Asianet Suvarna News Asianet Suvarna News

Covid-19 Karnataka| ವಿದೇಶದಿಂದ ಬರುವವರಿಗೆ ಹೊಸ ಕೋವಿಡ್‌ ರೂಲ್ಸ್‌

*   ವಿದೇಶದಿಂದ ಆಗಮಿಸುವವರಿಗೆ ಪರಿಷ್ಕೃತ ಕೋವಿಡ್‌ ಮಾರ್ಗಸೂಚಿ
*  ವಿವಿಧ ದೇಶಗಳಲ್ಲಿ ಕೋವಿಡ್‌ ಪ್ರಕರಣ ಹೆಚ್ಚಳ ಹಿನ್ನೆಲೆ ಮಾರ್ಗಸೂಚಿ ಬದಲು
*  ಎರಡೂ ಡೋಸ್‌ ಲಸಿಕೆ ಪಡೆದಿದ್ದರೆ ಕ್ವಾರಂಟೈನ್‌ನಿಂದ ವಿನಾಯಿತಿ

New Covid Rules For Those Coming From Abroad to Karnataka grg
Author
Bengaluru, First Published Nov 21, 2021, 6:38 AM IST

ಬೆಂಗಳೂರು(ನ.21):  ಅನೇಕ ದೇಶಗಳಲ್ಲಿ ಕೊರೋನಾ(Coronavirus) ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಿದೇಶಗಳಿಂದ(Foreign) ವಿಮಾನ ನಿಲ್ದಾಣ(Airport) ಹಾಗೂ ಬಂದರು(Port) ಮೂಲಕ ರಾಜ್ಯಕ್ಕೆ(Karnataka) ಆಗಮಿಸುವ ಪ್ರಯಾಣಿಕರಿಗೆ ಕೊರೋನಾ ಪರಿಷ್ಕೃತ ಮಾರ್ಗಸೂಚಿ ಪ್ರಕಟಿಸಿದ್ದು, ಎ-ಕೆಟಗರಿಯಲ್ಲಿರುವ 99 ದೇಶಗಳಿಂದ ಬರುವವರಿಗೆ ಎರಡೂ ಡೋಸ್‌ ಲಸಿಕೆ ಪಡೆದಿದ್ದರೆ ಕ್ವಾರಂಟೈನ್‌ನಿಂದ ವಿನಾಯಿತಿ ನೀಡಿ ಆದೇಶಿಸಲಾಗಿದೆ.

ಹೆಚ್ಚು ಅಪಾಯಕಾರಿ ಎಂದು ಗುರುತಿಸಿರುವ ಯೂರೋಪ್‌ ರಾಷ್ಟ್ರಗಳು(European countries), ದಕ್ಷಿಣ ಆಫ್ರಿಕಾ, ಬ್ರೆಜಿಲ್‌, ಬಾಂಗ್ಲಾದೇಶ, ಬೊಟ್ಸಾವನಾ, ಚೀನಾ, ಮಾರಿಷಸ್‌, ನ್ಯೂಜಿಲೆಂಡ್‌ ದೇಶಗಳಿಂದ ಬರುವವರು ಆಗಮಿಸುವ ಮೊದಲೂ 72 ಗಂಟೆಗಳಿಗಿಂತ ಹಳೆಯ ಆರ್‌ಟಿ-ಪಿಸಿಆರ್‌(RTPCR) ನೆಗೆಟಿವ್‌ ವರದಿ ಅಪ್‌ಲೋಡ್‌ ಮಾಡಬೇಕು. ಜತೆಗೆ ರಾಜ್ಯಕ್ಕೆ ಆಗಮಿಸಿದ ಬಳಿಕವೂ ಮತ್ತೊಮ್ಮೆ ಪರೀಕ್ಷೆಗೆ ಒಳಪಡಬೇಕು. ನೆಗೆಟಿವ್‌ ಬಂದರೂ 14 ದಿನ ಕಡ್ಡಾಯವಾಗಿ ಹೋಂ ಕ್ವಾರಂಟೈನ್‌ಗೆ(Home Quarantine) ಒಳಪಡಬೇಕು. 8ನೇ ದಿನ ಮತ್ತೊಮ್ಮೆ ಪರೀಕ್ಷೆಗೆ ಒಳಗಾಗಬೇಕು.

ಡಬಲ್‌ ಡೋಸ್‌ನಿಂದ 1 ವರ್ಷಕ್ಕಿಂತ ಹೆಚ್ಚಿನ ಸುರಕ್ಷೆ : ಸೌಮ್ಯಾ ಸ್ವಾಮಿನಾಥನ್‌!

ಭಾರತದ(India) ಜೊತೆಗೆ ಲಸಿಕೆ ಒಡಂಬಡಿಕೆ ಮಾಡಿಕೊಂಡಿರುವ ದೇಶಗಳಿಗೆ ಕೆಲ ವಿನಾಯಿತಿಗಳನ್ನು ನೀಡಲಾಗಿದೆ. ಎ-ಕೆಟಗರಿಯಲ್ಲಿದ್ದ ಇಂತಹ ದೇಶಗಳ ಪಟ್ಟಿಯನ್ನು 11 ರಿಂದ 99ಕ್ಕೆ ಏರಿಕೆ ಮಾಡಲಾಗಿದೆ. ಸಿಂಗಾಪೂರ್‌ ಹಾಗೂ ಜಿಂಬಾಂಬ್ವೆ ದೇಶಗಳನ್ನು ಹೈ-ರಿಸ್ಕ್‌ ಪಟ್ಟಿಯಿಂದ ತೆಗೆದು ಎ-ಕೆಟಗರಿಗೆ ಸೇರಿಸಲಾಗಿದೆ.

ಇಸ್ರೇಲ್‌, ಆಸ್ಪ್ರೇಲಿಯಾ, ಫ್ರಾನ್ಸ್‌, ಈಜಿಪ್ಟ್‌ ಸೇರಿದಂತೆ 99 ದೇಶಗಳಿಂದ ಬರುವವರು ಡಬ್ಲ್ಯೂಎಚ್‌ಒ ಅನುಮೋದನೆ ಪಡೆದಿರುವ ಎರಡೂ ಡೋಸ್‌ ಲಸಿಕೆ(Vaccine) ಪಡೆದಿದ್ದರೆ ಕಡ್ಡಾಯ ಹೋಂ ಕ್ವಾರಂಟೈನ್‌ಗೆ ಒಳಪಡುವ ಅಗತ್ಯವಿಲ್ಲ. ಇವರು 72 ಗಂಟೆ ಹಳೆಯದಲ್ಲದ ನೆಗೆಟಿವ್‌ ವರದಿ ನೀಡಿ ಸ್ವಯಂ ನಿಗಾದಲ್ಲಿದ್ದಾರೆ ಸಾಕು ಎಂದು ಸ್ಪಷ್ಟಪಡಿಸಲಾಗಿದೆ.

ಉಳಿದಂತೆ ಲಸಿಕೆ ಪಡೆಯದ ಹಾಗೂ ಒಂದು ಡೋಸ್‌ ಮಾತ್ರ ಪಡೆದಿರುವವರು ಏರ್‌ಪೋರ್ಟ್‌ಗೆ ಬಂದ ಬಳಿಕ ಮತ್ತೊಮ್ಮೆ ಪರೀಕ್ಷೆಗೆ ಒಳಪಡಬೇಕು. ಬಳಿಕ ಬಳಿಕ 7 ದಿನ ಹೋಂ ಕ್ವಾರಂಟೈನ್‌ಲ್ಲಿದ್ದು ಎಂಟನೇ ದಿನ ಮರು ಪರೀಕ್ಷೆಗೆ ಒಳಪಡಬೇಕು. ಈ ವೇಳೆ ನೆಗೆಟಿವ್‌ ಬಂದರೂ ಮತ್ತೆ 7 ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇರಬೇಕು ಎಂದು ತಿಳಿಸಲಾಗಿದೆ.

Coronavirus| ಕೋವಿಡ್‌ನಿಂದ ಮೃತ ಪೊಲೀಸ್‌ ಕುಟುಂಬಕ್ಕೆ ಪರಿಹಾರ ವಿತರಣೆ

ದೇಶಕ್ಕೆ ಆಗಮಿಸುವ ಎಲ್ಲ ದೇಶಗಳ ಪ್ರಯಾಣಿಕರು ‘ಏರ್‌ ಸುವಿಧ’(Air Suvidha) ಪೋರ್ಟಲ್‌ನಲ್ಲಿ 72 ಗಂಟೆಗಿಂತ ಹಳೆಯದಲ್ಲದ ನೆಗೆಟಿವ್‌ ವರದಿ(Negative Report) ಅಪ್‌ಲೋಡ್‌ ಮಾಡಬೇಕು. ಜತೆಗೆ ನೆಲದ ಕಾನೂನಿಗೆ ತಕ್ಕಂತೆ ನಡೆದುಕೊಳ್ಳುವುದಾಗಿ ಸ್ವಯಂ ಘೋಷಣಾ ಪತ್ರ ಅಪ್‌ಲೋಡ್‌ ಮಾಡಬೇಕು. ರಾಜ್ಯಕ್ಕೆ ಆಗಮಿಸುವ ವೇಳೆ ಥರ್ಮಲ್‌ ಸ್ಕ್ರೀನಿಂಗ್‌ನಲ್ಲಿ ರೋಗ ಲಕ್ಷಣಗಳು ಪತ್ತೆಯಾದರೆ ಯಾವ ದೇಶದಿಂದ ಬಂದಿದ್ದರೂ ಪರೀಕ್ಷೆ ಮಾಡಿ ಕ್ವಾರಂಟೈನ್‌ ವಿಧಿಸಲಾಗುವುದು. ರೋಗ ಲಕ್ಷಣ ಇಲ್ಲದಿದ್ದರೆ ಸ್ವಯಂ ನಿಗಾದಲ್ಲಿರಲು ಸೂಚಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಇನ್ನು 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕ್ವಾರಂಟೈನ್‌ನಿಂದ ವಿನಾಯಿತಿ ನೀಡಲಾಗಿದೆ.

'Seafood ಮಾರುತ್ತಿದ್ದ ವುಹಾನ್ ಮಹಿಳೆ ಕೊರೋನಾ ವೈರಸ್‌‌ ಮೊದಲ ಸೋಂಕಿತೆ'

ಕೊರೊನಾ ಮಹಾಮಾರಿ (Corona Virus) ಇಡೀ ಜಗತ್ತು ಎಂದು ಕಂಡು ಕೇಳರಿಯದ ಅನುಭವಗಳನ್ನು ನೀಡಿದೆ. 2019ರಲ್ಲಿ ಚೀನಾದ ವುಹಾನ್‌ನಲ್ಲಿ (Chinaʼs Wuhan) ಮೊದಲ ಬಾರಿಗೆ ಕಾಣಿಸಿಕೊಂಡಿದ್ದ ಕೊರೊನಾ ಪ್ರಕರಣ ಎರಡು ವರ್ಷವಾದರೂ ಇನ್ನೂ ಪ್ರಪಂಚದ ಹಲವು ದೇಶಗಳಿಗೆ ಬಾಧಿಸುತ್ತಲೇ ಇದೆ. ಕೊರೊನಾ ವೈರಸ್‌ನ ಮೂಲ ಕಂಡು ಹಿಡಿಯಲು ಈಗಾಗಲೇ ಬಿಲಿಯನ್‌ಗಟ್ಟಲೆ ಹಣ ಹೂಡಿಕೆಯಾಗಿದ್ದು ಈ ನಿಟ್ಟಿನಲ್ಲಿ ವಿಜ್ಞಾನಿಗಳು (scientist) ಸಂಶೋಧನೆಯಲ್ಲಿ ನಿರತರಾಗಿದ್ದಾರೆ. ಈ ಮಧ್ಯೆ ಕೊರೋನಾ ಸೋಂಕಿಗೆ ಒಳಪಟ್ಟ ಮೊದಲ ವ್ಯಕ್ತಿ ವುಹಾನ್‌ ಮಾರುಕಟ್ಟೆಯಲ್ಲಿ ಸಮುದ್ರದ ಆಹಾರ (Sea Food) ಮಾರಾಟ ಮಾಡುತಿದ್ದ ಮಹಿಳೆ (Woman) ಎಂದು ತಿಳಿದು ಬಂದಿದೆ. ಇತ್ತಿಚೆಗೆ ನಡೆದ ಹೊಸ ಅಧ್ಯಯನದದಲ್ಲಿ ಈ ವಿಷಯ ಬಹಿರಂಗವಾಗಿದ್ದು  WHO ನಡೆಸಿದ ತನಿಖೆಯlಲ್ಲಿ ಲೋಪದೋಷಗಳಿವೆ ಎಂದು ಅಧ್ಯಯನ ಹೇಳಿದೆ.
 

Follow Us:
Download App:
  • android
  • ios