ರೋಹಿಣಿ ಸಿಂಧೂರಿ ಆದೇಶ ಬದಲಾಯಿಸಿದ ಮೈಸೂರು ನೂತನ ಡಿಸಿ
* ರೋಹಿಣಿ ಸಿಂಧೂರಿ ಆದೇಶವನ್ನು ಬದಲಾಯಿಸಿದ ಮೈಸೂರು ನೂತನ ಜಿಲ್ಲಾಧಿಕಾರಿ
* ಹೊಸ ಪ್ರಕಟಣೆ ಹೊರಡಿಸಿದ ಮೈಸೂರು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್
* ಈ ಹಿಂದೆ ರೋಹಿಣಿ ಸಿಂಧೂರಿ ಹೊರಡಿಸಿದ್ದ ಆದೇಶ ಹಿಂಪಡೆದ ಡಿಸಿ
ಮೈಸೂರು, (ಜೂನ್.07): ಜಿಲ್ಲೆಯಲ್ಲಿ ವಾರದಲ್ಲಿ ಮೂರು ದಿನ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿ ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೊರಡಿಸಿದ್ದ ಆದೇಶವನ್ನು ಬದಲಾಯಿಸಲಾಗಿದೆ.
ಹೌದು..ವಾರದಲ್ಲಿ ಮೂರು ದಿನ ಬೆಳಿಗ್ಗೆ 6ರಿಂದ ಬೆಳಿಗ್ಗೆ 10 ಗಂಟೆವರೆಗೆ ಮಾತ್ರ ಖರೀದಿಗೆ ಇದ್ದು ಅವಕಾಶವನ್ನು ಇದೀಗ ವಾರದ ಏಳು ದಿನಗಳ ವರೆಗೂ ನೀಡಲಾಗಿದೆ.
ಅಧಿಕಾರ ಹಸ್ತಾಂತರಕ್ಕೆ ಬಾರದೇ ಅಸಮಾಧಾನ ಹೊರಹಾಕಿದ ರೋಹಿಣಿ ಸಿಂಧೂರಿ
ನೂತನ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ರೋಹಿಣಿ ಸಿಂಧೂರಿ ಜೂನ್ 5ರಂದು ಹೊರಡಿಸಿದ್ದ ಆದೇಶವನ್ನು ಹಿಂಪಡೆದಿದ್ದು, ವಾರದ ಏಳೂ ದಿನ ಬೆಳಿಗ್ಗೆ 6ರಿಂದ ಬೆಳಿಗ್ಗೆ 10 ಗಂಟೆವರೆಗೆ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ.
ಸರ್ಕಾರದ ಹಿಂದಿನ ಮಾರ್ಗಸೂಚಿ ಪ್ರಕಾರ ಪ್ರತಿ ದಿನ ಬೆಳಿಗ್ಗೆ 6ರಿಂದ ಬೆಳಿಗ್ಗೆ 10 ಗಂಟೆ ವರೆಗೆ ಚಟುವಟಿಕೆಗಳಿಗೆ ಅವಕಾಶವಿರಲಿದೆ ಎಂದು ಡಾ.ಬಗಾದಿ ಗೌತಮ್ ಸೋಮವಾರ ಪ್ರಕಟಣೆ ಹೊರಡಿಸಿದ್ದಾರೆ.
ಜೂನ್ 7ರಿಂದ ಸೋಮವಾರ, ಬುಧವಾರ ಹಾಗೂ ಶುಕ್ರವಾರ ಬೆಳಿಗ್ಗೆ 6ರಿಂದ ಬೆಳಿಗ್ಗೆ 10 ಗಂಟೆವರೆಗೆ ಮಾತ್ರ ಖರೀದಿಗೆ ರೋಹಿಣಿ ಸಿಂಧೂರಿ ಅವಕಾಶ ನೀಡಿದ್ದರು.