Asianet Suvarna News Asianet Suvarna News

ಸಾವಿರ ಮೆಟ್ಟಿಲು ಹತ್ತಿ ಚಾಮುಂಡೇಶ್ವರಿ ತಾಯಿ ದರ್ಶನ ಪಡೆದ ಕೇಂದ್ರ ಸಚಿವ ಶೋಭಾ ಕರಾಂದ್ಲಾಜೆ

ಪ್ರತಿವರ್ಷದಂತೆ ಈ ವರ್ಷ ಕೂಡ ತಾಯಿ ಚಾಮುಂಡೇಶ್ವರಿ ದರ್ಶನ ಪಡೆಯುತ್ತಿದ್ದೇನೆ. ರಾಜ್ಯ, ದೇಶಕ್ಕೆ ಒಳ್ಳೇಯದಾಗಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.

Mysuru dasara 2024 Union Minister Shobha Karandlaje visited Chamundeshwari temple rav
Author
First Published Oct 10, 2024, 8:56 PM IST | Last Updated Oct 10, 2024, 8:56 PM IST

ಮೈಸೂರು (ಅ.10): ಪ್ರತಿವರ್ಷದಂತೆ ಈ ವರ್ಷ ಕೂಡ ತಾಯಿ ಚಾಮುಂಡೇಶ್ವರಿ ದರ್ಶನ ಪಡೆಯುತ್ತಿದ್ದೇನೆ. ರಾಜ್ಯ, ದೇಶಕ್ಕೆ ಒಳ್ಳೇಯದಾಗಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.

ನವರಾತ್ರಿ ಹಿನ್ನೆಲೆ ಇಂದು ಚಾಮುಂಡಿಬೆಟ್ಟಕ್ಕೆ ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆದರು. ಅದಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ದೇಶದಲ್ಲಿ ಅಭಿವೃದ್ದಿ, ರಕ್ಷಣೆ ಆಗ್ತಿದೆ. ಮೋದಿ ತಂಡದಲ್ಲಿ ನನಗೂ ಮತ್ತೊಂದು ಅವಕಾಶ ಸಿಕ್ಕಿದೆ. ಮೋದಿಯವರು ಉಪವಾಸ ಇದ್ದಾರೆ. ತುಂಬಾ ಜನ ಉಪವಾಸ ಮಾಡಿ ಇಲ್ಲಿಗೆ ಬಂದು ತಾಯಿಯ ದರ್ಶನ ಮಾಡ್ತಾರೆ. ಅದೇ ರೀತಿ ನಾನು ಎಲ್ಲ ಭಕ್ತರಂತೆ ದರ್ಶನಕ್ಕೆ ಬಂದಿದ್ದೇನೆ. ನಾಳೆ ಪ್ರತಿ ವರ್ಷದಂತೆ ಕಾವಡಿಗರು ಮಾವುತರಿಗೆ ಉಪಹಾರ ವ್ಯವಸ್ಥೆ ಮಾಡಲಿದ್ದೇವೆ. ಎಲ್ಲರಿಗೂ ಒಳ್ಳೆಯದಾಗಲಿ ಎಂದರು.

ದಸರಾ ಹಬ್ಬಕ್ಕೆ ಊರಿಗೆ ಹೋಗುವ ಪ್ರಯಾಣಿಕರಿಗೆ ಗುಡ್‌ನ್ಯೂಸ್, 2000 ಹೆಚ್ಚುವರಿ ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ!

ನಾನು ರಾಜ್ಯ ಸರ್ಕಾರದಲ್ಲಿದ್ದಾಗ ವೈಭವದ ದಸರಾ ಆಗಿತ್ತು. ಹೊಸ ಆಯಾಮ ಕೊಟ್ಟು, ಹೊಸ ಯೋಜನೆ ಮಾಡಿದ್ದೇವು. ಮೊದಲ ಬಾರಿ ಮಾಹಿಳಾ ದಸರಾ ಮಾಡಿದ್ದೇವು. ಹಳ್ಳಿಯವರಿಗೆ ಮೈಸೂರು ತೋರಿಸುವ ಕೆಲಸ ಮಾಡಿದ್ದೇವು. ಇದನ್ನ ಎಲ್ಲಾ ಸರ್ಕಾರ ಮುಂದುವರಿಸಬೇಕು, ದಸರಾ ಕೇವಲ ಸರ್ಕಾರದ ದಸರಾ ಜನರ ದಸರಾ ಆಗಬೇಕು. ಹಿಂದೆ ಮಹಾರಾಜರ ದಸರಾ, ಈಗ ಜನರ ದಸರಾ ಆಗಬೇಕು ಅನ್ನೋ ಅಪೇಕ್ಷೆ ಇತ್ತು. ಆದರೆ ಈಗ ಕೆಲವನ್ನ ಇಟ್ಟುಕೊಂಡಿದ್ದಾರೆ, ಕೆಲವನ್ನ ಬಿಟ್ಟಿದ್ದಾರೆ. ಸರ್ಕಾರದ ಬಳಿ ನಾವು ಮನವಿ ಮಾಡೋದು ಇಷ್ಟೆ, ನಮ್ಮ ಸಂಸ್ಕೃತಿ ಉಳಿಸಿಕೊಳ್ಳಬೇಕು, ಬೆಟ್ಟದಲ್ಲಿ ಭಕ್ತರಿಗೆ ಇನ್ನಷ್ಟು ಯೋಜನೆ ಆಗಬೇಕಿದೆ. ಹೊಸ ಕಟ್ಟಡಗಳಿಂದ ಬೆಟ್ಟಕ್ಕೆ ಹಾನಿಯಾಗುವ ಆತಂಕವೂ ಇದೆ, ಬೆಟ್ಟವನ್ನು ಹಾಗೆ ಉಳಿಸಿಕೊಳ್ಳಬೇಕು ಎಂದರು.

ಮುಡಾ ಪ್ರಕರಣ: ಸಿದ್ದರಾಮಯ್ಯ ಅನೈತಿಕ ಸಿಎಂ

ಇದೇ ವೇಳೆ ಮುಡಾ ಹಗರಣ ಪ್ರಸ್ತಾಪಿಸಿದ ಕೇಂದ್ರ ಸಚಿವೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅನೈತಿಕವಾಗಿ ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತಿದ್ದಾರೆ. ಎರಡು ಕೇಸ್ ನಲ್ಲಿ ಅವರು ಅಪರಾಧಿಯಾಗಿದ್ದಾರೆ. ಒಂದು ಮುಡಾ ಸೈಟ್ ವಿಚಾರದಲ್ಲಿ ಸೈಟ್ ವಾಪಸ್ ಕೊಟ್ಟು ಸಿಕ್ಕಿಬಿದ್ದಿದ್ದರೆ, ಇನ್ನೊಂದು ವಾಲ್ಮೀಕಿ ಹಗರಣ. ಇಡಿ ಅಧಿಕಾರಿಗಳು ಸಹ ವಾಲ್ಮೀಕಿ ಹಗರಣ ಸಂಬಂಧ ಚುನಾವಣಾ ಬಳಕೆಯಾಗಿರೋ ಬಗ್ಗೆ ಪ್ರೆಸ್ ರಿಲೀಸ್ ಮಾಡಿದೆ. ಜನರ ದುಡ್ಡನ್ನ ಚುನಾವಣಾ ಸಲುವಾಗಿ ಉಪಯೋಗ ಮಾಡಿದ್ದಾರೆ. ಅಧಿಕಾರಿ ಸೂಸೈಡ್ ಆಗಿದೆ, ಮಂತ್ರಿ ರಾಜೀನಾಮೆ ಆಗಿದೆ. ಸಿದ್ದರಾಮಯ್ಯರೆ ಹಣಕಾಸು ಸಚಿವ, ಮುಖ್ಯಮಂತ್ರಿಯಾಗಿದ್ದಾರೆ. ನಮ್ಮ ರಾಜ್ಯದ ದುಡ್ಡುಆಂಧ್ರ, ಬಳ್ಳಾರಿ ಚುನಾವಣೆಗೆ  ಹೋಗಿದೆ. ಇದ‌ನ್ನ ಇಡಿ, ಹಾಗೂ ಬೇರೆ ಸಂಸ್ಥೆಗಳು ಕೂಡ ಹೇಳಿವೆ. ಎರಡು ಗಂಭೀರ ಕೇಸ್ ನಲ್ಲಿ ಅಪರಾಧಿಯಾಗಿರುವ ಸಿದ್ದರಾಮಯ್ಯ ಸಿಎಂ ಸ್ಥಾನದಲ್ಲಿ ಮುಂದುವರಿಯುವ ನೈತಿಕತೆ ಇಲ್ಲ. ತಕ್ಷಣ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ದೀಪಾವಳಿ ಹಬ್ಬಕ್ಕೂ ವಿಶೇಷ ರೈಲುಗಳನ್ನು ಬಿಟ್ಟ ರೈಲ್ವೆ ಇಲಾಖೆ: ಇಲ್ಲಿದೆ ನೋಡಿ ಮಾಹಿತಿ

ಭ್ರಷ್ಟಾಚಾರ ಮಾಡಿಲ್ಲ, ಪ್ರಾಮಾಣಿಕ ರಾಜಕಾರಣಿ, ಕಪ್ಪು ಚುಕ್ಕೆ ಇಲ್ಲ ಎಂದು ಹೇಳಿಕೊಳ್ಳುವ ಇದೇ ಸಿದ್ದರಾಮಯ್ಯ ಹಿಂದೆ ಲೋಕಾಯುಕ್ತವನ್ನೇ ತೆಗೆದುಹಾಕಿದ್ದರು. ಈ ಬಾರಿ ಕೂಡ ಪ್ರಭಾವ ಮುಡಾ ಹಗರಣದ ತನಿಖೆಯಲ್ಲಿ ಲೋಕಾಯುಕ್ತ ತನಿಖೆಯಲ್ಲಿ ಪ್ರಭಾವ ಬೀರುತ್ತಿದೆ ಅನ್ನಿಸುತ್ತಿದೆ. ಸೈಟ್ ವಾಪಸ್ ಮಾಡಿದ್ದು ಕಣ್ಮುಂದೆ ಇದೆ. ಅವರ ಕುಟುಂಬದವರೇ ಪತ್ರ ಬರೆದು ವಾಪಸ್ ಕೊಟ್ಟಿದ್ದಾರೆ ಯಾರ ತಪ್ಪು? 1992 ರಿಂದ ಒಂದಲ್ಲ ಒಂದು ಸಾಂವಿಧಾನಿಕ ಸ್ಥಾನದಲ್ಲಿದ್ದಾರೆ. ಹೀಗಿರುವಾಗ ಇವರಿಗೆ ಗೊತ್ತಿಲ್ಲದೆ ಈ ರೀತಿ ಆಗಿದೆ ಅನ್ನೋದನ್ನ ನಂಬಲು ಸಾಧ್ಯವೇ? ಒಂದು ವೇಳೆ ಹಾಗೇ ಹಾಗಿದ್ರೆ ಇವರು ರಾಜಕೀಯದಲ್ಲಿ ಇರಲು ಅವರು ಲಾಯಕ್ಕಲ್ಲ ಎಂದು ವಾಗ್ದಾಳಿ ನಡೆಸಿದರು.

Latest Videos
Follow Us:
Download App:
  • android
  • ios