Asianet Suvarna News Asianet Suvarna News

ಪ್ರಧಾನಿ ಮೋದಿ ಮೈಸೂರು ಭೇಟಿಗೆ 25 ಕೋಟಿ ವೆಚ್ಚ: ಸಚಿವ ಸೋಮಶೇಖರ್‌

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾಗವಹಿಸಿದ 8ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿದ್ದು, ಪ್ರಧಾನಿಗಳ ಎರಡು ದಿನ ಮೈಸೂರು ಭೇಟಿ ಕಾರ್ಯಕ್ರಮಗಳ ಸಿದ್ಧತೆ, ರಸ್ತೆ ಅಭಿವೃದ್ಧಿ ಸೇರಿದಂತೆ ಸುಮಾರು 25 ಕೋಟಿ ವೆಚ್ಚವಾಗಿದೆ.

Narendra Modis visit to Mysuru costs Rs 25 crore says minister st somashekar gvd
Author
Bangalore, First Published Jun 23, 2022, 5:15 AM IST

ಮೈಸೂರು (ಜೂ.23): ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾಗವಹಿಸಿದ 8ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿದ್ದು, ಪ್ರಧಾನಿಗಳ ಎರಡು ದಿನ ಮೈಸೂರು ಭೇಟಿ ಕಾರ್ಯಕ್ರಮಗಳ ಸಿದ್ಧತೆ, ರಸ್ತೆ ಅಭಿವೃದ್ಧಿ ಸೇರಿದಂತೆ ಸುಮಾರು 25 ಕೋಟಿ ವೆಚ್ಚವಾಗಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿಯಾಗಿರುವ ಸಹಕಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ತಿಳಿಸಿದ್ದಾರೆ. 

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಸ್ತೆ ಅಭಿವೃದ್ಧಿಗಾಗಿ ಈಗಾಗಲೇ ನಗರ ಪಾಲಿಕೆಗೆ . 10 ಕೋಟಿ ಅನುದಾನ ನೀಡಲಾಗಿದೆ. ಪ್ರಧಾನಿ ಭೇಟಿ ಕಾರ್ಯಕ್ರಮಕ್ಕೆ ಆದ ವೆಚ್ಚದ ಅನುದಾನವನ್ನು ನೀಡಲು ಮುಖ್ಯಮಂತ್ರಿಯವರಿಗೆ ಮನವಿ ಮಾಡಲಾಗಿದೆ ಎಂದರು. ಪ್ರಧಾನಿಯವರ ಭೇಟಿಗಾಗಿ ಮಾತ್ರ ರಸ್ತೆ ಅಭಿವೃದ್ಧಿ ಮಾಡಿಲ್ಲ. ಮೈಸೂರು ನಗರ ಮತ್ತು ಜಿಲ್ಲೆಯಲ್ಲಿ ವಿವಿಧ ರಸ್ತೆ ಅಭಿವೃದ್ಧಿಗಾಗಿ .375 ಕೋಟಿಗೆ ಸಚಿವ ಸಂಪುಟದಲ್ಲಿ ಅನುಮೋದನೆ ಆಗಿದೆ ಎಂದು ಅವರು ಹೇಳಿದರು.

ಆಷಾಢದಲ್ಲಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ, ಭಕ್ತರಿಗೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯ

ಮೋದಿ ಮೆಚ್ಚುಗೆ: ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರು ವಿಮಾನ ನಿಲ್ದಾಣದಿಂದ ನಿರ್ಗಮಿಸುವಾಗ, ಮೈಸೂರಿನ ಕಾರ್ಯಕ್ರಮ ಯಶಸ್ವಿ ಆಗಿದೆ, ಬಹಳ ಸಂತೋಷವಾಗಿದೆ. ಪದೇ ಪದೇ ಕರ್ನಾಟಕಕ್ಕೆ ಬರಬೇಕೆಂಬ ಆಸೆ ಆಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಳಿ ಹೇಳಿದ್ದಾರೆ ಎಂದು ಎಸ್‌.ಟಿ.ಸೋಮಶೇಖರ್‌ ಹೇಳಿದರು.

15 ಸಾವಿರ ಮಂದಿ ಭಾಗಿ: ಮೈಸೂರು ಅರಮನೆ ಮೈದಾನದಲ್ಲಿ ಸಾರ್ವಜನಿಕರೊಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಯೋಗಾಸನ ಪ್ರದರ್ಶನದಿಂದ ಯೋಗ ದಿನಕ್ಕೆ ಸ್ಫೂರ್ತಿ ಬಂದಿದೆ. 1 ಗಂಟೆ 15 ನಿಮಿಷಗಳ ಯೋಗ ಕಾರ್ಯಕ್ರಮದಲ್ಲಿ 15 ಸಾವಿರ ಜನ ಪಾಲ್ಗೊಂಡಿದ್ದರು. 14 ಸಾವಿರ ಜನರಿಗೆ ಕ್ಯೂಆರ್‌ ಕೋಡ್‌ ಟಿಕೆಟ್‌ ಜನರೇಟ್‌ ಮಾಡಲಾಗಿತ್ತು. 15 ಸಾವಿರ ಮ್ಯಾಟ್‌ ಹಾಕಲಾಗಿತ್ತು. ಎಲ್ಲವೂ ಭರ್ತಿಯಾಗಿದ್ದವು ಎಂದರು.

ಯೋಗ ಮಾಡುವವರ ರೀತಿ ಮೋದಿ ಸುತ್ತ ಕುಳಿತಿದ್ದ ಭದ್ರತಾ ಸಿಬ್ಬಂದಿ!

ಬೆಂಗಳೂರು, ಮಂಡ್ಯ, ಚಾಮರಾಜನಗರ ಸೇರಿದಂತೆ ನಾನಾ ಜಿಲ್ಲೆಗಳು ಹಾಗೂ ದೆಹಲಿಯ ಮೊರಾರ್ಜಿ ದೇಸಾಯಿ ನ್ಯಾಷನಲ್‌ ಇನ್ಸಿಟ್ಯೂಟ್‌ ಆಫ್‌ ಯೋಗದಿಂದ ಕೂಡ ಆಗಮಿಸಿದ್ದರು. ಪ್ರಧಾನಿ ಅವರ ಯೋಗ ಕಾರ್ಯಕ್ರಮವು ’ಒಂದು ಸೂರ್ಯ, ಒಂದು ಭೂಮಿ’ ಪರಿಕಲ್ಪನೆಯನ್ನು ಒತ್ತಿಹೇಳುವ ’ಗಾರ್ಡಿಯನ್‌ ಯೋಗ ರಿಂಗ್‌’ ಎಂಬ ನವೀನ ಕಾರ್ಯಕ್ರಮದ ಭಾಗವಾಗಿತ್ತು. ಅಂಗವಿಕಲರು, ತೃತೀಯ ಲಿಂಗಿಗಳು, ಪೌರಕಾರ್ಮಿಕರು, ಶಿಕ್ಷಕರು ಸೇರಿದಂತೆ 51 ವಿವಿಧ ವರ್ಗದ ಜನತೆ ಪ್ರಧಾನಿ ಅವರ ಜೊತೆ ಯೋಗ ಮಾಡಿದರು ಎಂದು ಹೇಳಿದರು.

Follow Us:
Download App:
  • android
  • ios