Asianet Suvarna News Asianet Suvarna News

Nature In Focus: 2021ರ ಫೋಟೋಗ್ರಫಿ ಮತ್ತು ಫಿಲ್ಮ್‌ ಸ್ಪರ್ಧೆ ಫಲಿತಾಂಶ ಪ್ರಕಟ

* ‘ನೇಚರ್‌ ಇನ್‌ ಫೋಕಸ್‌’ 2021ರ ಛಾಯಾಗ್ರಹಣ ಮತ್ತು ಫಿಲ್ಮ್‌ ಸ್ಪರ್ಧೆ 
* 2021ರ ಛಾಯಾಗ್ರಹಣ ಮತ್ತು ಫಿಲ್ಮ್‌ ಸ್ಪರ್ಧೆ ಫಲಿತಾಂಶ ಪ್ರಕಟ
* ನವೆಂಬರ್‌ 19ರಿಂದ 22ರವರೆಗೆ ಆಯೋಜಿಸಿದ್ದ ಛಾಯಾಗ್ರಹಣ ಮತ್ತು ಫಿಲ್ಮ್‌ ಸ್ಪರ್ಧೆ

Nature In Focus announces 2021 photography and film competition winners rbj
Author
Bengaluru, First Published Nov 23, 2021, 4:57 PM IST
  • Facebook
  • Twitter
  • Whatsapp

ಬೆಂಗಳೂರು, (ನ.23):‘ನೇಚರ್‌ ಇನ್‌ ಫೋಕಸ್‌’ (Nature In Focus) ಛಾಯಾಗ್ರಹಣ ಮತ್ತು ಫಿಲ್ಮ್‌ ಸ್ಪರ್ಧೆ (2021 photography and film ಛompetition ) 2021ರ ಫಲಿತಾಂಶ ಹೊರಬಿದ್ದಿದೆ. 

ಮೊಹಮ್ಮದ್‌ ಮುರಾದ್‌, ಪ್ರಿಯಾಂಕಾ ರಾಹುತ್‌ ಮಿತ್ರ, ಪ್ರಥಮೇಶ್‌ ಗಡೇಕರ್‌, ಲಕ್ಷಿತಾ ಕರುಣಾರತ್ನ, ಮಹ್ಸಿನ್‌ ಖಾನ್, ಅನಘಾ ಮೋಹನ್‌ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಯ (Awards) ಗರಿ ಮುಡಿಗೇರಿಸಿಕೊಂಡಿದ್ದಾರೆ. 

4 ವರ್ಷದ ಪೋರನಿಂದ ಶ್ಯಾಡೋ ಕಲಾಕೃತಿ, ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ನಲ್ಲಿ ಸಿಕ್ತು ಸ್ಥಾನ!

‘ನೇಚರ್‌ ಇನ್‌ ಫೋಕಸ್‌’ (Nature In Focus) ನವೆಂಬರ್‌ 19ರಿಂದ 22ರವರೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಛಾಯಾಗ್ರಹಣ ಮತ್ತು ಫಿಲ್ಮ್‌ ಸ್ಪರ್ಧೆಯ ವಿಜೇತರ  (2021 Photography And Film Competition Winners) ಹೆಸರು ಘೋಷಿಸಿದೆ. ಈ ಕಾರ್ಯಕ್ರಮವನ್ನು ಯೂಟ್ಯೂಬ್‌ (youtube) ಲೈವ್‌ನಲ್ಲಿ ನೇರ ಪ್ರಸಾರ ಮಾಡಲಾಗಿತ್ತು. 

ಕಾರ್ಪೋರೇಟ್‌ ಜಗತ್ತಿನಲ್ಲಿದ್ದುಕೊಂಡೇ ವನ್ಯಜೀವಿ ಮತ್ತು ಛಾಯಾಗ್ರಣದ ಬಗ್ಗೆ  ವಿಶೇಷ ಒಲವು, ಪರಿಣಿತಿ ಹೊಂದಿರುವ ರೋಹಿತ್‌ ವರ್ಮಾ ಹಾಗೂ ‘ವೈಲ್ಡ್‌ ಕರ್ನಾಟಕ’ ಖ್ಯಾತಿಯ ವನ್ಯಜೀವಿ ಛಾಯಾಗ್ರಾಹಕ( Wildlife photography) ಕಲ್ಯಾಣ್‌ ವರ್ಮಾ ಈ ಸ್ಪರ್ಧೆಯ ಆಯೋಜಕರು. 

40 ದೇಶಗಳ 2000ಕ್ಕೂ ಹೆಚ್ಚು ಛಾಯಾಗ್ರಾಹಕರಿಂದ ಸುಮಾರು 18,000 (ಚಿತ್ರ) ಅರ್ಜಿ ಸ್ವೀಕರಿಸಲಾಗಿತ್ತು. ಈ ಪೈಕಿ ಅತ್ಯುತ್ತಮ ಚಿತ್ರಗಳನ್ನು ಆಯ್ಕೆ ಮಾಡಿ ಪ್ರಶಸ್ತಿ ಘೋಷಿಸಲಾಗಿದೆ.  ಈ ವರ್ಷದ ಪ್ರಶಸ್ತಿಗಳಿಗೆ ಅರ್ಜಿ ಸಲ್ಲಿಸಲು ಜೂನ್ 30ರ ಗಡುವು ನೀಡಲಾಗಿತ್ತು. 

‘ನೇಚರ್ ಇನ್‌ ಫೋಕಸ್‌’ ಫಿಲ್ಮ್‌ ಸ್ಪರ್ಧೆಯ 3 ವಿಭಾಗಗಳು, ಮೊಬೈಲ್ ಫೋನ್‌ಗಳಲ್ಲಿ ಸೆರೆಹಿಡಿಯಲಾದ ವನ್ಯಜೀವಿ ದೃಶ್ಯಗಳಿಗೆ ಮಾತ್ರ ಮೀಸಲಾಗಿದ್ದವು ಎಂಬುದೇ ವಿಶೇಷ.  ನೈಸರ್ಗಿಕ ಇತಿಹಾಸ ಮತ್ತು ಸಂರಕ್ಷಣೆ ಎಂಬ  ಎರಡು ಉಪ-ವರ್ಗಗಳಲ್ಲಿ ಸ್ಪರ್ಧಿಸಲು ವೃತ್ತಿಪರ ಮತ್ತು ಉದಯೋನ್ಮುಖ ಚಲನಚಿತ್ರ ನಿರ್ಮಾಪಕರಿಗೆ ಅವಕಾಶ ನೀಡಲಾಗಿತ್ತು.

ಪ್ರಶಸ್ತಿ ಪುರಸ್ಕೃತರಿವರು:   
ಅನಿಮಲ್ ಪೋರ್ಟ್ರೇಟ್ಸ್ ವಿಭಾಗ- ಮೊಹಮ್ಮದ್ ಮುರಾದ್
ಅನಿಮಲ್ ಬಿಹೇವಿಯರ್ ವಿಭಾಗ-ಪ್ರಿಯಾಂಕಾ ರಾಹುತ್ ಮಿತ್ರ
ಕ್ರಿಯೇಟಿವ್ ನೇಚರ್ ಛಾಯಾಗ್ರಹಣ ವಿಭಾಗ- ಪ್ರಥಮೇಶ್ ಗಡೇಕರ್, 
ವೈಲ್ಡ್‌ಸ್ಕೇಪ್‌ ಅಂಡ್‌ ಅನಿಮಲ್ಸ್‌ ಇನ ಹ್ಯಾಬಿಟೆಂಟ್‌ ವಿಭಾಗ- ಲಕ್ಷಿತಾ ಕರುಣಾರತ್ನ
ಕನ್ಸರ್ವೇಶನ್ ಇಶ್ಯೂಸ್ ವಿಭಾಗ- ಮಹಿನ್ ಖಾನ್ 
ಯಂಗ್ ಫೋಟೋಗ್ರಾಫರ್ ಪ್ರಶಸ್ತಿ- ಅನಘಾ ಮೋಹನ್ (15 ವರ್ಷ)

ವೃತ್ತಿಪರರ ವಿಭಾಗ
ಸಂರಕ್ಷಣಾ ಚಲನಚಿತ್ರ ವರ್ಗದಲ್ಲಿ ನಿಖಿಲ್ ತಾಳೆಗಾಂವ್ಕರ್ ಮತ್ತು ಸಂದೀಪ್ ಧುಮಾಲ್ ಅವರು ತಮ್ಮ ‘ಖೀ (ನಾಯಿಗಳು)’ ಚಿತ್ರಕ್ಕಾಗಿ ಪ್ರಶಸ್ತಿ ಪಡೆದಿದ್ದಾರೆ.  'ಲಾಸ್ಟ್ ಕಿಂಗ್ಸ್ ಆಫ್ ಬಯೋಕೋ' ಚಿತ್ರಕ್ಕಾಗಿ ಗುಲೋ ಫಿಲ್ಮ್ ಪ್ರೊಡಕ್ಷನ್ಸ್ ಮತ್ತು ಸ್ಟುಡಿಯೋ ಹ್ಯಾಂಬರ್ಗ್ ಡಾಕ್‌ಲೈಟ್ಸ್‌ನ ಬ್ಯಾನರ್‌ಗಳ ಅಡಿಯಲ್ಲಿ ಆಲಿವರ್ ಗೊಯೆಟ್ಜ್ಲ್ ಅವರು ನ್ಯಾಚುರಲ್ ಹಿಸ್ಟರಿ ಚಿತ್ರ ವಿಭಾಗದ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.   

ಉದಯೋನ್ಮುಖ ಪ್ರತಿಭೆ ವಿಭಾಗ
  ತಿರುಪುರ್ ನೇಚರ್ ಸೊಸೈಟಿ, ಫ್ರಾನ್ಸೆಸ್ಕಾ ಬ್ರಿಟೊಲ್ ಮತ್ತು ಸವಿತಾ ಮತ್ತು ಶುಭಂ ಸಿಂಗ್ ಬಾಘೆಲ್ ನಿರ್ಮಿಸಿರುವ  ‘ಕಲಿರು’ ಚಿತ್ರಕ್ಕಾಗಿ ಜೆಸ್ವಿನ್ ಕಿಂಗ್ಸ್ಲಿ ಮತ್ತು ಸಂತೋಷ್ ಕೃಷ್ಣನ್ ಸಂರಕ್ಷಣಾ ಚಿತ್ರ ವಿಭಾಗದಲ್ಲಿ ಪ್ರಶಸ್ತಿ ಪಡೆದಿದ್ದಾರೆ. ನ್ಯಾಚುರಲ್ ಹಿಸ್ಟರಿ ಚಿತ್ರ ವಿಭಾಗದಲ್ಲಿ ಕುನಾಲ್ ಷಾ, 'ಸವನ್ನಾ ವಾರಿಯರ್ಸ್' ಚಿತ್ರಕ್ಕಾಗಿ ಪ್ರಶಸ್ತಿ ಸ್ವೀಕರಿಸಿದರು.ಸ್ವಯಂ ಥಕ್ಕರ್‌ ಅವರ 'ಆನ್‌ ಅನ್‌ಯೂಶಿಯಲ್‌ ಸೈಟ್‌' ಗೆ 'ವೈಲ್ಡ್ ಮೊಮೆಂಟ್' ಪ್ರಶಸ್ತಿ ಸಂದಿದೆ.

ಜ್ಯೂರಿ ಕ್ಯುರೇಟರ್ ಹಾಗೂ 'ನೇಚರ್ ಇನ್‌ ಫೋಕಸ್‌' ಸಲಹಾ ಮಂಡಳಿ ಸದಸ್ಯರಾಗಿರುವ ವನ್ಯಜೀವಿ ಚಲನಚಿತ್ರ ನಿರ್ಮಾಪಕರಾದ ಸಾರಾ ಈ ಕಾರ್ಯಕ್ರಮ ನಿರೂಪಿಸಿದರು. ಪ್ರಶಸ್ತಿಗೆ ಆಯ್ಕೆಯಾದ ಚಿತ್ರಗಳು ಮತ್ತು ಆಯ್ಕೆ ಹಿಂದಿನ ಕಾರಣಗಳ ಬಗ್ಗೆ ತೀರ್ಪುಗಾರರ ಮಂಡಳಿಯ 7 ಸದಸ್ಯರು ಕಾರ್ಯಕ್ರಮದಲ್ಲಿ ಮಾತನಾಡಿದರು.

ನೇಚರ್‌ ಇನ್‌ಫೋಕಸ್‌ ಮುಖ್ಯಸ್ಥರ ಮಾತು
"ನೇಚರ್ ಇನ್‌ಫೋಕಸ್‌' ಫೋಟೋಗ್ರಫಿ ಅಂಡ್‌ ಫಿಲ್ಮ್‌ ಸ್ಪರ್ಧೆಯನ್ನು, ಕೇವಲ ಸ್ಪರ್ಧೆಗೆ ಸೀಮಿತಗೊಳಿಸಲಾಗದು. ಕ್ಯಾಮರಾದಲ್ಲಿ ಬೆರಗು ಸೃಷ್ಟಿಸುವವರಿಗೆ ಇದು ಪ್ರೇರಣೆಯಾಗಲಿದೆ. ಚೌಕಟ್ಟಿನ ಆಚೆಗೆ ಚಿಂತಿಸುವ ಜನರು ತಮ್ಮ ಚಿತ್ರಗಳ ಮೂಲಕ ವಿಶಿಷ್ಟವಾಗಿ ಗುರತಿಸಿಕೊಳ್ಳುವುದಲ್ಲದೇ, ಬದಲಾವಣೆಗೆ ಕಾರಣರಾಗುತ್ತಾರೆ ಎಂಬುದು ಈ ಸ್ಪರ್ಧೆಯಿಂದ ಸ್ಪಷ್ಟವಾಗಿದೆ. ವರ್ಷದಿಂದ ವರ್ಷಕ್ಕೆ ಸ್ಪರ್ಧಿಗಳ ಸಂಖ್ಯೆ ಏರುತ್ತಲೇ ಇದ್ದು, ಕೊವಿಡ್‌ ಸಂಕಷ್ಟ ಕಲಾವಿದರ ಉತ್ಸಾಹಕ್ಕೆ ಅಡ್ಡಿ ಆಗಿಲ್ಲ ಎಂಬುದೇ ಸಮಾಧಾನಕರ ವಿಷಯ. ಈ ಸ್ಪರ್ಧೆಗೆ ದೇಶದಿಂದ  ಮಾತ್ರವಲ್ಲದೇ, ವಿಶ್ವದ ನಾನಾ ಭಾಗಗಳಿಂದ ಅರ್ಜಿಗಳು ಬಂದಿದ್ದವು. ಹಾಗಾಗಿ ಇದು ನಿಜವಾದ ಅಂತಾರಾಷ್ಟ್ರೀಯ ಸ್ಪರ್ಧೆ ಎಂದು ನೇಚರ್‌ ಇನ್‌ಫೋಕಸ್‌ ಮುಖ್ಯಸ್ಥ ರೋಹಿತ್‌ ವರ್ಮಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 'ನೇಚರ್ ಇನ್‌ ಫೋಕಸ್‌' ಛಾಯಾಗ್ರಹಣ ಮತ್ತು ಚಲನಚಿತ್ರ ಸ್ಪರ್ಧೆಯ ವಿಜೇತರ ಚಿತ್ರಗಳ ಲಿಂಕ್‌ ಕ್ಲಿಕ್‌ ಮಾಡಿ 
ಲಿಂಕ್‌: https://drive.google.com/drive/u/0/folders/1mn0sBnnSUBhveGBn5MHDZbwqdOwQPKqe

Follow Us:
Download App:
  • android
  • ios