ಪೊಲೀಸರೊಂದಿಗೆ ಸೈಬರ್ ಸ್ಕ್ಯಾಮ್ ಜಾಗೃತಿಗೆ ಕೈ ಜೋಡಿಸಿದ 'ನಾನು ನಂದಿನಿ' ಹಾಡಿನ ಖ್ಯಾತಿಯ ವಿಕ್ಕಿ, ಅಮಿತ್ ಚಿಟ್ಟೆ!

ಖ್ಯಾತ 'ನಂದಿನಿ' ಹಾಡಿನ ರಚನೆಕಾರ ವಿಕ್ಕಿಪೀಡಿಯಾ ಮತ್ತು ಅಮಿತ್ ಚಿಟ್ಟೆ ಪೊಲೀಸರೊಂದಿಗೆ ಸೈಬರ್ ಸ್ಕ್ಯಾಮ್ ಜಾಗೃತಿಗೆ ಕೈ ಜೋಡಿಸಿದ್ದಾರೆ. ಬ್ಯಾಂಕ್ ವಂಚನೆ, ಉದ್ಯೋಗ ಆಫರ್ ಹಾಗೂ ಇತರೆ ಸ್ಕ್ಯಾಮ್‌ಗಳ ವಿಡಿಯೋ ಇಲ್ಲಿದೆ ನೋಡಿ..

Nanu Nandini Bangalore Bandini song fame Vickypedia and Amit Chitte cyber scam awareness sat

ಬೆಂಗಳೂರು (ಡಿ.26): ಸಿಲಿಕಾನ್ ಸಿಟಿ ಬೆಂಗಳೂರಿನ ಐಟಿ ಕಂಪನಿಯ ಉದ್ಯೋಗಿಗಳನ್ನು ಕುರಿತು ಸೋಶಿಯಲ್ ಮೀಡಿಯಾ ಇನ್ಫ್ಲ್ಯೂಯೆನ್ಸರ್ ವಿಕ್ಕಿಪೀಡಿಯಾ ಹಾಗೂ ಅಮಿತ್ ಚಿಟ್ಟಿ ರಚಿಸಿದ್ದ 'ನಾನು ನಂದಿನಿ ಬೆಂಗಳೂರಿಗೆ ಬಂದೀನಿ., ಪಿಜಿಲಿ ಇರ್ತೀನಿ..' ಹಾಡು ದೇಶದಾದ್ಯಂತ ಫೇಮಸ್ ಆಗಿತ್ತು. ಆದರೆ, ಇದೀಗ ಅದೇ ವಿಕ್ಕಿ ಅಲಿಯಾಸ್ ವಿಕ್ಕಿಪೀಡಿಯಾ ಹಾಗೂ ಆತನ ಸ್ನೇಹಿತ ಅಮಿತ್ ಚಿಟ್ಟೆ ಪೊಲೀಸರೊಂದಿಗೆ ಸೈಬರ್ ಸ್ಕ್ಯಾಮ್ ಜಾಗೃತಿಗಾಗಿ ಕೈ ಜೋಡಿಸಿದ್ದಾರೆ.

ಹೌದು, ಬೆಂಗಳೂರು ಸೇರಿದಂತೆ ದೇಶದೆಲ್ಲೆಡೆ ಸೋಶಿಯಲ್ ಮೀಡಿಯಾ ಬಳಸುವ ಜನರು 'ನಾನು ನಂದಿನಿ ಬೆಂಗಳೂರಿಗೆ ಬಂದೀನಿ., ಪಿಜಿಲಿ ಇರ್ತೀನಿ..' ಹಾಡನ್ನು ಒಮ್ಮೆಯಾದರೂ ಕೇಳಿರ್ತೀರಿ ಅಲ್ವಾ..? ಈ ಹಾಡನ್ನು ರಚನೆ ಮಾಡಿದ್ದು ಬೆಂಗಳೂರಿನ ಸೋಶಿಯಲ್ ಮೀಡಿಯಾ ಇನ್ಫ್ಲ್ಯೂಯೆನ್ಸರ್ ವಿಕ್ಕಿಪೀಡಿಯಾ ಹಾಗೂ ಅಮಿತ್ ಚಿಟ್ಟಿ ಅವರ ಸಂಗಡಿಗರು. ಈ ಹಾಡು ದೇಶದಾದ್ಯಂತ ಖ್ಯಾತಿ ಪಡೆದು ವಿಕ್ಕಿ ಅವರಿಗೆ ದೊಡ್ಡ ಹೆಸರನ್ನೂ ತಂದುಕೊಟ್ಟಿತು. ಅವರ ಇನ್‌ಸ್ಟಾಗ್ರಾಂ ಫಾಲೋವರ್ಸ್‌ಗಳ ಸಂಖ್ಯೆಯೂ ಹೆಚ್ಚಾಗಿತ್ತು. ಆದರೆ, ಇದೀಗ ಅದೇ ವಿಕ್ಕಿ ಹಾಗೂ ಅಮಿತ್ ಚಿಟ್ಟೆ ಇಬ್ಬರೂ ಸ್ಕ್ಯಾಮ್ ಮಾಡಲು ಹೋಗಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ ಎಂದು ವಿಡಿಯೋದಲ್ಲಿ ತೋರಿಸಲಾಗಿದೆ.

ಇದೇನಪ್ಪಾ ಸೋಶಿಯಲ್ ಮೀಡಿಯಾದಿಂದ ಒಳ್ಳೆಯ ಹಣ ಬರುವುದಕ್ಕೆ ಆದಾಯ ಮಾಡಿಕೊಂಡಿರುವ ಇವರು ಇದ್ಯಾಕೆ ಸ್ಕ್ಯಾಮ್ ಮಾಡುವುದಕ್ಕೆ ಮುಂದಾಗಿದ್ದಾರೆ ಎಂದು ಚಿಂತಿಸಬೇಡಿ. ಇವರು ಸ್ಕ್ಯಾಮ್ ಮಾಡುವವರು ಹೇಗೆ ನಿಮ್ಮನ್ನು ಯಾಮಾರಿಸುತ್ತಾರೆ? ಯಾವಾವ ಉದ್ದೇಶದಿಂದ ನಿಮಗೆ ಕರೆ ಮಾಡಿ ನಿಮ್ಮ ಹಣ ಲಪಟಾಯಿಸುತ್ತಾರೆ? ಎಂಬುದನ್ನು ತೋರಿಸಿ ಜಾಗೃತಿ ಮೂಡಿಸಿದ್ದಾರೆ. ಇದನ್ನು ಸ್ವತಃ ಪೊಲೀಸರ ನೆರವಿನಿಂದಲೇ ಮಾಡಿದ್ದಾರೆ. ಪೊಲೀಸ್ ಇಲಾಖೆಯಿಂದಲೇ ಸೈಬರ್ ಸ್ಕ್ಯಾಮ್ ತಡೆಗಟ್ಟುವುದಕ್ಕೆ ಜಾಗೃತಿ ಮೂಡಿಸಲು ಈ ಇಬ್ಬರನ್ನು ಬಳಕೆ ಮಾಡಿಕೊಂಡು ವಿಡಿಯೋ ಕ್ರಿಯೇಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಹೊಸ ವರ್ಷದಲ್ಲಿ ಹೊಸ ನಿಯಮ, ಜಿಎಸ್‌ಟಿ, ಮೊಬೈಲ್ ಶುಲ್ಕ, ವೀಸಾ ಸೇರಿ ಹಲವು ಬದಲಾವಣೆ!

ಈ ಜಾಗೃತಿ ವಿಡಿಯೋದಲ್ಲಿ ಬ್ಯಾಂಕ್‌ನವರ ಹೆಸರಿನಲ್ಲಿ ಕರೆ ಮಾಡುವ ಸೈಬರ್ ಸ್ಕ್ಯಾಮ್ ಮಾಡುವವರು ನಿಮ್ಮ ಅಕೌಂಟ್ ಫ್ರೀಜ್ ಆಗಿದೆ, ಎಟಿಎಂ ಕಾರ್ಡ್ ಬ್ಲ್ಯಾಕ್ ಆಗಿದೆ ಹಾಗೂ ಕೆವೈಸಿ ಮಾಹಿತಿ ಅಪ್ಡೇಟ್ ಮಾಡಬೇಕು ಎಂದು ಕರೆ ಮಾಡಿ ನಿಮ್ಮ ಮೊಬೈಲ್‌ಗೆ ಒಂದು ಒಪಿಟಿ ಕಳಿಸಿ ನಿಮ್ಮ ಖಾತೆಯಲ್ಲಿರುವ ಎಲ್ಲ ಹಣ ಲಪಟಾಯಿಸುತ್ತಾರೆ. ಮತ್ತೊಂದು ರೀತಿಯಲ್ಲಿ ಇದು ಪೊಲೀಸ್, ನ್ಯಾಯಾಧೀಶರು ಎಂದೆಲ್ಲಾ ಹೇಳಿ ಡಿಜಿಟಲ್ ಆರೆಸ್ಟ್ ಆಗಿದ್ದೀರಿ ಎಂದು ಹೇಳಿ ನಿಮ್ಮ ಬ್ಯಾಂಕ್ ಖಾತೆ ವಿವರ ಪಡೆದು ವಂಚಿಸುತ್ತಾರೆ.

 

ನಿಮಗೆ ಉದ್ಯೋಗ ಆಫರ್, ಬ್ಯಾಂಕ್ ಜಾಬ್, ಕೋರಿಯರ್ ಬಂದಿದೆ, ಗಿಫ್ಟ್ ಬಂದಿದೆ, ಆಪ್ ಡೌನ್‌ಲೋಡ್ ಮಾಡಿಕೊಳ್ಳಿ, ವರ್ಕ್‌ಫ್ರಂ ಹೋಮ್ ಇತ್ಯಾದಿಗಳನ್ನು ನಿಮಗೆ ಕಳುಹಿಸಿ ನಿಮ್ಮ ಬ್ಯಾಂಕ್ ಖಾತೆಗೆ ಕನ್ನ ಹಾಕುತ್ತಾರೆ. ಇಂಥವರಿಂದ ಹುಷಾರಾಗಿದೆ. ಒಂದು ವೇಳೆ ಸೈಬರ್ ಅಪರಾಧ ಕೃತ್ಯಕ್ಕೆ ಒಳಗಾದಲ್ಲಿ ಕೂಡಲೇ  ಸೈಬರ್ ಅಪರಾಧ ಸಹಾಯವಾಣಿ 1930 ಕರೆ ಮಾಡಿ ದೂರು ದಾಖಲಿಸಿ ಎಂದು ವಿಡಿಯೋ ಮೂಲಕ ಜಾಗೃತಿ ಮೂಡಿಸಿದ್ದಾರೆ. ಬೆಂಗಳೂರಿನ ಪೂರ್ವ ವಲಯದ ಬೈಯಪ್ಪನಹಳ್ಳಿ ಪೊಲೀಸ ಠಾಣೆ ಹಾಗೂ ಸೆನ್ ಪೊಲೀಸ್‌ ಠಾಣೆ ಪೊಲೀಸರು ಕೂಡ ಜಾಗೃತಿ ವಿಡಿಯೋದಲ್ಲಿ ಪಾಲ್ಗೊಂಡಿದ್ದಾರೆ.

ಇದನ್ನೂ ಓದಿ: ಇದು ರೈಲ್ವೆ ಪ್ರಯಾಣಿಕರ ಗಮನಕ್ಕೆ, ಇನ್ಮುಂದೆ IRCTC ಬಂದ್ ಮಾಡಲಿದೆ ಈ ಸರ್ವಿಸ್, ನಿಮ್ಮ ಹಣಕ್ಕೆ ನೀವೇ ಜವಾಬ್ದಾರರು!

Latest Videos
Follow Us:
Download App:
  • android
  • ios