Asianet Suvarna News

ಕರ್ನಾಟಕದಲ್ಲಿ ಕೊರೋನಾ: ಇಲ್ಲಿದೆ ಜುಲೈ 15ರ ಅಂಕಿ-ಸಂಖ್ಯೆ

* ಕರ್ನಾಟಕದಲ್ಲಿ ಕೊರೋನಾ ಅಂಕಿ-ಸಂಖ್ಯೆ ಮಾಹಿತಿ 
* ಒಂದೇ ದಿನ 1,977 ಜನರಿಗೆ ಕೊವಿಡ್ ಸೋಂಕು, 48 ಸಾವು
* ಮಾಹಿತಿ ನೀಡಿದ  ರಾಜ್ಯ ಆರೋಗ್ಯ ಇಲಾಖೆ 

New 1977 Coronavirus and 48 deaths In Karnataka On July 15th rbj
Author
Bengaluru, First Published Jul 15, 2021, 9:20 PM IST
  • Facebook
  • Twitter
  • Whatsapp

ಬೆಂಗಳೂರು, (ಜು.15): ರಾಜ್ಯದಲ್ಲಿ ಇಂದು (ಗುರುವಾರ) ಒಂದೇ ದಿನ 1,977 ಜನರಿಗೆ ಕೊವಿಡ್ ಸೋಂಕು ದೃಢಪಟ್ಟಿದ್ದು, 48 ಜನರು ಮೃತಪಟ್ಟಿದ್ದಾರೆ.

ಈ ಮೂಲಕ ಒಟ್ಟಾರೆ ಸೋಂಕಿತರ ಸಂಖ್ಯೆ 28,78,564ಕ್ಕೆ ಏರಿಕೆಯಾಗಿದ್ರೆ, ಮೃತರ ಸಂಖ್ಯೆ 36,037ಕ್ಕೆ ಹೆಚ್ಚಳವಾಗಿದೆ.

ಕರ್ನಾಟಕದಲ್ಲಿ ಅನ್‌ಲಾಕ್‌ 4.0: ಮತ್ತಷ್ಟು ರಿಲೀಫ್‌..!

ಇನ್ನು ಕಳೆದ 24 ಗಂಟೆಗಳಲ್ಲಿ 3,188 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೆ ಗುಣಮುಖವಾದವರ ಸಂಖ್ಯೆ 28,10,121ಕ್ಕೆ ಏರಿದೆ. ಸದ್ಯ 32,383 ಸಕ್ರಿಯ ಪ್ರಕರಣಗಳು ಬಾಕಿ ಇವೆ. 

ಈ ದಿನದ ಕೊರೋನಾ ಪಾಸಿಟಿವಿಟಿ ಪ್ರಮಾಣ ಶೇ. 1.42ರಷ್ಟಿದ್ದರೆ, ಮರಣ ಪ್ರಮಾಣ ಶೇ. 2.42ರಷ್ಟಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

Follow Us:
Download App:
  • android
  • ios