Asianet Suvarna News Asianet Suvarna News

ಮೈಸೂರು ದಸರಾ, ಎಷ್ಟೊಂದು ಸುಂದರ, ಜಂಬೂ ಸವಾರಿ; ನೋಡೋಣ ಬನ್ನಿ ರೀ.. !

ವಿಶ್ವ ವಿಖ್ಯಾತ ಮೈಸೂರು ದಸರಾವನ್ನು ಈ ಬಾರಿ ಸರಳವಾಗಿ ಆಚರಿಸಲಾಯಿತು. ಕೋರೊನಾ ಹಿನ್ನಲೆಯಲ್ಲಿ ಸಾವಿರಾರು ಜನ ಸೇರುವುದಕ್ಕೆ ಬ್ರೇಕ್ ಹಾಕಲಾಗಿದೆ. ಜಂಬೂ ಸವಾರಿಗೆ ಕೇವಲ 300 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಅರಮನೆ ಆವರಣದಲ್ಲಿ ಮಾತ್ರ ಜಂಬೂ ಸವಾರಿ ನಡೆಸಲಾಗಿದೆ. 

Mysuru Dasara 2020 Jamboo Savari Procession hls
Author
Bengaluru, First Published Oct 26, 2020, 4:52 PM IST

ಬೆಂಗಳೂರು (ಅ. 26): ವಿಶ್ವ ವಿಖ್ಯಾತ ಮೈಸೂರು ದಸರಾವನ್ನು ಈ ಬಾರಿ ಸರಳವಾಗಿ ಆಚರಿಸಲಾಯಿತು. ಕೋರೊನಾ ಹಿನ್ನಲೆಯಲ್ಲಿ ಸಾವಿರಾರು ಜನ ಸೇರುವುದಕ್ಕೆ ಬ್ರೇಕ್ ಹಾಕಲಾಗಿದೆ. ಜಂಬೂ ಸವಾರಿಗೆ ಕೇವಲ 300 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಅರಮನೆ ಆವರಣದಲ್ಲಿ ಮಾತ್ರ ಜಂಬೂ ಸವಾರಿ ನಡೆಸಲಾಗಿದೆ.

 

6 ಕಲಾ ತಂಡಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ದಸರಾ ಸರಳವಾಗಿದ್ದರೂ ಮಾಡುತ್ತಿದ್ದ ಎಲ್ಲಾ ಸಂಪ್ರದಾಯಗಳನ್ನು ಪಾಲಿಸಲಾಗಿದೆ. 750 ಕೆಜಿ ಚಿನ್ನದ ಅಂಬಾರಿಯನ್ನು ಹೊತ್ತು ಅರ್ಜುನ ಸಾಗಲಿದ್ದಾನೆ. ಅರ್ಜುನನಿಗೆ ವಿಕ್ರಮ ಹಾಗೂ ಗೋಪಿ ಸಾಗಲಿದ್ದಾರೆ.

3.21ಕ್ಕೆ ಜಂಬೂಸವಾರಿ ಮೆರವಣಿಗೆ ಆರಂಭವಾಯಿತು. 3.54 ಕ್ಕೆ  ಸಿಎಂ ಬಿಎಸ್‌ವೈ ಪುಷ್ಪರ್ಚನೆ ಮಾಡಿದರು.  4.15ಕ್ಕೆ ಮುಕ್ತಾಯಗೊಂಡಿತು. 

 ಅರಮನೆ ಸುತ್ತಲಿನ‌ ಸಂಚಾರ ಸಹಜ ಸ್ಥಿತಿಗೆ ಮರಳಿದೆ.  ಜಂಬೂ ಸವಾರಿ ಕಾರಣದಿಂದಾಗಿ ಬ್ಯಾರಿಕೇಡ್ ಹಾಕಿ ಸಂಚಾರ ನಿರ್ಬಂಧಿಸಲಾಗಿತ್ತು.

"

ಇದೀಗ ಎಲ್ಲಾ ಕಡೆ ತೆರವುಗೊಳಿಸಿ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. 

"

Follow Us:
Download App:
  • android
  • ios