ಬೆಂಗಳೂರು[ಜ.08]: ವಿವಿಧ  ಕಾರ್ಮಿಕ ಸಂಘಟನೆಗಳು ಬೇಡಿಕೆಗಳ ಈಡೇರಿಕೆಗಾಗಿ ಜನವರಿ 8 ಹಗೂ 9ರಂದು ಬಂದ್‌ಗೆ ಕರೆ ಕೊಟ್ಟಿವೆ. ಈ ಬಂದ್‌ಗೆ ಹಲವಾರು ಸಂಘಟನೆಗಳು ಬೆಂಬಲ ಸೂಚಿಸಿದ್ದವು, ಹೀಗಾಗಿ ಜನ ಸಮಾನ್ಯರಲ್ಲಿ ಕೊಂಚ ಗೊಂದಲವೇರ್ಪಟ್ಟಿತ್ತು. ಆದರೀಗ ರಾಜ್ಯದಲ್ಲಿ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. 

ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಎಂದಿನಂತೆ ಸಂಚಾರ ನಡೆಸುತ್ತಿದ್ದು, ಪ್ರಯಾಣಿಕರಿಗೆ ಹಾಗೂ ಉದ್ಯೋಗಿಗಳಿಗೆ ಕೊಂಚ ಸಮಾಧಾನ ನೀಡಿದೆ. ಇನ್ನು ವಿವಿಧ ಭಾಗಗಳಿಂದ ಬಂದ ಪ್ರಯಾಣಿಕರಿಗೂ ಇದು ನೆಮ್ಮದಿ ನೀಡಿದೆ.

ಪ್ರಯಾಣಿಕರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಮೆಟ್ರೋ ರೈಲು ಅಧಿಕಾರಿಗಳು ಸಂಚಾರವ್ನನು ಹೆಚ್ಚಿಸುವ ಚಿಂತನೆ ನಡೆಸಿದ್ದಾರೆ. ಇತ್ತ ಬಿಎಂಟಿಸಿ ಬಸ್‌ಗಳೂ ಓಡಾಟ ನಡೆಸಿವೆ, ಆದರೆ ಬಸ್ ಸಂಖ್ಯೆ ಸಾಮಾನ್ಯ ದಿನಕ್ಕಿಂತ ಕೊಂಚ ಕಡಿಮೆ ಇದೆ.