ಶಿವಮೊಗ್ಗ: ಮೋದಿ ವೇದಿಕೆಯಲ್ಲಿ ಜೆಡಿಎಸ್ ಶಾಸಕಿಗೂ ಕುರ್ಚಿ ಮೀಸಲಿದೆ, ಆದ್ರೆ ಈಶ್ವರಪ್ಪಗಿಲ್ಲ!
ಶಿವಮೊಗ್ಗದಲ್ಲಿ ನಡೆಯುವ ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ಜೆಡಿಎಸ್ ಶಾಸಕಿ ಶಾರದಾ ಪುರಿನಾಯ್ಕ ಅವರಿಗೂ ಕುರ್ಚಿ ಮೀಸಲಿಡಲಾಗಿದೆ. ಆದರೆ, ಈಶ್ವರಪ್ಪಗೆ ಮಾತ್ರ ಕುರ್ಚಿಯೇ ಮೀಸಲಿಲ್ಲ.
ಶಿವಮೊಗ್ಗ (ಮಾ.18): ಪ್ರಧಾನಿ ನರೇಂದ್ರ ಮೋದಿ ಅವರು ಶಿವಮೊಗ್ಗಕ್ಕೆ ಚುನಾವಣಾ ಪ್ರಚಾರ ಕಾರ್ಯಕ್ರಮಕ್ಕೆ ಆಗಮಿಸಲಿದ್ದು, ಒಟ್ಟು 43 ಜನರಿಗೆ ವೇದಿಕೆ ಮೇಲೆ ಆಸೀನರಾಗಲು ಅವಕಾಶ ನೀಡಲಾಗಿದೆ. ಮೈತ್ರಿ ಪಕ್ಷದ (ಜೆಡಿಎಸ್) ಶಾಸಕಿ ಶಾರದಾ ಪುರಿನಾಯ್ಕ ಅವರಿಗೆ ವೇದಿಕೆ ಮೇಲೆ ಅವಕಾಶ ಕೊಡಲಾಗಿದ್ದರೂ, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರಿಗೆ ಮಾತ್ರ ಸ್ಥಾನವನ್ನು ಕಲ್ಪಿಸಿಲ್ಲ.
ಶಿವಮೊಗ್ಗದಲ್ಲಿ ನಡೆಯುವ ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ನಾನು ಹೋಗುವುದಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದ್ದರು. ಆದರೆ, ಮುಖ್ಯವಾಗಿ ರಾಜ್ಯ ಬಿಜೆಪಿ ನಾಯಕರೇ ಮೋದಿ ಕಾರ್ಯಕ್ರಮದ ವೇದಿಕೆಯಲ್ಲಿ ಭಾಗವಹಿಸಲು ಕುರ್ಚಿಯನ್ನು ಮೀಸಲಿಟ್ಟಿಲ್ಲ. ಇನ್ನು ಮೋದಿ ಕಾರ್ಯಕ್ರಮದ ಪಟ್ಟಿಯನ್ನು ಬಿಟುಗಡೆ ಮಾಡಲಾಗಿದ್ದು, 43 ನಾಯಕರು ವೇದಿಕೆಯನ್ನು ಹಂಚಿಕೊಳ್ಳಲಿದ್ದಾರೆ ಎಂದು ಪಟ್ಟಿ ಸಿದ್ಧಪಡಿಸಲಾಗಿದೆ. ಅದರಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷದಿಂದ ಜೆಡಿಎಸ್ ಶಾಸಕಿ ಶಾರದಾ ಪುರಿನಾಯ್ಕ ಅವರಿಗೂ ವೇದಿಕೆಯಲ್ಲಿ ಕೂರಲು ಕುರ್ಚಿ ಮೀಸಲಿಡಲಾಗಿದೆ. ಆದರೆ, ಈಶ್ವರಪ್ಪ ಅವರಿಗೆ ಮಾತ್ರ ಕುರ್ಚಿಯನ್ನು ಮೀಸಲಿಟ್ಟಿಲ್ಲ ಎಂದು ತಿಳಿದುಬಂದಿದೆ.
ಕಾಂಗ್ರೆಸ್‌ನಿಂದ ನನಗೆ ಆಫರ್ ಬಂದಿದೆ, ನಾಳೆಯೇ ನನ್ನ ನಿಲುವನ್ನು ತಿಳಿಸ್ತೇನೆ; ಸಂಸದ ಡಿ.ವಿ. ಸದಾನಂದಗೌಡ
ಪ್ರಧಾನಿ ಮೋದಿ ಜೊತೆ ಮೊದಲ ಸಾಲಿನಲ್ಲಿ ವೇದಿಕೆ ಹಂಚಿಕೊಳ್ಳಲಿರುವ ಗಣ್ಯರ ವಿವರ ಇಲ್ಲಿದೆ ನೋಡಿ..
- ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ
- ಕೇಂದ್ರ ಸಚಿವ ಎ. ನಾರಾಯಣಸ್ವಾಮಿ
- ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ
- ಮಾಜಿ ಸಚಿವ ಸಿ.ಟಿ. ರವಿ
- ಶಾಸಕ ವಿ. ಸುನೀಲ್ ಕುಮಾರ್
- ಶಾಸಕ ಆರಗ ಜ್ಞಾನೇಂದ್ರ
- ದಾವಣಗೆರೆ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ್
- ಜೆಡಿಎಸ್ ಶಾಸಕಿ ಶಾರದ ಪುರಿ ನಾಯಕ್
- ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ್ ಪೂಜಾರಿ
- ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ರಾಘವೇಂದ್ರ
- ದಕ್ಷಿಣ ಕನ್ನಡ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟಾ
- ಬೆಂಗಳೂರು ಗ್ರಾಮಾಂತರ ಅಭ್ಯರ್ಥಿ ಡಾ.ಸಿ.ಎನ್. ಮಂಜುನಾಥ್
- ಶಾಸಕ ಭೈರತಿ ಬಸವರಾಜ್
- ಡಿ.ಎಚ್. ಶಂಕರಮೂರ್ತಿ
- ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ್
- ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್
- ಗುರುರಾಜ್ ಗಂಟಿಹೊಳಿ
- ಶಿವಮೊಗ್ಗ ಶಾಸಕ ಚನ್ನಬಸಪ್ಪ
ಮೇಲಿನ 18 ಜನರನ್ನು ಒಳಗೊಂಡು ಒಟ್ಟು 43 ಗಣ್ಯರು ವೇದಿಕೆಯಲ್ಲಿ ಕೂರಲು ಅವಕಾಶ ನೀಡಲಾಗಿದೆ.