Asianet Suvarna News Asianet Suvarna News

Netaji Birth Anniversary ವಿಧಾನಸೌಧ ಮುಂದಕ್ಕೆ ಬೋಸ್ ಪ್ರತಿಮೆ ಶಿಫ್ಟ್‌, ವರ್ಷವಿಡೀ ನೇತಾಜಿ ಸ್ಮರಣೆ

  • ನೇತಾಜಿ ಕುರಿತ ವಿವಿಧ ಕಾರ‍್ಯಕ್ರಮ ಆಯೋಜನೆ
  • ಬೋಸ್‌ ಕುರಿತು ಕನ್ನಡದಲ್ಲಿ ಪುಸ್ತಕ ಮುದ್ರಣ
  • ಮುಂದಿನ ಜನ್ಮದಿನಾಚರಣೆ ವಿಧಾನಸೌಧ ಮುಂಭಾಗ
     
Netaji Subhash Chandra Bose statue to be shifted to front of Vidhana Soudha says CM Basavaraj Bommai ckm
Author
Bengaluru, First Published Jan 24, 2022, 4:00 AM IST

ಬೆಂಗಳೂರು(ಜ.24):: ಪ್ರಸ್ತುತ ವಿಧಾನಸೌಧದ ಆವರಣದಲ್ಲಿರುವ ನೇತಾಜಿ ಅವರ ಪ್ರತಿಮೆಯನ್ನು(Netaji Statue) ವಿಧಾನಸೌಧದ ಮುಂಭಾಗದ ಸೂಕ್ತ ಜಾಗಕ್ಕೆ ಸ್ಥಳಾಂತರ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(CM Basavaraj Bommai) ಅವರು ತಿಳಿಸಿದರು. ಸೂಕ್ತ ಸ್ಥಳದಲ್ಲಿ ನೇತಾಜಿ ಅವರ ಪ್ರತಿಮೆ ಇರಿಸುವುದು ಅವರಿಗೆ ನಾವು ಸಲ್ಲಿಸಬೇಕಾದ ಗೌರವ. ಈ ಬಗ್ಗೆ ಕೂಡಲೇ ತೀರ್ಮಾನ ಕೈಗೊಳ್ಳಲಾಗುವುದು. ನೇತಾಜಿ ಅವರ ಮುಂದಿನ ಜನ್ಮದಿನಾಚರಣೆಯನ್ನು(netaji birth anniversary) ವಿಧಾನಸೌಧದ ಮುಂಭಾಗದಲ್ಲಿ ಮಾಡಲಾಗುವುದು ಎಂದರು.

ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಸ್ವಾತಂತ್ರ್ಯ ಸೇನಾನಿ ಸುಭಾಷ್‌ ಚಂದ್ರ ಬೋಸ್‌ ಅವರ ಕುರಿತು ಚರ್ಚೆ, ಭಾಷಣ, ವಸ್ತುಪ್ರದರ್ಶನ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ವರ್ಷ ಪೂರ್ತಿ ಅವರ 125ನೇ ಜನ್ಮ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

Subhash Chandra Bose ನೇತಾಜಿ ಆಜಾದ್ ಹಿಂದ್ ಫೌಜ್‌ನಿಂದ ಭಾರತಕ್ಕೆ ಸ್ವಾತಂತ್ರ್ಯ, ಗಾಂಧಿಯಿಂದಲ್ಲ, ಬೋಸ್ ಸಂಬಂಧಿ!

ಸುಭಾಷ್‌ ಚಂದ್ರ ಬೋಸ್‌ ಅವರ ಜನ್ಮದಿನಾಚರಣೆಯ ಅಂಗವಾಗಿ ಭಾನುವಾರ ವಿಧಾನಸೌಧದ(Vidhana soudha) ಆವರಣದಲ್ಲಿರುವ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ನೇತಾಜಿ ಅವರ ಧ್ಯೇಯ, ಆದರ್ಶ, ದೇಶಭಕ್ತಿ ಹಾಗೂ ತ್ಯಾಗ ಮನೋಭಾವವನ್ನು ಇಂದಿನ ಯುವಕರಲ್ಲಿ ಬಿತ್ತಬೇಕು. ಈ ಹಿನ್ನೆಲೆಯಲ್ಲಿ ನಮ್ಮ ಸರ್ಕಾರ ನೇತಾಜಿ ಅವರ 125ನೇ ಜನ್ಮ ದಿನಾಚರಣೆಯನ್ನು ವರ್ಷಪೂರ್ತಿ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಿದೆ. ಶಾಲಾ- ಕಾಲೇಜುಗಳಲ್ಲಿ ನೇತಾಜಿ ಅವರ ಕುರಿತು ಚರ್ಚೆ, ವಸ್ತುಪ್ರದರ್ಶನ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಮತ್ತೊಮ್ಮೆ ಸುಭಾಷ್‌ ಚಂದ್ರ ಬೋಸ್‌ ಅವರ ಧ್ಯೇಯ- ಆದರ್ಶಗಳ ಪರಿಚಯವನ್ನು ಇಂದಿನ ಮಕ್ಕಳಿಗೆ ಮಾಡಿಕೊಡಲಾಗುವುದು. ಅಲ್ಲದೇ ನೇತಾಜಿ ಅವರ ಬಗ್ಗೆ ವಿವಿಧ ಲೇಖಕರು ಬರೆದ ಕೃತಿಗಳನ್ನು ಕನ್ನಡದಲ್ಲಿ ಮುದ್ರಣ ಮಾಡಿ ಎಲ್ಲಾ ಯುವಕರಿಗೆ ಮುಟ್ಟಿಸುವ ಕೆಲಸ ಮಾಡಲಾಗುವುದು.

Subhas Chandra Bose: 76 ವರ್ಷಗಳ ಬಳಿಕವೂ ನಿಗೂಢ: ಇನ್ನೂ ಬಗೆಹರಿದಿಲ್ಲ ನೇತಾಜಿ ಸಾವಿನ ರಹಸ್ಯ?

ಸುಭಾಷ್‌ ಚಂದ್ರ ಬೋಸ್‌ ಅವರು ಬ್ರಿಟಿಷರ ವಿರುದ್ಧ ಸೈನ್ಯವನ್ನು ಕಟ್ಟಿಹೋರಾಟ ಮಾಡಿದ ಅಪ್ರತಿಮ ನಾಯಕ. ‘ನನಗೆ ಸ್ವಲ್ಪ ರಕ್ತವನ್ನು ನೀಡಿ, ನಿಮಗೆ ಸ್ವಾತಂತ್ರ್ಯ ಕೊಡುವೆ ಎನ್ನುವ ಕರೆ ನೀಡಿ’ ಯುವಕರಿಗೆ ಪ್ರೇರಣೆ ನೀಡಿದವರು. ಆಜಾದ್‌ ಹಿಂದ್‌ ಫೌಜ್‌ನಲ್ಲಿ(Azad Hind Fauj) ಸುಮಾರು 60 ಸಾವಿರ ಯುವಕರನ್ನು ಸೇರ್ಪಡೆ ಮಾಡಿ, ಸ್ವಾತಂತ್ರ್ಯ ಹೋರಾಟಕ್ಕೆ ಭದ್ರ ಬುನಾದಿ ಹಾಕಿದರು. ಭಾರತ ಸ್ವಾತಂತ್ರ್ಯ ಪಡೆಯುವಲ್ಲಿ ಅವರ ಪಾತ್ರ ದೊಡ್ಡದು. ಅವರ ಸಾವು ಇಂದಿಗೂ ನಿಗೂಢ. ಆದರೆ, ವಿಶ್ವಮಾನ್ಯರಾದ ಅವರು ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ಜೀವಂತವಾಗಿದ್ದಾರೆ ಎಂದು ಸ್ಮರಿಸಿದರು.

ಸುಭಾಷ್‌ ಚಂದ್ರ ಬೋಸ್‌ ಅವರ ಬಗ್ಗೆ ಇರುವ ಪ್ರೀತಿ, ವಿಶ್ವಾಸದಿಂದ ಕಟ್ಟಿರುವ ಹಲವಾರು ಸಂಘ- ಸಂಸ್ಥೆಗಳ ಉದ್ದೇಶ ಹಾಗೂ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಲಿದೆ ಎಂದು ಭರವಸೆ ನೀಡಿದರು. ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಮತ್ತು ಇತರರು ಈ ಸಂದರ್ಭದಲ್ಲಿ ಬೋಸ್‌ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಇದೇ ಸಂದರ್ಭದಲ್ಲಿ ಸಿಎಂ ಪ್ರತಿಜ್ಞಾ ವಿಧಿ ಬೋಧಿಸಿದರು.

 ಬ್ಯಾಡಗಿಯಲ್ಲಿ ನೇತಾಜಿ ಸ್ಮರಣೆ:
ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ಸುಭಾಸ್‌ ಚಂದ್ರ ಬೋಸ್‌ ಅವರ ಘೋಷಣೆ ‘ನಿಮ್ಮ ರಕ್ತವನ್ನು ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ಕೊಡಿಸಬಲ್ಲೇ’ ಎಂಬ ಮಾತು ಬಹುತೇಕ ಬ್ರಿಟಿಷ್‌ ಅಧಿಕಾರಿಗಳ ನಿದ್ದೆ ಕೆಡಿಸಿತ್ತು. ಅಂತಹ ಮಹಾನ್‌ ಧೈರ್ಯಶಾಲಿ ನಾಯಕನನ್ನು ಪಡೆದ ನಾವೇ ಧನ್ಯರು ಎಂದು ತಹಸೀಲ್ದಾರ್‌ ರವಿಕುಮಾರ ಕೊರವರ ಹೇಳಿದರು. ಸುಭಾಸ್‌ಚಂದ್ರ ಬೋಸ್‌ ಅವರ 125ನೇ ಜಯಂತ್ಯುತ್ಸವ ಅಂಗವಾಗಿ ಪುರಸಭೆ ಆವರಣದಲ್ಲಿರುವ ಅವರ ಮೂರ್ತಿಗೆ ಪುಷ್ಪಾರ್ಪಣೆ ಸಲ್ಲಿಸಿ ಅವರು ಮಾತನಾಡಿದರು. ದೇಶದ ಸ್ವಾತಂತ್ರ್ಯವನ್ನು ಸಂಘರ್ಷದಿಂದಲೇ ಪಡೆದುಕೊಳ್ಳ ಬೇಕೆಂಬ ಉದ್ದೇಶ ಹೊಂದಿದ್ದ ಬೋಸ್‌, ಅದಕ್ಕಾಗಿ ಜರ್ಮನಿಯ ನಾಜಿ ಹಾಗೂ ಜಪಾನ್‌ ಫ್ಯಾಸಿಸ್ಟ್‌ಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದರು. ಆದರೆ ಅವರ ಆಸೆಗಳು ಕೈಗೂಡುವ ಮುನ್ನವೇ ಪ್ರಶ್ನಾರ್ಥಕ ಸಾವನ್ನಪ್ಪಿದ್ದಾಗಿ ತಿಳಿಸಿದರು.
 

Follow Us:
Download App:
  • android
  • ios