಮುನೀರ್ ಅಹ್ಮದ್ ಹಾಗೂ ಮೊಹಮ್ಮದ್ ಶರೀಕ್ ವಿರುದ್ಧವೂ ಆರೋಪಪಟ್ಟಿ ದಾಖಲಿಸಿದೆ.
ನವದೆಹಲಿ(ಮಾ.09): ಶಿವಮೊಗ್ಗ ಐಸಿಸ್ ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳವು ಘೋಷಿತ ಉಗ್ರ ಅರಾಫತ್ ಅಲಿ ವಿರುದ್ಧ ಹೆಚ್ಚುವರಿ ಆರೋಪ ಪಟ್ಟಿ ಸಲ್ಲಿಸಿದೆ. ಅದರಲ್ಲಿ 2020ರಲ್ಲಿ ಮಂಗಳೂರಿನಲ್ಲಿ ಐಸಿಸ್ ಮತ್ತು ಲಷ್ಕರ್ ಎ ತೊಯ್ದಾ ಪರವಾಗಿ ಗೋಡೆ ಬರಹ ಬರೆಯಲು ನೆರವು ನೀಡಿದ ವಿಷಯ ಪ್ರಸ್ತಾಪಿಸಲಾಗಿದೆ.
ಅರಾಫರ್, ಕೆಲ ಯುವಕರನ್ನು ಮತೀಯವಾದಕ್ಕೆ ಸೆಳೆದು ಅವರ ಮೂಲಕ ಮಂಗಳೂರಿನಲ್ಲಿ ಗೋಡೆ ಬರಹ ಬರೆಸಿದ್ದ. ಪ್ರಕರಣದಲ್ಲಿ ನಾಪತ್ತೆಯಾಗಿರುವ ಅಬ್ದುಲ್ ಮಥೀನ್ ತಾಹ ಮತ್ತು ಮಸ್ಲವೀರ್ ಹುಸ್ಸೇನ್ ಶಹಜೇಬ್‌ನ ಸೂಚನೆಯಂತೆ ಅರಾ ಫರ್ ಈ ಕೆಲಸ ಮಾಡಿದ್ದ. ಶಾರಿಖ್ ಅಹಮದ್ ಎಂಬಾತನ ಮೂಲಕ ಈ ಗೋಡೆ ಬರಹ ಬರೆಸಿದ್ದ. ಗೋಡೆ ಬರಹ ಬರೆದವರಿಗೆ ವಿದೇಶಗಳಿಂದ ಸ್ವೀಕರಿಸಿದ ಕ್ರಿಸ್ಟೋಕರೆನ್ಸಿ ಹಣವನ್ನು ಬಳಸಿಕೊಂಡು ಹಣ ಪಾವತಿಸಿದ್ದ ಎಂದು ಎನ್‌ಐಎ ಆರೋಪಿಸಿದೆ.
ರಾಮೇಶ್ವರಂ ಕೆಫೆ ಸ್ಫೋಟಕ್ಕೂ ಪಾಕಿಸ್ತಾನ್, ಐಸಿಸ್‌ಗೂ ಲಿಂಕ್ ಇದೆ: ಬಸನಗೌಡ ಪಾಟೀಲ್ ಯತ್ನಾಳ್
ಅರಾಫತ್‌ನ ಕಳೆದ ಸೆ.14ರಂದು ಕೀನ್ಯಾದಿಂದ ಆಗಮಿಮಿಸಿದ ವೇಳೆ ಎನ್‌ಐಎ ಅಧಿಕಾರಿಗಳು ಬಂಧಿಸಿದ್ದರು. ಇದಲ್ಲದೇ ಇದೇ ಪ್ರಕರಣ ಸಂಬಂಧ ಮಾಝ್ ಮುನೀರ್ ಅಹ್ಮದ್ ಹಾಗೂ ಮೊಹಮ್ಮದ್ ಶರೀಕ್ ವಿರುದ್ಧವೂ ಆರೋಪಪಟ್ಟಿ ದಾಖಲಿಸಿದೆ.