ಮೋದಿ ಧರ್ಮವನ್ನು ದುರುಪಯೋಗ ಮಾಡ್ಕೊಂಡು, ದುಡ್ಡು ಕೊಟ್ಟು ಚುನಾವಣೆ ಗೆಲ್ತಾರೆ; ಪ್ರಕಾಶ್ ರಾಜ್ ಆರೋಪ
ದೇಶದಲ್ಲಿ 420 (ಫೋರ್ ಟ್ವೆಂಟಿ)ಗಳೇ 400 ಸೀಟು ಗೆಲ್ಲುತ್ತೇವೆಂದು ಹೇಳ್ತಾರೆ. ಇವರು ಧರ್ಮವನ್ನು ದುರುಪಯೋಗ ಮಾಡಿಕೊಂಡು, ದುಡ್ಡು ಕೊಟ್ಟು ಖರೀದಿಸಿ ಗೆಲ್ತೀವಿ ಅಂತ ಧೈರ್ಯಾನಾ ಎಂದು ನಟ ಪ್ರಕಾಶ್ ರಾಜ್ ಆಕ್ರೋಶ ಹೊರಹಾಕಿದ್ದಾರೆ.
ಮಂಗಳೂರು (ಮಾ.18): ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ಆಡಳಿತವಿದೆ. ಆದರೆ, 420 (ಫೋರ್ ಟ್ವೆಂಟಿ)ಗಳೇ ಯಾವಾಗಲೂ, ಈ ಬಾರಿ ನಾವು 400 ದಾಟುತ್ತೇವೆ ಎಂದು ಹೇಳುತ್ತಾರೆ. ಇದು ಅಹಂಕಾರ ಅಲ್ವಾ ನೀವ್ಯಾರ್ರೀ ಅದನ್ನು ಹೇಳೋಕೆ? ಹಣ ಬಲದಿಂದ ಗೆದ್ದೇ ಗೆಲ್ಲುತ್ತೇವೆ ಅಂತ ದೈರ್ಯನಾ? ಧರ್ಮವನ್ನು ದುರುಪಯೋಗ ಪಡಿಸಿ, ಮತಗಳನ್ನು ದುಡ್ಡು ಕೊಟ್ಟು ಖರೀದಿಸ್ತೀವಿ ಅಂತ ಧೈರ್ಯಾನಾ? ಸುಮ್ನೆ ಇಮೇಜ್ ಸೃಷ್ಟಿಸೋಕಷ್ಟೆ ಹೇಳಿಕೊಂಡು ತಿರುಗ್ತೀರಿ ಎಂದು ಪ್ರಧಾನಿ ನರೇಂದ್ರ ಮೋದಿ ಪರಿವಾರ ಬಗ್ಗೆ ನಟ ಪ್ರಕಾಶ ರಾಜ್ ವಾಗ್ದಾಳಿ ಮಾಡಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 420 (ಫೋರ್ ಟ್ವೆಂಟಿ)ಗಳೇ ಯಾವಾಗಲೂ ಈ ಬಾರಿ ನಾವು 400 ದಾಟುತ್ತೇವೆ ಹೇಳ್ತಾರೆ. ಇದು ಅಹಂಕಾರ ಅಲ್ವಾ? ಯಾಕೆ ಪ್ರಜಾಪ್ರಭುತ್ವ ಇರೋದು ಅನ್ನೋದನ್ನಾ ಮರೆತಿದ್ದಾರಾ? ಈ ಹಿಂದೆ ವಿಧಾನಸಭಾ ಚುನಾವಣೆಯಲ್ಲಿಯೂ ಬಂಗಾಳ, ಕರ್ನಾಟಕದಲ್ಲಿ ಇದೇ ರೀತಿ ಹೇಳಿದ್ರಿ ಆಯ್ತಾ? ಈಗ ತಮಿಳುನಾಡಿನಲ್ಲಿ ಹೇಳಿದ್ರಿ, ಅಲ್ಲಿ ಆಯ್ತಾ ಆಗಿಲ್ಲ. ಸುಮ್ಮೆ ಬಾಯಿಗೆ ಬಂದಂಗೆ ಹೇಳ್ಕಂಡು ಬರ್ತಿರಿ. ಸಾವಿರಾರು ಕೋಟಿ ಹಣ ಇದೆಯಂತ ಧೈರ್ಯಾನಾ? ಹಣ ಬಲದಿಂದ ಗೆದ್ದೇ ಗೆಲ್ಲುತ್ತೇವೆ ಅಂತ ಧೈರ್ಯನಾ? ಧರ್ಮವನ್ಬು ದುರುಪಯೋಗ ಪಡಿಸಿ , ಮತಗಳನ್ನು ದುಡ್ಡು ಕೊಟ್ಟು ಖರೀದಿಸ್ತೀವಿ ಅಂತ ಧೈರ್ಯಾನಾ? ಸುಮ್ನೆ ಇಮೇಜ್ ಸೃಷ್ಟಿಸೋಕಷ್ಟೆ ಹೇಳಿಕೊಂಡು ತಿರುಗ್ತೀರಿ ಎಂದು ಟೀಕೆ ಮಾಡಿದರು.
ಶಿವಮೊಗ್ಗ: ಮೋದಿ ವೇದಿಕೆಯಲ್ಲಿ ಜೆಡಿಎಸ್ ಶಾಸಕಿಗೂ ಕುರ್ಚಿ ಮೀಸಲಿದೆ, ಆದ್ರೆ ಈಶ್ವರಪ್ಪಗಿಲ್ಲ!
ಮೋದಿಯವರ ಪರಿವಾರ ಏನಂತ ಗೊತ್ತಾಯ್ತಲ್ಲ, ಲಾಟ್ರಿ ಮಾರೋ ಮಾರ್ಟಿನ್ ಇವರ ಪರಿವಾರ. ನಿಮ್ಮದು ಫಾರ್ಮಾ ಕಂಪನಿ, ಅದಾನಿ ಪರಿವಾರ, ರೇಪ್ ಮಾಡಿರುವ ಬ್ರಿಜ್ ಭೂಷಣ್ ಪರಿವಾರವಾಗಿದೆ. ಮಣಿಪುರದ ಹೆಣ್ಮಕ್ಕಳ ಬಗ್ಗೆ ಮಾತಾಡಲ್ಲ. ಮಹಿಳಾ ದಿನದಂದು ಗ್ಯಾಸ್ ಗೆ ನೂರು ರೂ. ಕಡಿಮೆ ಮಾಡ್ತಾರೆ. ಪೆಟ್ರೋಲ್‌ಗೆ ಕೇವಲ 2 ರೂ. ಕಡಿಮೆ ಮಾಡ್ತಾರೆ. ಇದರಲ್ಲಿ ಅರ್ಥ ಇದೆಯಾ? ಚುನಾವಣೆ ಗೆಲ್ಲೋಕೆ ಇಲೆಕ್ಟೊರಲ್ ಬಾಂಡ್ ಮೂಲಕ 12 ಸಾವಿರ ಕೋಟಿ ಇಟ್ಟಿದ್ದೀರಿ. ದೇಶದ ಜನರಿಗೆ ಕೆಲಸ ಕೊಟ್ಟಿದ್ದೀರೋ ಇಲ್ವೋ ಗೊತ್ತಿಲ್ಲ, ಆದರೆ ನಮ್ಮ ಮನೆಯ ಟೈಲರಿಗಂತೂ ಕೆಲಸ ಕೊಟ್ಟಿದೀರಿ ಎಂದು ಟೀಕೆ ಮಾಡಿದರು.
ಮಹಾಪ್ರಭುಗಳೇ ಇಂಟರ್ ನೆಟ್ ನ 1 ಜಿಬಿ ಇಂಟರ್‌ನೆಟ್‌ಗೆ 10 ರೂ. ಅದು ನೀವು ಮಾಡಿದ್ದಾ? ಅದು ಪ್ರಗತಿ, ವಿಜ್ಞಾನ ಬೆಳೆದಂತೆ ವಸ್ತುಗಳ, ಸವಲತ್ತುಗಳ ಬೆಲೆ ಬದಲಾಗುತ್ತದೆ. ಎಲ್ಲವನ್ನೂ ಸುಳ್ಳು ಹೇಳ್ಕಂಡು ತಿರುಗೋದು ತಪ್ಪು. ಜನರನ್ನು ಹೀಗೆಲ್ಲಾ ಮಂಗ ಮಾಡಬಾರದು.ಮೋದಿಯವರನ್ನು ಮಹಾಪ್ರಭುಗಳು ಅಂತೇನೆ, ಹೆಸರು ಕರೆದ್ರೆ ಬೇಜಾರಾಗುತ್ತದೆ. ನಾ ಖಾವೂಂಗಾ ನಾ ಖಾನೆ ದೂಂಗಾ ಅಂತಾರೆ, ನಿಮ್ಮಲ್ಲಿ ಭ್ರಷ್ಟಾಚಾರ ನಡೀತಿದೆಯಲ್ಲಾ, ನೀವೂ ಸರಿಯಿಲ್ಲ ಅಂತಲ್ವಾ? ಯಾರೂ ದೇವರಲ್ಲ ಇಲ್ಲಿ, ಜನ ಅರ್ಥ ಮಾಡ್ಕೋಬೇಕಿದೆ. ಚುನಾವಣಾ ಬಾಂಡ್ ಬಗ್ಗೆ ಯಾಕೆ ಗೌಪ್ಯವಾಗಿಟ್ಟಿದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಚುನಾವಣೋತ್ತರ ಸಮೀಕ್ಷೆ ಎನ್ನುವುದು ವ್ಯಾಪಾರವಾಗಿದೆ. ಹಣ ಕೊಟ್ಟು ಮಾಡಿಸುವಂಥ ಸಮೀಕ್ಷೆಗಳು ಇವು. ಇವತ್ತು ಪತ್ರಿಕೆ ಓಪನ್ ಮಾಡ್ತಾರಂದ್ರೆ ಯಾವ ಪಕ್ಷದ್ದು ಅಂತ ಗೊತ್ತಾಗುತ್ತದೆ. ಒಳ್ಳೆಯ ಅಭ್ಯರ್ಥಿಗಳು ಗೆದ್ರೆ ನೀವು ಗೆದ್ದಂತೆ, ಅದಕ್ಕಾಗಿ ಒಳ್ಳೆಯ ಅಭ್ಯರ್ಥಿ ಗೆಲ್ಲಿಸಿ. ನಾನು ಚುನಾವಣೆ ನಿಲ್ಲಲ್ಲ, ಯಾವ ಪಕ್ಷದ ಪರವು ಪ್ರಚಾರ ಮಾಡಲ್ಲ. ಜನರ ಪಕ್ಷ ನಾವು, ಎಲ್ಲಾ ಪಕ್ಷದವರು ಒಂದೇ, ಅವನ ಬಿಲ್ಡಿಂಗಲ್ಲಿ ಇವನ ಬಾರಿದೆ, ಎಲ್ಲ ಪಕ್ಷದ ನಾಯಕರಲ್ಲು ಹೊಂದಾಣಿಕೆ ಇದೆ. 320 ಎಂಪಿಗಳಿದ್ದಾರೆ, ಅದನ್ನು ಹಂಚಿದ್ರೆ ಕಡಿಮೆ ಬರತ್ತೆ ಅಂತಾರೆ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್‌ನಿಂದ ನನಗೆ ಆಫರ್ ಬಂದಿದೆ, ನಾಳೆಯೇ ನನ್ನ ನಿಲುವನ್ನು ತಿಳಿಸ್ತೇನೆ; ಸಂಸದ ಡಿ.ವಿ. ಸದಾನಂದಗೌಡ
ಮನ್ ಕಿ ಬಾತ್‌ನಲ್ಲಿ ನೀವು ಯಾಕೆ ಸತ್ಯ ಹೇಳಲ್ಲ. ಲಾಟರಿ ಮಾರ್ಟಿನ್‌ನಿಂದ ಹಣ ತಗೊಂಡಿದ್ದನ್ನು ನೀವ್ಯಾಕೆ ಹೇಳಿಲ್ಲ? ಲಾಟರಿ ಕಂಪನಿ ಒಂದು ಸಾವಿರ ಕೋಟಿ ಲಂಚ ಕೊಟ್ಟಿದೆ. 500 ಕೋಟಿ ರೋ. ಲಂಚ ಕೊಟ್ಟಿದ್ದಕ್ಕೆ, 1,500 ಕೋಟಿ ಕಾಂಟ್ರಾಕ್ಟ್ ಕೊಡ್ತೀರಿ ಅಂದ್ರೆ ಏನರ್ಥ? ಈ ದುಡ್ಡಿನಲ್ಲಿ ಶಾಸಕರನ್ನು ಖರೀದಿಸ್ತೀರಾ ? ಅಥವಾ ನೀವು ಡ್ರೆಸ್ ಖರೀದಿ ಮಾಡ್ತೀರಾ? ಇಲೆಕ್ಟೋರಲ್ ಬಾಂಡ್ ಕೊಟ್ಟವರಿಗೆ ಕಾಂಟ್ರಾಕ್ಟ್ ಕೊಡ್ತೀರಿ. ಇಡಿ ರೇಡ್ ಆದ ಕಂಪನಿ ಮಾರನೇ ದಿನವೇ 200 ಕೋಟಿ ಇಲೆಕ್ಟೋರಲ್ ಬಾಂಡ್ ತಕೊಂಡ್ರೆ ಓಕೇನಾ? ನಿಮ್ಮಲ್ಲಿ ಯಾಕೆ ಇಡಿ ರೇಡ್ ಆಗಲ್ಲ, ನೀವು ದುಡ್ಡು ತಗೋತಿಲ್ವಾ ಅದನ್ನು ಕೇಳಬಾರದಾ? ನಿಮ್ಮ ಮನ್ ಕಿ ಬಾತ್ ನಲ್ಲಿ ಅದನ್ನೆಲ್ಲ ಹೇಳುತ್ತೀರಾ? ಎಂದು ಪ್ರಕಾಶ್ ರಾಜ್ ಪ್ರಶ್ನೆ ಮಾಡಿದರು.