Asianet Suvarna News Asianet Suvarna News

ದಸರಾ ಆನೆಗಳ ತೂಕ ಪರೀಕ್ಷೆ: ಅಂಬಾರಿ ಹೊತ್ತ ಅಭಿಮನ್ಯುವಿನ ತೂಕ ಈಗ ಎಷ್ಟಿದೆ ಗೊತ್ತಾ?

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿ ಮೆರವಣಿಗೆಯಲ್ಲಿ ಅತ್ಯುತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿದ ಗಜಪಡೆಗೆ ಬುಧವಾರ ತೂಕ ಪರೀಕ್ಷೆ ಮಾಡಲಾಯಿತು.

mysuru dasara 2023 elephants weight test Abhimanyus weight increased by 300 kg gvd
Author
First Published Oct 25, 2023, 10:25 PM IST | Last Updated Oct 25, 2023, 10:31 PM IST

ಮೈಸೂರು (ಅ.25): ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿ ಮೆರವಣಿಗೆಯಲ್ಲಿ ಅತ್ಯುತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿದ ಗಜಪಡೆಗೆ ಬುಧವಾರ ತೂಕ ಪರೀಕ್ಷೆ ಮಾಡಲಾಯಿತು. ಹಿರಿಯ ಆನೆ ಈ ಹಿಂದೆ ಅಂಬಾರಿ ಹೊರುತ್ತಿದ್ದ ಅರ್ಜುನನೇ ಹೆಚ್ಚು ತೂಕ ಹೊಂದಿರುವ ಆನೆಯಾಗಿದೆ. ಈ ಬಾರಿ ಅಂಬಾರಿಯನ್ನು ಯಶಸ್ವಿಯಾಗಿ ಹೊತ್ತ ಅಭಿಮನ್ಯು 5460 ಕೆಜಿ ತೂಕ ಹೊಂದಿದ್ದಾನೆ.

ಮೈಸೂರಿನ ಧನ್ವಂತರಿ ರಸ್ತೆಯಲ್ಲಿರುವ ಸಾಹಿರಾಮ್ ಅಂಡ್ ಕೊ ಎಲೆಕ್ಟ್ರಾನಿಕ್ ವೇ ಬ್ರಿಡ್ಜ್ ನಲ್ಲಿ ಡಿಸಿಎಫ್ ಸೌರಭ್ ಕುಮಾರ್ ಸಮ್ಮುಖದಲ್ಲಿ 14 ಆನೆಗಳ ತೂಕ ಪರೀಕ್ಷೆ ಮಾಡಲಾಯಿತು. ಅರ್ಜುನ- 5850 ಕೆ ಜಿ ತೂಕ ಹೊಂದಿದ್ದು, ಸುಗ್ರೀವ – 5310 ಕೆ ಜಿ, ಗೋಪಿ – 5240, ಧನಂಜಯ – 5180, ಕಂಜನ್ – 4505, ಹಿರಣ್ಯ – 3025, ರೋಹಿತ್ – 3620, ಪ್ರಶಾಂತ್ – 5215, ವಿಜಯ – 2845, ಭೀಮ – 4870, ಲಕ್ಷ್ಮೀ – 3365, ಮಹೇಂದ್ರ – 4835, ವರಲಕ್ಷ್ಮೀ – 3225 ತೂಕ ಹೊಂದಿವೆ. ದಸರಾ ಆನೆಗಳ ಮೊದಲ ತಂಡ ಸೆ. 7ರಂದು ಮೈಸೂರು ಅರಮನೆ ಆವರಣಕ್ಕೆ ಆಗಮಿಸಿದಾಗ ತೂಕ ಮಾಡಿದಾಗ ಕ್ಯಾಪ್ಟನ್ ಆನೆ ಅಭಿಮನ್ಯು 5,160 ಕೆಜಿ ತೂಕ ಹೊಂದಿದ್ದ ಈಗ 300 ಕೆಜಿ ತೂಕ ಏರಿಸಿಕೊಂಡಿದೆ. ಭೀಮ 4870 ಕೆಜಿ ತೂಕವಿದ್ದು ಹೆಸರಿಗೆ ತಕ್ಕಂತೆ 500 ಕೆಜಿ ತೂಕ ಹೆಚ್ಚಿಸಿಕೊಂಡಿದ್ದಾನೆ.

ಹುಲಿ ಚರ್ಮದ ಮೇಲೆ ಕುಳಿತ ವಿನಯ್ ಫೋಟೋ ವೈರಲ್: ಆಧಾರ ಸಹಿತವಾಗಿ ಸ್ಪಷ್ಟನೆ ಕೊಟ್ಟ ಗುರೂಜಿ

ಒಟ್ಟು 14 ಆನೆಗಳು ನಗರಕ್ಕೆ ಬಂದ ಆರಂಭದಲ್ಲಿ ಇದ್ದ ತೂಕ!
ಸುಗ್ರೀವ - 5035
ಗೋಪಿ -  5080
ಧನಂಜಯ - 4940
ಕಂಜನ್  - 4240
ಹಿರಣ್ಯ  - 2915
ರೋಹಿತ್ - 3350
ಪ್ರಶಾಂತ - 4970
ಅಭಿಮನ್ಯು - 5160
ವಿಜಯ -  2830
ಭೀಮ - 4370
ಲಕ್ಷ್ಮೀ - 3235
ಮಹೇಂದ್ರ - 4530
ವರಲಕ್ಷ್ಮಿ - 3020
ಅರ್ಜುನ- 5680

ಒಟ್ಟಿನಲ್ಲಿ ಕಾಡಿನಿಂದ ನಾಡಿಗೆ ಬಂದಿದ್ದ ಗಜಪಡೆ ತಮ್ಮ ಜವಾಬ್ದಾರಿಯನ್ನ ಅಚ್ಚುಗಟ್ಟಾಗಿ ನಿಭಾಯಿಸಿವೆ. ಆ ಮೂಲಕ ಸಾರ್ಥಕತೆ ಮೂಲಕ ಅರಮನೆ ಅಂಗಳದಲ್ಲಿ ರಿಲ್ಯಾಕ್ಸ್ ಗೆ ಜಾರಿವೆ.

Latest Videos
Follow Us:
Download App:
  • android
  • ios