ಮೈಸೂರಿನ ಐತಿಹಾಸಿಕ ರಸ್ತೆಗೆ ಮುಡಾ ಆರೋಪಿ ಸಿದ್ದರಾಮಯ್ಯರ ಹೆಸರಿಡುವುದು ವಿಷಾದನೀಯ: ಸ್ನೇಹಮಯಿ ಕೃಷ್ಣ
ಮೈಸೂರು ನಗರದ ರಸ್ತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿಡುವ ವಿಚಾರಕ್ಕೆ ನಾಗರಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಮುಡಾ ಹಗರಣದಲ್ಲಿ ಆರೋಪಿಯಾಗಿರುವ ಸಿದ್ದರಾಮಯ್ಯ ಹೆಸರನ್ನು ರಸ್ತೆಗೆ ಇಡುವುದು ಸರಿಯಲ್ಲ ಎಂದು ಪರಿಸರವಾದಿ ಭಾನು ಮೋಹನ್ ಮತ್ತು ಸಾಮಾಜಿಕ ಕಾರ್ಯಕರ್ತ ಪ್ರಿಯಾಕೃಷ್ಣ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮೈಸೂರು (ಡಿ.24): ನಗರದ ರಸ್ತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿಡುವ ವಿಚಾರಕ್ಕೆ ಮೈಸೂರಿನ ನಾಗರಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಮೈಸೂರು ಮಹಾನಗರ ಪಾಲಿಕೆಯಲ್ಲಿ ಆಕ್ಷೇಪಣೆ ಸಲ್ಲಿಸಿರುವ ಮೈಸೂರು ನಿವಾಸಿ, ಪರಿಸರವಾದಿ ಭಾನು ಮೋಹನ್ ಎಂಬುವವರು, ಮೈಸೂರು ರಸ್ತೆಗೆ ಸಿದ್ದರಾಮಯ್ಯ ಹೆಸರಿಡಲು ಅವರು ಏನು ಜನಸೇವೆ ಮಾಡಿದ್ದಾರೆ ಎಂದು ಪ್ರಶ್ನಿಸಿದ್ದಲ್ಲದೇ, ಯಾವುದೇ ರಾಜಕಾರಣಿಗಳು ತಮ್ಮ ಸ್ವಂತ ಹಣದಿಂದ ಸೇವೆ ಮಾಡಲ್ಲ. ಇಂದಿಗೂ ಮೈಸೂರು ಕೆಆರ್ ಆಸ್ಪತ್ರೆಯಲ್ಲಿ ನಾಗರೀಕರಿಗೆ ಯಾವುದೇ ಸೇವೆಗಳು ಸಿಗುತ್ತಿಲ್ಲ. ಮೊದಲು ಅದನ್ನು ಸರಿಪಡಿಸಲು ಮುಂದಾಗಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ ಈಗಾಗಲೇ ಮುಡಾ ಹಗರಣದಲ್ಲಿ ತನಿಖೆ ಎದುರಿಸುತ್ತಿದ್ದಾರೆ ಹೀಗಿರುವಾಗ ಅವರ ಹೆಸರನ್ನು ಕೆಆರ್ ರಸ್ತೆಯ ಒಂದು ಭಾಗಕ್ಕೆ ನಾಮಕರಣ ಮಾಡಲು ನಮ್ಮ ಆಕ್ಷೇಪವಿದೆ. ಹೀಗಾಗಿ ನಾನು ಆಕ್ಷೇಪಣೆ ಸಲ್ಲಿಸಿದ್ದೇನೆ ಹೇಳಿದ್ದಾರೆ.
ಮುಡಾ ಪ್ರಕರಣದಿಂದ ಹಿಂದೆ ಸರಿಯುವಂತೆ ಬಿಜೆಪಿ ಮುಖಂಡನಿಂದಲೇ ಸ್ನೇಹಮಯಿ ಕೃಷ್ಣಗೆ ಆಮಿಷ?!
ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಪ್ರತಿಕ್ರಿಯೆ:
ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಆರೋಪಿ ಸ್ಥಾನದಲ್ಲಿ ಇದ್ದಾರೆ. ನಾನು ಮಾಡಿರೋ ಆರೋಪದಲ್ಲಿ ಎ1 ಆರೋಪಿ ಆಗಿದ್ದಾರೆ. ಅಂತಹ ಆರೋಪಿಯ ಹೆಸರನ್ನ ಮೈಸೂರಿನ ಪ್ರಮುಖ ರಸ್ತೆಗೆ ನಾಮಕರಣ ಮಾಡಲು ಮುಂದಾಗಿರುವುದು ವಿಷಾದನೀಯ.ಮೈಸೂರಿನ ಅರಸರು ಕೊಟ್ಟಿರುವ ಕೊಡುಗೆ ಮನಗಾಣಬೇಕು. ಆ ರಸ್ತೆಯಲ್ಲಿ ಕೆಂಪಜಮಣಿ ಕ್ಷಯರೋಗ ಆಸ್ಪತ್ರೆ ಕೂಡ ಇದೆ. ಮೊದಲಿಂದಲೂ ಅದನ್ನ ಪಿಕೆಟಿಬಿ ರಸ್ತೆ ಅಂತಲೇ ಕರೆಯುತ್ತಾರೆ. ಅಂತಹ ಐತಿಹಾಸಿಕ ರಸ್ತೆಗೆ ಗುರುತರ ಆರೋಪ ಹೊತ್ತಿರುವ ವ್ಯಕ್ತಿ ಹೆಸರಿಡುತ್ತಿರುವುದು ವಿಷಾದನೀಯ ಎಂದರು.
ಮುಡಾ ಕೇಸ್‌ಗೆ ಟ್ವಿಸ್ಟ್: ಸುವರ್ಣ ನ್ಯೂಸ್‌ನಲ್ಲಿ ಸ್ನೇಹಮಯಿ ಕೃಷ್ಣ ಸ್ಫೋಟಕ ಹೇಳಿಕೆ!
ಕೆ.ಆರ್. ರಸ್ತೆಯ ಪ್ರಮುಖ ಭಾಗಕ್ಕೆ ಮುಡಾ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಸಿದ್ದರಾಮಯ್ಯ ಹೆಸರಿಡಲು ಮೈಸೂರಿನ ನಾಗರೀಕರು ಆಕ್ಷೇಪಣೆ ಸಲ್ಲಿಸಿದ್ದಾರೆ. ನಾನೂ ಇದರ ಬಗ್ಗೆ ಹೋರಾಟ ಮುಂದುವರಿಸುತ್ತೇನೆ. ಪಾಲಿಕೆಯಲ್ಲಿ ಕೌನ್ಸಿಲರ್‌ಗಳೇ ಇಲ್ಲದಿರುವಾಗ ಅಧಿಕಾರಿಗಳು ಕೌನ್ಸಿಲ್ ಸಭೆ ಹೇಗೆ ನಡೆಸಿದರು ಎಂಬುದೇ ತಿಳಿಯುತ್ತಿಲ್ಲ. ಇದರ ಬಗ್ಗೆಯೂ ಹೋರಾಟ ನಡೆಸುವುದಾಗಿ ಸ್ನೇಹಮಯಿ ಕೃಷ್ಣ ತಿಳಿಸಿದರು.