ಇನ್ನೊಂದು ತಿಂಗಳು ಇರ್ತೀರಿ ಆ ನಂತರ ಮುಗಿಯಿತು. ನಮ್ಮ ರೈತರಿಗೆ ಯಾಕ್ರೀ... ಅವಮಾನ ಮಾಡುತ್ತೀರಿ? ನಾನು ಪ್ರತಿಭಟನೆ ಮಾಡ್ತಿಲ್ಲ, ಬೆಳ್ಳಂಬೆಳಗ್ಗೆ ಹಾಲು, ಬಿಸ್ಕೆಟ್, ಮೈಸೂರು ಪಾಕ್, ಚಾಕೊಲೆಟ್ ತೆಗೆದುಕೊಂಡಿದ್ದೇನೆ. ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ರೀತಿ ನಮ್ಮ ಮಕ್ಕಳು, ನಮ್ಮ ಹಾಲು ಕುಡಿಬೇಕು ಎಂದು ನಮ್ಮ ಜನರಿಗೆ ಹೇಳಿದ್ದೇನೆ - ಡಿಕೆ ಶಿವಕುಮಾರ
ಹಾಸನ (ಏ.11) : ‘ನಂದಿನಿ’ ಎನ್ನುವುದು ಈ ನಾಡಿನ ರೈತರ ಬದುಕಿನ ಪ್ರಶ್ನೆ. ಹಾಗಾಗಿ ನಂದಿನಿ ಉತ್ಪನ್ನಗಳನ್ನು ಖರೀದಿಸುವ ಮೂಲಕ ರೈತರನ್ನು ಉಳಿಸಿ ಎಂದು ಕರೆಕೊಟ್ಟಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್, ನಂತರ ತಾವೂ ನಂದಿನಿ ಉತ್ಪನ್ನಗಳನ್ನು ಖರೀದಿಸಿದರು.
ನಗರದ ಹೇಮಾವತಿ ಪ್ರತಿಮೆ ಬಳಿ ಇರುವ ನಂದಿನಿ ಉತ್ಪನ್ನಗಳ ಮಾರಾಟ ಮಳಿಗೆಗೆ ಸೋಮವಾರ ಭೇಟಿ ನೀಡಿ ಹಾಲಿನ ಉತ್ಪನ್ನಗಳನ್ನು ಖರೀದಿಸಿದ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ರಾಜ್ಯದ ಸುಮಾರು 70 ಲಕ್ಷ ಮಂದಿ ರೈತರು ಹಾಲು ಉತ್ಪಾದಿಸುತ್ತಿರುವುದು ನಂದಿನಿ(Nandini brand)ಗೆ ಕೊಡಲು. ಗುಜರಾತ್‌ನ ಅಮೂಲ್(Amul milk) ಕೂಡ ರೈತರದ್ದು, ಅದಕ್ಕೆ ನಮ್ಮದೇನೂ ತಕರಾರಿಲ್ಲ. ಆದರೆ ಸರ್ಕಾರ ನಮ್ಮನ್ನು ಹಿಂದೆ ತಡೆದು ಅವರನ್ನು ಮುಂದಕ್ಕೆ ಬಿಟ್ಟು ಪ್ರೋತ್ಸಾಹ ಮಾಡುವ ಕೆಲಸ ಮಾಡುತ್ತಿರುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
Nandini VS Amul: ಅಮುಲ್ ವಿರುದ್ಧ ಕರವೇ ಹೋರಾಟ; ಅಮುಲ್ ಉತ್ಪನ್ನಗಳನ್ನು ರಸ್ತೆಗೆಸೆದು ಪ್ರತಿಭಟನೆ
ಈ ನಂದಿನಿ ನಮ್ಮವಳು, ನಮ್ಮ ಹಾಲು ನಮ್ಮ ಬದುಕು, ನಮ್ಮ ರೈತರು ಅದಕ್ಕೆ ಸಗಣಿ, ಬೂಸಾ, ಹುಲ್ಲು ಹಾಕಿದ್ದಾರೆ. ಎಲ್ಲಾ ಬೆಲೆಗಳು ಪ್ರಸ್ತುತ ಹೆಚ್ಚಾಗಿವೆ. ಆದರೆ ರೈತರಿಗೆ ಯಾವ ರೀತಿಯ ಸಹಾಯವೂ ಆಗುವುದಿಲ್ಲ. ರೈತರಿಗೆ ಹಾಲು ಉತ್ಪಾದಿಸಲು ಸರ್ಕಾರ ಸಹಾಯ ಮಾಡಿಲ್ಲ. ಈ ಮಧ್ಯೆ ನಮ್ಮ ಹಾಲನ್ನು ನಾವು ಮಾರಾಟ ಮಾಡಲಾಗದಿರುವ ಪರಿಸ್ಥಿತಿ ಇದೆ. ನಾವೇ ಪ್ರೋತ್ಸಾಹ ಕೊಟ್ಟು ಹಾಲು ಉತ್ಪಾದನೆ ಮಾಡಲು ಹೊರಟಿದ್ದೇವೆ. ನಮ್ಮ ರೈತರನ್ನು ಉಳಿಸಿಕೊಳ್ಳಬೇಕು ಎಂದು ನಂದಿನಿ ಪ್ರಚಾರಕರಾಗಿ ಡಾ.ರಾಜ್‌ಕುಮಾರ್ ಅವರೇ ಅಂಬಾಸಿಡರ್ ಆಗಿದ್ದರು. ಅದಾದ ಮೇಲೆ ಪುನೀತ್ ರಾಜ್‌ಕುಮಾರ್ ಅಂಬಾಸಿಡರ್ ಆಗಿ ಬಂದರು. ಹಾಗಾಗಿ ರಾಜ್‌ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ಅವರ ಆದರ್ಶಗಳನ್ನು ಇಂದು ನಾವು ಪಾಲಿಸಬೇಕಿದೆ ಎಂದರು ಡಿ.ಕೆ.ಶಿವಕುಮಾರ್. ಮುಖ್ಯಮಂತ್ರಿಗಳೇ ನೀವು ರಾಜ್‌ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ಬಗ್ಗೆ ಎಷ್ಟುಗೌರವದ ಮಾತು ಆಡಿದ್ದೀರಿ. ಪುನೀತ್ ರಾಜ್‌ಕುಮಾರ್(Dr Puneeth rajkumar)ಗೆ ನೀವು ಮಾತು ಕೊಟ್ಟಿದ್ದು ಸುಳ್ಳಾ! ಎಂದು ಪ್ರಶ್ನಿಸಿದರು.
Nandini VS Amul: ಮಹಿಳಾ ಕಾಂಗ್ರೆಸ್‌ನಿಂದ ನಂದಿನಿ ಉತ್ಪನ್ನಗಳ ಖರೀದಿಸುವ ಅಭಿಯಾನ
ಇನ್ನೊಂದು ತಿಂಗಳು ಇರ್ತೀರಿ ಆ ನಂತರ ಮುಗಿಯಿತು. ನಮ್ಮ ರೈತರಿಗೆ ಯಾಕ್ರೀ... ಅವಮಾನ ಮಾಡುತ್ತೀರಿ? ನಾನು ಪ್ರತಿಭಟನೆ ಮಾಡ್ತಿಲ್ಲ, ಬೆಳ್ಳಂಬೆಳಗ್ಗೆ ಹಾಲು, ಬಿಸ್ಕೆಟ್, ಮೈಸೂರು ಪಾಕ್, ಚಾಕೊಲೆಟ್ ತೆಗೆದುಕೊಂಡಿದ್ದೇನೆ. ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ರೀತಿ ನಮ್ಮ ಮಕ್ಕಳು, ನಮ್ಮ ಹಾಲು ಕುಡಿಬೇಕು ಎಂದು ನಮ್ಮ ಜನರಿಗೆ ಹೇಳಿದ್ದೇನೆ. ರೇಷ್ಮೆ ನಿಯಂತ್ರಣ ಮಾಡ್ತಿಲ್ವ, ಹೊರಗಡೆಯಿಂದ ಬರುವ ವಸ್ತುಗಳನ್ನು ತಡೀತಿಲ್ವ. ತೀರಾ ನಿಲ್ಲಿಸಿ ಅಂತ ಹೇಳುತ್ತಿಲ್ವಾ?, ಮುಕ್ತ ಮಾರುಕಟ್ಟೆಸರಿ ಅನಿಸುತ್ತದೆ. ಆದರೂ ನಮ್ಮ ರೈತರನ್ನು ಉಳಿಸಿಕೊಳ್ಳಬೇಕು ಎಂದರು.
10ಎಚ್‌ಎಸ್‌ಎನ್3, 3ಎ : ಹಾಸನ ನಗರದ ಹೇಮಾವತಿ ಪ್ರತಿಮೆ ಪಕ್ಕದಲ್ಲಿರುವ ನಂದಿನಿ ಬೂತ್‌ನಲ್ಲಿ ಹಾಲು, ಮೈಸೂರು ಪಾಕ್ ಖರೀದಿಸಿದ ಡಿ.ಕೆ.ಶಿವಕುಮಾರ್(DK Shivakumar).
