ಬೆಂಗಳೂರು(ನ.26): ರಾಜ್ಯ ಸರ್ಕಾರಕ್ಕೆ ನಿಗಮ ರಚನೆಯ ತಲೆ ಬಿಸಿ ಇನ್ನೂ ನಿಂತಿಲ್ಲ. ಹೌದು, ಮರಾಠಾ, ಲಿಂಗಾಯತ ವೀರಶೈವ ನಿಗಮ ರಚನೆಗೆ ಸರ್ಕಾರ ಅನುಮೋದನೆ ನೀಡಿದ ಬೆನ್ನಲ್ಲೇ ಬೇರೆ ಬೇರೆ ಸಮುದಾಯದಗಳಿಂದ ತಮ್ಮ ಸಮುದಾಯಕ್ಕೂ ನಿಗಮ ರಚನೆ ಮಾಡಿ ಎಂಬ ಒತ್ತಡ ಹೆಚ್ಚಾಗುತ್ತಿದೆ.

ಈಗಾಗಲೇ ಮರಾಠ ನಿಗಮ ರಚನೆ ಮಾಡಿದ್ದರಿಂದ ಕರ್ನಾಟಕ ಬಂದ್‌ಗೆ ಕನ್ನಡ ಪರ ಸಂಘಟನೆಗಳು ಕರೆ ಕೊಟ್ಟಿವೆ. ಇದೆಲ್ಲದರ ನಡುವೆ ನೇಕಾರ ಸಮುದಾಯದಿಂದಲೂ ತಮಗೂ ನೇಕಾರ ಅಭಿವೃದ್ಧಿ ನಿಗಮ ರಚನೆ ಮಾಡಿ ಎಂದು ಒತ್ತಡ ಹೇರುತ್ತಿವೆ. 

ಮರಾಠ ನಿಗಮ ವಿರೋಧಿಸಿ ಡಿ. 5 ರಂದು ಕರ್ನಾಟಕ ಬಂದ್

ಇಂದು ನೇಕಾರ ಸಮುದಾಯದ ಸ್ವಾಮಿಜೀಗಳು ಮತ್ತು ಜನಪ್ರತಿನಿದಿಳಿಂದ ಸಿಎಂ ಯಡಿಯೂರಪ್ಪ ಅವರನ್ನ ಭೇಟಿ ಮಾಡಿ ಮನವಿ ಸಲ್ಲಿಸಲು ಸಜ್ಜಾಗಿದ್ದಾರೆ. ನೇಕಾರ ಅಭಿವೃದ್ಧಿ ನಿಗಮದ ಬಗ್ಗೆ ಸಿಎಂ ಜೊತೆ ಚರ್ಚೆ ನಡೆಸಲು ಸಂಜೆ ಗೃಹ ಕಚೇರಿಯಲ್ಲಿ ಸಮಯ ಕೂಡ ನಿಗದಿಯಾಗಿದೆ.

ಸಂಜೆ 5.45 ಕ್ಕೆ ಗೃಹ ಕಚೇರಿ ಕೃಷ್ಣಾದಲ್ಲಿ ನೇಕಾರ ಸಮುದಾಯದ ನಿಯೋಗ ಸಿಎಂ ಯಡಿಯೂರಪ್ಪ ಅವರನ್ನ ಭೇಟಿಯಾಗಲಿದ್ದಾರೆ. ಭೇಟಿ ವೇಳೆ ನೇಕಾರ ಅಭಿವೃದ್ಧಿ ನಿಗಮ ರಚನೆ ಬಗ್ಗೆ ಸಮುದಾಯದ ಮುಖಂಡರು ಒತ್ತಡ ಹಾಕಲಿದ್ದಾರೆ ಎಂದು ಹೇಳಲಾಗುತ್ತಿದೆ.