ಅಪಾರ್ಟ್‌ಮೆಂಟ್ ನಿರ್ಮಾಣದ ಜಾಗವನ್ನು ಫ್ಲಾಟ್ ಮಾಲೀಕರ ಹೆಸರಿಗೆ ವರ್ಗಾವಣೆಯಾಗದ್ದಕ್ಕೆ ಸಂಬಂಧಿಸಿದಂತೆ ಸದ್ಯ 1972ರಲ್ಲಿ ರೂಪಿಸಲಾದ ಅಪಾಟ್೯ಮೆಂಟ್ ಮಾಲೀಕರ ಕಾಯ್ದೆ ಹಾಗೂ 2016ರ ರೇರಾ ಕಾಯ್ದೆಗಳಿವೆ. ಅವುಗಳನ್ನು ರದ್ದು ಮಾಡಿ, ರಾಜ್ಯಕ್ಕೆ ಅನ್ವಯಿಸುವಂತೆ ಹೊಸ ಅಪಾರ್ಟ್‌ಮೆಂಟ್ ಮಾಲೀಕರ ಕಾಯ್ದೆ ರೂಪಿಸಲು ಈಗಾಗಲೆ ನಿರ್ಧರಿಸಲಾಗಿದೆ: ಡಿ.ಕೆ. ಶಿವಕುಮಾರ್ 

ವಿಧಾನಸಭೆ(ಫೆ.14): ಅಪಾರ್ಟ್‌ಮೆಂಟ್ ನಿರ್ಮಾಣ ಜಾಗದ ಒಡೆತನ ಫ್ಲಾಟ್ ಮಾಲೀಕರಿಗೆ ವರ್ಗಾಯಿ ಸುವಂತೆ ಮಾಡುವುದು ಸೇರಿ ಇನ್ನಿತರ ಸಮ ಸ್ಯೆಗಳ ನಿವಾರಣೆಗೆ ರಾಜ್ಯಕ್ಕೆ ಅನ್ವಯ ವಾಗುವಂತೆ ಹೊಸದಾಗಿ ಅಪಾರ್ಟ್‌ಮೆಂಟ್ ಮಾಲೀಕರ ಕಾಯ್ದೆ ರೂಪಿಸಲಾಗುವುದು ಎಂದು ಉಪಮುಖ್ಯಮಂತ್ರಿ ಶಿವಕುಮಾ‌ರ್ ತಿಳಿಸಿದರು.

ಬೆಂಗಳೂರಿನಲ್ಲಿ ಅಪಾರ್ಟ್‌ಮೆಂಟ್ ನಿರ್ಮಾಣದ ಜಾಗ ಜಮೀನಿನ ಮಾಲೀಕನ ಹೆಸರಿನಲ್ಲಿರಲಿದ್ದು, ಅದು ಅಪಾರ್ಟ್ ಮೆಂಟ್‌ನಲ್ಲಿ ಫ್ಲಾಟ್ ಖರೀದಿಸುವವರ ಹೆಸರಿಗೆ ವರ್ಗಾವಣೆ ಆಗದೆ ಸಮಸ್ಯೆಯಾಗುತ್ತಿದೆ. ಇದಕ್ಕೆ ಪರಿಹಾರ ನೀಡಬೇಕು ಎಂದು ಬಿಜೆಪಿ ಶಾಸಕ ರವಿ ಸುಬ್ರಹ್ಮಣ್ಯ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾ‌ರ್ ಅವರ ಗಮನಕ್ಕೆ ತಂದರು.

20 ಸಾವಿರ ಜನ ವಾಸ ಮಾಡುವ ಚೀನಾದ ಬೃಹತ್ ಅಪಾರ್ಟ್‌ಮೆಂಟ್ ವೀಡಿಯೋ ಸಖತ್ ವೈರಲ್

ಅದಕ್ಕುತ್ತರಿಸಿದ ಡಿ.ಕೆ. ಶಿವಕುಮಾರ್, ಅಪಾರ್ಟ್‌ಮೆಂಟ್ ನಿರ್ಮಾಣದ ಜಾಗವನ್ನು ಫ್ಲಾಟ್ ಮಾಲೀಕರ ಹೆಸರಿಗೆ ವರ್ಗಾವಣೆಯಾಗದ್ದಕ್ಕೆ ಸಂಬಂಧಿಸಿದಂತೆ ಸದ್ಯ 1972ರಲ್ಲಿ ರೂಪಿಸಲಾದ ಅಪಾಟ್೯ಮೆಂಟ್ ಮಾಲೀಕರ ಕಾಯ್ದೆ ಹಾಗೂ 2016ರ ರೇರಾ ಕಾಯ್ದೆಗಳಿವೆ. ಅವುಗಳನ್ನು ರದ್ದು ಮಾಡಿ, ರಾಜ್ಯಕ್ಕೆ ಅನ್ವಯಿಸುವಂತೆ ಹೊಸ ಅಪಾರ್ಟ್‌ಮೆಂಟ್ ಮಾಲೀಕರ ಕಾಯ್ದೆ ರೂಪಿಸಲು ಈಗಾಗಲೆ ನಿರ್ಧರಿಸಲಾಗಿದೆ. ಅದರಲ್ಲಿ ಅಪಾರ್ಟ್‌ಮೆಂಟ್ ನಿರ್ಮಾಣದ ಜಾಗವನ್ನು ಫ್ಲಾಟ್ ಮಾಲೀಕರ ಹೆಸರಿಗೆ ವರ್ಗಾವಣೆ ಮಾಡುವುದು ಸೇರಿ ಹಲವು ಅಂಶಗಳನ್ನು ಸೇರಿಸಲಾಗುತ್ತಿದೆ. ಅದರ ಜತೆಗೆ ಆಸ್ತಿಗಳ ಸಮೀಕ್ಷೆ ಹಾಗೂ ಆಸ್ತಿಗಳ ದಾಖಲೆಗಳ ಡಿಜಿಟಲೀಕರಣ ಮಾಡಲಾಗುತ್ತಿದೆ ಎಂದರು.