Asianet Suvarna News Asianet Suvarna News

ನರಗುಂದ ರೈತ ಹುತಾತ್ಮರ ದಿನಾಚರಣೆ: ಜು.21ಕ್ಕೆ ರೈತರ ಸಮಾವೇಶ

ನರಗುಂದ- ನವಲಗುಂದ  43ನೇ ವರ್ಷದ ರೈತ ಹುತಾತ್ಮರ ದಿನಾಚರಣೆ ಪ್ರಯುಕ್ತ ಜು.21 ರಂದು ನರಗುಂದದಲ್ಲಿ ರೈತರ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ.

Naragunda Farmer Martyrs Day Celebration Farmers Conference on June 21 sat
Author
First Published Jul 17, 2023, 9:06 PM IST

ವರದಿ: ವರದರಾಜ್, ಏಷ್ಯಾನೆಟ್‌ ಸುವರ್ಣ ನ್ಯೂಸ್
ದಾವಣಗೆರೆ (ಜು.17): ನರಗುಂದ- ನವಲಗುಂದ  43ನೇ ವರ್ಷದ ರೈತ ಹುತಾತ್ಮರ ದಿನಾಚರಣೆ ಪ್ರಯುಕ್ತ ಜು.21 ರಂದು ಬೆಳಗ್ಗೆ 11 ಗಂಟೆಗೆ ನರಗುಂದದಲ್ಲಿ ರೈತರ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಕುರುವ ಗಣೇಶ್ ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಸಮಾವೇಶದಲ್ಲಿ ನಮ್ಮ ಬೇಡಿಕೆಗಳ ಈಡೇರಿಕೆಗೆ  ಒತ್ತಾಯಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ದಾವಣಗೆರೆ ಜಿಲ್ಲೆಯಿಂದಲೂ ಜು.21ಕ್ಕೆ ಸಾವಿರಾರು ರೈತರು ನರಗುಂದಕ್ಕೆ ಆಗಮಿಸಲಿದ್ದಾರೆ. ಸರ್ಕಾರದ ಗ್ಯಾರಂಟಿ ಯೋಜನೆಗಳು ಬಡವರ ಪರವಿದ್ದು ರೈತಸಂಘ ಸ್ವಾಗತಿಸುತ್ತದೆ. ಆದರೆ ಗ್ಯಾರಂಟಿ ಅನುಷ್ಠಾನಕ್ಕಾಗಿ ಯಾವುದೇ ಹೊಸ ತೆರಿಗೆ ಹೇರಬಾರದು. ಅನ್ನ ಭಾಗ್ಯ ಯೋಜನೆಗೆ ಹೊರ ರಾಜ್ಯದಿಂದ ಅಕ್ಕಿ ಖರೀದಿ ಮಾಡುವುದು ಹಾಗೂ ಅಕ್ಕಿ ಬದಲು ಹಣ ನೀಡುವುದನ್ನು ರೈತ ಸಂಘ ಖಂಡಿಸುತ್ತದೆ. ರಾಜ್ಯದ ರೈತರು ಬೆಲಕೆದ ಅಕ್ಕಿ ಖರೀದಿಸಬೇಕು ಇಲ್ಲವಾದರೆ ರಾಗಿ, ಜೋಳ ನೀಡಿದರೆ ರಾಜ್ಯದ ರೈತರು ಆರ್ಥಿಕವಾಗಿ ಸಬಲರಾಗಲು ಸಾಧ್ಯ ಎಂದರು.

Temple Mobile Ban:ಕರ್ನಾಟಕದ ಮುಜರಾಯಿ ದೇವಸ್ಥಾನಗಳಲ್ಲಿ ಮೊಬೈಲ್‌ ಬಳಕೆ ನಿಷೇಧ

ಸ್ವಾಮಿನಾಥನ್ ವರದಿ ಜಾರಿಗೆ ತನ್ನಿ: ರೈತರ ಉತ್ಪಾದನಾ ವೆಚ್ಚದ ಜೊತೆಗೆ ಡಾ.ಎಂ.ಎಸ್. ಸ್ವಾಮಿನಾಥನ್ ವರದಿಯಂತೆ ಶೇ.50 ರಷ್ಟು ಲಾಭಾಂಶ ಸೇರಿಸಿ ಬೆಲೆ ಕೊಡಬೇಕು. ಕಬ್ಬಿಗೆ ಕನಿಷ್ಠ ಟನ್ ಗೆ 4,500 ರೂ ಬೆಲೆ ನಿಗಧಿ ಮಾಡಬೇಕು. ಮಹದಾಯಿ ಕಳಸ ಬಂಡೂರಿ ಯೋಜನೆ ಶೀಘ್ರದಲ್ಲೇ ಕಾರ್ಯಗತಗೊಳಿಸಬೇಕು. ರೈತ ವಿರೋಧಿ 3 ಕೃಷಿ ಕಾಯ್ದೆಗಳನ್ನು ಕೂಡಲೇ ಹಿಂಪಡೆಯಬೇಕು. ಕೇಂದ್ರ ಸರ್ಕಾರ ನಬಾರ್ಡ್ ನಿಂದ ರೈತರಿಗೆ ಮೊದಲಿನಂತೆ ಶೇ.75 ಭಾಗ ಸಾಲ ಕೊಡಿಸಬೇಕು. ಬಗರ್ ಹುಕುಂ ಸಾಗುವಳಿದಾರರನ್ನು ಒಕ್ಕಲೆಬ್ಬಿಸಬಾರದು. ಅರಣ್ಯ ನೀತಿಯನ್ನು ಸರಳೀಕರಣ ಮಾಡಿ ರೈತರಿಗೆ ಸಾಗುವಳಿದಾರರಿಗೆ ಹಕ್ಕುಪತ್ರ ಕೊಡಬೇಕು ಎಂಬ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.

'ಕನ್ನಡ ಪಂಡಿತರು ಅಂದ್ಕೊಂಡಿದ್ದೆ, ಸಿದ್ಧರಾಮಯ್ಯರಿಗೆ ಕನ್ನಡ ಬರಲ್ವಾ?' ಎಚ್‌ಡಿಕೆ ಪ್ರಶ್ನೆ!

ತುಂಗಾ ಜಲಾಶಯ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಿ:  ತುಂಗಾ ಡ್ಯಾಂ ಭರ್ತಿಯಾಗಿ 20 ದಿನಗಳಾಗಿದೆ. ಆದರೆ ಇಲ್ಲಿಯವರೆಗೂ ಅಚ್ಚುಕಟ್ಟು ವ್ಯಾಪ್ತಿಗೆ ನೀರುಕೊಟ್ಟಿಲ್ಲ. ಈಗಾಗಲೇ ರೈತರು ಭತ್ತ ನಾಟಿ ಮಾಡುತ್ತಿದ್ದಾರೆ. ಕೂಡಲೇ ನೀರು ಹರಿಸಬೇಕು ಈ ಬಗ್ಗೆ ಜಿಲ್ಲಾಧಿಕಾರಿಗಳು ಗಮನಹರಿಸಬೇಕು ಎಂದರು. ಸುದ್ದಿಗೋಷ್ಠಿಯಲ್ಲಿ ಮರುಳಸಿದ್ದಪ್ಪ,ಷಣ್ಮುಖಪ್ಪ,ಹೊನ್ನೂರು ಮುನಿಯಪ್ಪ,ಬೀರಪ್ಪ,ಅಣ್ಣಪ್ಪ,ಅಭಿಲಾಷ್ ಉಪಸ್ಥಿತರಿದ್ದರು.

Follow Us:
Download App:
  • android
  • ios