ಬೆಂಗಳೂರು(ಜ. 12) ಉನ್ನತ ಶಿಕ್ಷಣ ಸಚಿವ, ಡಿಸಿಎಂ ಡಾ. ಸಿ.ಎನ್.ಅಶ್ವಥ್ ನಾರಾಯಣ  ಟ್ವಿಟರ್ ಮೂಲಕ ನಮ್ಮ-ನಿಮ್ಮ ಎಲ್ಲರ ಪ್ರಶ್ನೆಗೆ ಉತ್ತರಿಸಲಿದ್ದಾರೆ.

ಟ್ವಿಟರ್ ನಲ್ಲಿಂದು(ಜ.12)  ಅಂದರೆ ಭಾನುವಾರ ಸಂಜೆ 7 ಗಂಟೆಗೆ  ನಿಮ್ಮ ಮುಂದೆ ಬರಲಿದ್ದೇನೆ ಎಂದು ತಿಳಿಸಿದ್ದಾರೆ. ನಿಮ್ಮ ಪ್ರಶ್ನೆಗಳನ್ನು ನನಗೆ ಮೊದಲೇ ಕೇಳಬಹುದು  ಎಂದು ತಿಳಿಸಿದ್ದಾರೆ.

ರಾಷ್ಟ್ರೀಯ ಯುವ ದಿನ: ಪ್ರಧಾನಿ ಮೋದಿ ಭಾಷಣ

ಉನ್ನತ ಶಿಕ್ಷಣ ಮತ್ತು ಯುವಜನತೆಯ ಮುಂದಿನ ಸವಾಲುಗಳ ಕುರಿತು ಪ್ರಶ್ನೆ ಕೇಳಬಹುದು. #AskDrAshwath  ಹ್ಯಾಶ್ ಟ್ಯಾಗ್ ಮೂಲಕ ಬಿರಬಿರನೇ ನಿಮ್ಮ ಪ್ರಶ್ನೆ ಡ್ರಾಪ್ ಮಾಡಿ.

ಈಗಾಗಲೇ ಡಿಸಿಎಂ ಅವರ ಟ್ವಿಟರ್ ಖಾತೆ ನೂರಾರು ಪ್ರಶ್ನೆಗಳಿಂದ ಭರ್ತಿಯಾಗಿದೆ. ಅನೇಕ ಸಲಹೆ-ಸೂಚನೆಗಳು ಹರಿದು ಬಂದಿವೆ. ನಿರುದ್ಯೋಗ, ಉನ್ನತ ಶಿಕ್ಷಣ ಎದುರಿಸುತ್ತಿರುವ ಸವಾಲುಗಳು, ಭಾಷೆ-ಅಭಿಮಾನ..ಹೀಗೆ ಸಾಲು ಸಾಲು ಪ್ರಶ್ನೆಗಳ ಮೂಟೆ ಇದ್ದು ಡಿಸಿಎಂ ಏನೆಲ್ಲಾ ಉತ್ತರ ಕೊಡ್ತಾರೆ ನೋಡಬೇಕು.