ಕೆಎಸ್ಆರ್ಟಿಸಿಗೆ ಚೊಚ್ಚಲ 'ಇವಿ ಪವರ್ ಪ್ಲಸ್' ಬಸ್ಗೆ ರಾಷ್ಟ್ರೀಯ ಪ್ರಶಸ್ತಿ: ಸಿಎಂ ಪ್ರಶಂಸೆ
ಕೆಎಸ್ಆರ್ಟಿಸಿ ಚೊಚ್ಚಲ ವಿದ್ಯುತ್ ಚಾಲಿತ ಬಸ್ ಸೇವೆಯಾದ ಇವಿ ಪವರ್ ಪ್ಲಸ್ಗೆ ವಿಶ್ವ ತಯಾರಿಕೆದಾರರ ಕಾಂಗ್ರೆಸ್ ಸ್ಥಾಪಿಸಿರುವ 10ನೇ ಆವೃತ್ತಿಯ ರಾಷ್ಟ್ರೀಯ ನಾಯಕತ್ವ ಹಾಗೂ ವಿದ್ಯುತ್ ವಾಹನಗಳ ಉಪಕ್ರಮಗಳ ಪ್ರಶಸ್ತಿ ಲಭಿಸಿದೆ.

ಬೆಂಗಳೂರು (ಸೆ.15): ಕೆಎಸ್ಆರ್ಟಿಸಿ ಚೊಚ್ಚಲ ವಿದ್ಯುತ್ ಚಾಲಿತ ಬಸ್ ಸೇವೆಯಾದ ಇವಿ ಪವರ್ ಪ್ಲಸ್ಗೆ ವಿಶ್ವ ತಯಾರಿಕೆದಾರರ ಕಾಂಗ್ರೆಸ್ ಸ್ಥಾಪಿಸಿರುವ 10ನೇ ಆವೃತ್ತಿಯ ರಾಷ್ಟ್ರೀಯ ನಾಯಕತ್ವ ಹಾಗೂ ವಿದ್ಯುತ್ ವಾಹನಗಳ ಉಪಕ್ರಮಗಳ ಪ್ರಶಸ್ತಿ ಲಭಿಸಿದೆ. ನಗರದ ತಾಜ್ ಹೋಟೆಲ್ನಲ್ಲಿ ವಿಶ್ವ ತಯಾರಿಕೆದಾರರ ಕಾಂಗ್ರೆಸ್ ಸ್ಥಾಪಿಸಿರುವ 10ನೇ ಆವೃತ್ತಿಯ ರಾಷ್ಟ್ರೀಯ ನಾಯಕತ್ವ ಹಾಗೂ ವಿದ್ಯುತ್ ವಾಹನಗಳ ಉಪಕ್ರಮಗಳ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.
ಕೆಎಸ್ಆರ್ಟಿಸಿ ಪರಿಚಯಿಸಿರುವ ಅಂತರ್ನಗರ ಎಲೆಕ್ಟ್ರಿಕ್ ಬಸ್ ಉಪಕ್ರಮಕ್ಕಾಗಿ ರಾಷ್ಟ್ರೀಯ ನಾಯಕತ್ವ ಹಾಗೂ ವಿದ್ಯುತ್ ವಾಹನಗಳ ಉಪಕ್ರಮಗಳ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಗುರ್ಗಾಂವ್ನ ಅಡ್ವಾಂಟೇಜ್ ಕ್ಲಬ್ನ ಸಿಇಒ ಹಾಗೂ ಸಹ ಸಂಸ್ಥಾಪಕಿ ಸ್ಮಿತಿ ಭಟ್ ದಿಯೋರ 10ನೇ ಆವೃತ್ತಿಯ ರಾಷ್ಟ್ರೀಯ ನಾಯಕತ್ವ ಹಾಗೂ ವಿದ್ಯುತ್ ವಾಹನಗಳ ಉಪಕ್ರಮಗಳ ಉತ್ತಮ ವರ್ಷದ ಅಂತರನಗರ ಎಲೆಕ್ಟ್ರಿಕ್ ಬಸ್ - ಇವಿ ಪವರ್ ಪ್ಲಸ್ ಬಸ್ಗೆ ಪ್ರಶಸ್ತಿ ಪ್ರದಾನ ಮಾಡಿದರು. ನಿಗಮದ ಅಧಿಕಾರಿಗಳಾದ ಎನ್.ಕೆ. ಬಸವರಾಜು, ಜಿ. ಅಂತೋಣಿ ಜಾರ್ಜ್ ಹಾಗೂ ಶಿವಕುಮಾರ್ ಜಂಟಿಯಾಗಿ ಪ್ರಶಸ್ತಿಯನ್ನು ನಿಗಮದ ಪರವಾಗಿ ಸ್ವೀಕರಿಸಿದರು.
ಚೈತ್ರಾ ಕುಂದಾಪುರ ಗ್ಯಾಂಗ್ ರೀತಿಯಲ್ಲೇ ಟಿಕೆಟ್ಗಾಗಿ ಲಕ್ಷ ಲಕ್ಷ ಕಳೆದುಕೊಂಡ ಕೊಪ್ಪಳದ ಬಿಜೆಪಿ ಮುಖಂಡ
ಈ ಬಗ್ಗೆ ಸಿಎಂ ಆಫ್ ಕರ್ನಾಟಕ ಟ್ವೀಟರ್‌ನಲ್ಲಿ, ರಾಜ್ಯದ ಮೂಲೆ ಮೂಲೆಗಳಿಗೆ ಸಂಪರ್ಕ ಕಲ್ಪಿಸುವ ನಾಡಿನ ಹೆಮ್ಮೆಯ ಕೆ.ಎಸ್.ಆರ್.ಟಿ.ಸಿ ಸಾರಿಗೆ ಸಂಸ್ಥೆಯಲ್ಲಿ ಎಲೆಕ್ಟ್ರಿಕ್ ಬಸ್ ಬಳಕೆಗೆ ಸರ್ಕಾರ ನೀಡುತ್ತಿರುವ ವ್ಯಾಪಕ ಉತ್ತೇಜನದ ಫಲವಾಗಿ ವರ್ಲ್ಡ್ ಮ್ಯಾನುಫ್ಯಾಕ್ಚರಿಂಗ್ ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕತ್ವ ಮತ್ತು ವಿದ್ಯುತ್ ವಾಹನಗಳ ಉಪಕ್ರಮ ಪ್ರಶಸ್ತಿ ದೊರೆತಿರುವುದು ಸಂತಸ ಮೂಡಿಸಿದೆ. ರಾಜ್ಯದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಇನ್ನಷ್ಟು ಪರಿಸರ ಸ್ನೇಹಿ ಮತ್ತು ಪ್ರಯಾಣಿಕರ ಸ್ನೇಹಿಯಾಗಿಸುವ ನಮ್ಮ ಪ್ರಯತ್ನಕ್ಕೆ ಈ ಪ್ರಶಸ್ತಿಯು ಪುಷ್ಟಿ ನೀಡಿದೆ ಎಂದು ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಪೋಸ್ಟ್ ಮಾಡಲಾಗಿದೆ.