ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಹೆಸರು ಕೇಳಿಬಂದ ಬೆನ್ನಲ್ಲೇ ಶೃಂಗೇರಿ ಶ್ರೀಮಠಕ್ಕೆ ಯದುವೀರ್ ಒಡೆಯರ್  ಭೇಟಿ!

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಸ್ಪರ್ಧೆಗೆ ಹೆಸರು ಕೇಳಿ ಬರುತ್ತಿರುವ ಬೆನ್ನಲ್ಲೇ ರಾಜವಂಶಸ್ಥ ಯದುವೀರ್ ಒಡೆಯ‌ರ್ ಟೆಂಪಲ್ ರನ್ ನಲ್ಲಿ ತೊಡಗಿದ್ದು ಚಿಕ್ಕಮಗಳೂರು ಜಿಲ್ಲೆಯ  ಶೃಂಗೇರಿಯ ಶಾರದಾಂಭೆ ದರ್ಶನ ಪಡೆದಿದ್ದಾರೆ. 

Mysuru Loksabha election 2024 Yaduveer Wodeyar who visited Sringeri Sharadambe today rav

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

ಚಿಕ್ಕಮಗಳೂರು (ಮಾ.10): ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಸ್ಪರ್ಧೆಗೆ ಹೆಸರು ಕೇಳಿ ಬರುತ್ತಿರುವ ಬೆನ್ನಲ್ಲೇ ರಾಜವಂಶಸ್ಥ ಯದುವೀರ್ ಒಡೆಯ‌ರ್ ಟೆಂಪಲ್ ರನ್ ನಲ್ಲಿ ತೊಡಗಿದ್ದು ಚಿಕ್ಕಮಗಳೂರು ಜಿಲ್ಲೆಯ  ಶೃಂಗೇರಿಯ ಶಾರದಾಂಭೆ ದರ್ಶನ ಪಡೆದಿದ್ದಾರೆ. 

ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಕಿರಿಯ ಶ್ರೀಗಳಾದ ವಿಧುಶೇಖರ ಭಾರತೀ ತೀರ್ಥರ ಆಶೀರ್ವಾದ ಪಡೆದರು. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ(Mysuru kodagu Loksabha constituency)ಕ್ಕೆ ಬಿಜೆಪಿ ಟಿಕೆಟ್ ಲಿಸ್ಟ್ ನಲ್ಲಿ ಸಂಭಾವ್ಯರಲ್ಲಿ ಹೆಸರು ಕೇಳಿ ಬರುತ್ತಿರುವ ಮೈಸೂರು ರಾಜ ವಂಶಸ್ಥ ಯದುವೀ‌ರ್ ಕೃಷ್ಣದತ್ತ ಒಡೆಯ‌ರ್(Yaduveer Krishnadatta Wodeyar) ಚಿಕ್ಕಮಗಳೂರಿನ ಶೃಂಗೇರಿ ದೇಗುಲಕ್ಕೆ ಭೇಟಿ ನೀಡಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾದರು. ಬಳಿಕ  ಶೃಂಗೇರಿ ಶ್ರೀ ಶಾರದಾಂಬೆ ದರ್ಶನ ಪಡೆದರು.

ನಾನು ಗೆದ್ದರೇ ಸಿದ್ದರಾಮಯ್ಯ ಸೀಟು ಅಲುಗಾಡುತ್ತೆ, ನನ್ನ ಸೋಲಿಸಲು ಆಗುವುದಿಲ್ಲ: ಪ್ರತಾಪ್‌ ಸಿಂಹ
 
ಮುಂಬರುವ ಲೋಕಸಭಾ ಚುನಾವಣೆಗೆ ಮೈಸೂರು ಕೊಡಗು ಕ್ಷೇತ್ರಕ್ಕೆ ಹಾಲಿ ಸಂಸದ ಪ್ರತಾಪ ಸಿಂಹ ಬದಲಾಗಿ ಯದುವೀರ್ ಒಡೆಯರ್ ಸ್ಪರ್ಧಿಸುವ ಕುರಿತು ಚರ್ಚೆ ನಡೆದಿರುವ ಹೊತ್ತಲ್ಲಿ ಟೆಂಪಲ್ ರನ್ ಮಾಡಿರುವುದು ಸ್ಪರ್ಧಿಸುವ ಸುಳಿವು ನೀಡಿದ್ದಾರೆ.
ಶ್ರೀಮಠಕ್ಕೂ ಮೈಸೂರು ಸಂಸ್ಥಾನಕ್ಕೂ ಅವಿನಾಭಾವ ಸಂಬಂಧ : 

ಶೃಂಗೇರಿ ಶ್ರೀಮಠಕ್ಕೂ ಮೈಸೂರು ಸಂಸ್ಥಾನಕ್ಕೂ ಅವಿನಾಭಾವ ಸಂಬಂಧವಿದ್ದು, ಹಿಂದೆಯೂ ಹಲವು ಕಾರ್ಯಕ್ರಮಗಳಿಗೆ ಶೃಂಗೇರಿಗೆ ಮೈಸೂರು ರಾಜವಂಶಸ್ಥರು ಭೇಟಿ ನೀಡಿದ್ದಾರೆ. ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಆದರೆ ಈಗ ಬಿಜೆಪಿ ಪಕ್ಷದಿಂದ ಮೈಸೂರು ಕೊಡಗು ಕ್ಷೇತ್ರಕ್ಕೆ ಯದುವೀರ್ ಹೆಸರು ಕೇಳಿಬರುತ್ತಿರುವ ಹಿನ್ನೆಲೆ ಶೃಂಗೇರಿ ಮಠಕ್ಕೆ ಭೇಟಿ ನೀಡಿರುವುದು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

ಸಂಸದರ ಟಿಕೆಟ್ ನಿರ್ಧಾರ ಮಾಡೋದು ಜನರು: ಸಂಸದ ಪ್ರತಾಪ್ ಸಿಂಹ

ಕಳೆದೆರಡು ಬಾರಿ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಮೈಸೂರು ಕೊಡಗು ಭಾಗಗಳಲ್ಲಿ ಅಭಿವೃದ್ಧಿ ಮಾಡುವ ಮೂಲಕ ರಾಜ್ಯಾದ್ಯಂತ ಮೆಚ್ಚುಗೆ ಪಾತ್ರರಾಗಿರುವ ಸಂಸದ ಪ್ರತಾಪ್ ಸಿಂಹರಿಗೆ ಈ ಬಾರಿ ಟಿಕೆಟ್ ಕೈತಪ್ಪುವ ಆತಂಕ ಎದುರಾಗಿದೆ. ಲೋಕಸಭಾ ಕಲಾಪದ ವೇಳೆ ಕಲರ್ ಗ್ಯಾಸ್ ಸಿಡಿಸಿದ್ದು, ಒಂದು ಕಾರಣವಾದರೆ, ಇನ್ನೊಂದು ಸಹೋದರನ ಪ್ರಕರಣ ಸಂಸದ ಪ್ರತಾಪ್ ಸಿಂಹರಿಗೆ ಟಿಕೆಟ್ ಸಿಗದೇ ಇರುವುದಕ್ಕೆ ಕಾರಣವಾಗಿದೆ ಎಂದು ಹೇಳಲಾಗ್ತಿದೆ. ಆದರೆ ಟಿಕೆಟ್ ಯಾರಿಗೆ ಎಂಬ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ. ಅದ್ಯಾಗೂ ಸಂಸದ ಪ್ರತಾಪ್ ಸಿಂಹರು ಮಾಧ್ಯಮಗಳೊಂದಿಗೆ ಭಾವನಾತ್ಮಕವಾಗಿ ಹೇಳಿಕೆ ನೀಡುತ್ತಿರುವುದು ನೋಡಿದರೆ ಟಿಕೆಟ್ ಕೈತಪ್ಪಿದೆ ಎಂಬ ಅನುಮಾನ ಉಂಟುಮಾಡಿದೆ. ಸಂಸದ ಪ್ರತಾಪ್ ಸಿಂಹರ ಬದಲಿಗೆ ಯದುವೀರ್ ಗೆ ಟಿಕೆಟ್ ನೀಡಲು ಹೈಕಮಾಂಡ್ ಮುಂದಾಗಿದೆ ಹೀಗಾಗಿ ಯದುವೀರ್ ಟೆಂಪಲ್ ರನ್ ಮಹತ್ವ ಪಡೆದುಕೊಂಡಿದೆ.

Latest Videos
Follow Us:
Download App:
  • android
  • ios