ದುರಸ್ತಿಗಾಗಿ 2 ತಾಸು ಮೆಟ್ರೋ ಸೇವೆ ಬಂದ್ | ನಿಮ್ಮ ಏರಿಯಾದಲ್ಲಿ ಮೆಟ್ರೋ ಸೇವೆ ಇದೆಯಾ..? ಯಾವ ಪ್ರದೇಶ, ಯಾವ ಸಮಯದಲ್ಲಿ ಮೆಟ್ರೊ ಇರಲ್ಲ..? ಇಲ್ಲಿ ನೋಡಿ
ಬೆಂಗಳೂರು(ಜ.09): ಬನಶಂಕರಿ ಮತ್ತು ಜಯನಗರ ಮೆಟ್ರೋ ನಿಲ್ದಾಣಗಳ ನಡುವೆ ದುರಸ್ತಿ ಕಾಮಗಾರಿ ಇರುವ ಹಿನ್ನೆಲೆಯಲ್ಲಿ ಭಾನುವಾರ (ಜ.10) ರಂದು ಬೆಳಗ್ಗೆ 7 ರಿಂದ 9 ಗಂಟೆಯವರೆಗೆ ಹಸಿರು ಮಾರ್ಗದ ನ್ಯಾಷನಲ್ ಕಾಲೇಜು ಮೆಟ್ರೋ ನಿಲ್ದಾಣದಿಂದ ಯಲಚೇನಹಳ್ಳಿ ಮೆಟ್ರೋ ನಿಲ್ದಾಣದವರೆಗೆ ಮೆಟ್ರೋ ಸೇವೆ ಇರುವುದಿಲ್ಲ.
ಆದರೆ ಈ ಸಮಯದಲ್ಲಿ ನ್ಯಾಷನಲ್ ಕಾಲೇಜ್ ನಿಲ್ದಾಣದಿಂದ ನಾಗಸಂದ್ರ ಮೆಟ್ರೋ ನಿಲ್ದಾಣದವರೆಗೆ ಮಾತ್ರ ಮೆಟ್ರೋ ಸೇವೆ ಲಭ್ಯ ಇರುತ್ತದೆ ಎಂದು ನಮ್ಮ ಮೆಟ್ರೋ ಪ್ರಕಟಿಸಿದೆ. ದುರಸ್ತಿಯ ನಂತರ 9 ಗಂಟೆಯ ನಂತರ ಮೆಟ್ರೋ ಸೇವೆ ಎಂದಿನಂತೆ ಇರಲಿದೆ. ನೇರಳೆ ಮಾರ್ಗದಲ್ಲಿ ಸೇವೆಯೂ ಎಂದಿನಂತೆ ಇರಲಿದೆ.
ಮೆಟ್ರೋ ಗೋದಾಮಿಗೆ ಬೆಂಕಿ
ನಗರದ ಆಡುಗೋಡಿ ಸಮೀಪದ ನಮ್ಮ ಮೆಟ್ರೋಗೆ ಸೇರಿದ ಗೋದಾಮಿನಲ್ಲಿ ಆಕಸ್ಮಿಕವಾಗಿ ಅಗ್ನಿ ದುರಂತ ಸಂಭವಿಸಿದ ಲಕ್ಷಾಂತರ ಮೌಲ್ಯದ ಆಸ್ತಿ-ಪಾಸ್ತಿಗೆ ಹಾನಿಯಾಗಿರುವ ಘಟನೆ ಶುಕ್ರವಾರ ನಡೆದಿದೆ. ಆದರೆ ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಆಡುಗೋಡಿ ಮೈಕೋ ಕಾರ್ಖಾನೆ ಹತ್ತಿರ ನಮ್ಮ ಮೆಟ್ರೋ ಕಾಮಗಾರಿ ನಡೆದಿದ್ದು, ಅಲ್ಲಿ ತಾತ್ಕಾಲಿಕ ಶೆಡ್‌ಗಳಲ್ಲಿ ಕಾರ್ಮಿಕರು ನೆಲೆಸಿದ್ದಾರೆ. ಸಮೀಪದಲ್ಲೇ ಸಾಮಗ್ರಿಗಳ ದಾಸ್ತಾನಿಗೆ ಗೋದಾಮು ಸ್ಥಾಪಿಸಲಾಗಿದೆ. ಇಲ್ಲಿ ಮರ, ಪ್ಲಾಸ್ಟಿಕ್, ಸೆಂಟ್ರಿಂಗ್ ಉಪಕರಣ, ಬಣ್ಣ, ಥಿನ್ನರ್, ಆಯಿಲ್ ಇನ್ನಿತರ ರಾಸಾಯನಿಕ ವಸ್ತುಗಳನ್ನು ಸಂಗ್ರಹಿಸಿದ್ದರು.
ಸಚಿವರಾಗುವ ಕನಸು ಕಂಡವರಿಗೆ ಮತ್ತೊಮ್ಮೆ ಶಾಕ್...!
ಗೋದಾಮು ಕೇಂದ್ರದಲ್ಲಿ ಸಂಜೆ 6.45ರ ಸುಮಾರಿಗೆ ಆಕಸ್ಮಿಕವಾಗಿ ಕಿಡಿ ಹೊತ್ತಿಕೊಂಡಿದ್ದು, ಕ್ಷಣಾರ್ಧದಲ್ಲಿ ಅಗ್ನಿ ಆವರಿಸಿದೆ. ಮಾಹಿತಿ ತಿಳಿದ ಕೂಡಲೇ ಅಗ್ನಿ ಶಾಮಕ ದಳದ ಸಿಬ್ಬಂದಿ, ಸ್ಥಳಕ್ಕೆ ತೆರಳಿ ಬೆಂಕಿ ನಂದಿಸಲು ಹರಸಾಹಸ ಪಡಬೇಕಾಯಿತು. ಕೆಮಿಕಲ್ ಸಂಗ್ರಹಿಸಿದ್ದ ಕ್ಯಾನ್‌ಗಳಿಗೆ ಬೆಂಕಿ ಬಿದ್ದ ಪರಿಣಾಮ ಬೇಗ ಅಗ್ನಿ ನಿಯಂತ್ರಿಸಲು ಆಗಲಿಲ್ಲ. ಕೊನೆಗೆ ಸತತ ಕಾರ್ಯಾಚರಣೆ ಬಳಿ ರಾತ್ರಿ 10 ಗಂಟೆಗೆ ಬೆಂಕಿ ನಂದಿಸುವಲ್ಲಿ ಯಶಸ್ಸು ಕಂಡಿದ್ದಾರೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Jan 9, 2021, 6:06 AM IST