Mysore ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ಸಾಹಸ ಬೇಡ, ಸರ್ಕಾರಕ್ಕೆ ಶ್ರೀನಿವಾಸ್ ಪ್ರಸಾದ್ ಮನವಿ!
ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣ ಯೋಜನೆ
ಯೋಜನೆ ಕೈಬಿಡುವಂತೆ ಸರ್ಕಾರಕ್ಕೆ ಪತ್ರ ಬರೆದ ಸಂಸದ ಶ್ರೀನಿವಾಸ್ ಪ್ರಸಾದ್
ಬೆಟ್ಟದ ಪರಿಸರಕ್ಕೆ ಹಾನಿಯಾಗುವ ಸಂಭವ ಕಾಣುತ್ತಿದೆ ಎಂದಿರುವ ಚಾಮರಾಜನಗರ ಸಂಸದ
ಬೆಂಗಳೂರು (ಮಾ. 26): ಮೈಸೂರಿನ (Mysore) ಸುಪ್ರಸಿದ್ಧ ಚಾಮುಂಡಿ ಬೆಟ್ಟಕ್ಕೆ (Chamundi Hills ) ರೋಪ್ ವೇ ನಿರ್ಮಾಣ ಮಾಡುವ ಯೋಜನೆಯನ್ನು ಸರ್ಕಾರ ( State Government)ತಕ್ಷಣವೇ ಕೈಬಿಡಬೇಕು ಎಂದು ಬಿಜೆಪಿಯ ಚಾಮರಾಜನಗರ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ವಿನಂತಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ (Chief Minister Basavaraj Bommai ) ಪತ್ರ ಬರೆದಿರುವ ಶ್ರೀನಿವಾಸ್ ಪ್ರಸಾದ್ ( Srinivasa Prasad), ಯೋಜನೆ ಕೈಬಿಡುವ ಕುರಿತಾಗಿ ಕಾರಣಗಳನ್ನು ತಿಳಿಸಿದ್ದಾರೆ. ಹಾಗೇನಾದರೂ ರೋಪ್ ವೇ ಕಾಮಗಾರಿ ಕೈಗೊಂಡರೆ ಭೂಮಿ ಸಡಿಲಗೊಂಡು ಬೆಟ್ಟದ ಪರಿಸರಕ್ಕೆ ಹಾನಿಯಾಗುವ ಸಂಭವ ಕಾಣುತ್ತಿದೆ. ಇದೇ ಕಾರಣಕ್ಕಾಗಿ ಪರಿಸರವಾದಿಗಳು ಚಾಮುಂಡಿ ಬೆಟ್ಟದ ರೋಪ್ ವೇಗೆ ವಿರೋಧ ಮಾಡಿರುವುದರಲ್ಲಿ ಅರ್ಥವಿದೆ ಎಂದು ಹೇಳಿದ್ದಾರೆ.
ಪರಿಸರಕ್ಕೆ ಅಪಾಯವಿರುವ ರೋಪ್ ವೇ ನಿರ್ಮಾಣದ ನಿರ್ಧಾರ ಸೂಕ್ತವಲ್ಲ ಹಾಗಾಗಿ ರಾಜ್ಯ ಸರ್ಕಾರ ಇದನ್ನು ಕೈಬಿಡಬೇಕು. ಬೆಟ್ಟದ ತುದಿ ತಲುಪಲು ಈಗಾಗಲೇ ಸುಸಜ್ಜಿತ ಮೆಟ್ಟಿಲುಗಳು ಇವೆ. ಬಸ್ಸು ಹಾಗೂ ಇತರೆ ವಾಹನಗಳಿಗೆ ಉತ್ತಮ ರಸ್ತೆ ವ್ಯವಸ್ಥೆಯೂ ಇದೆ. ಇದಲ್ಲದೇ ಇನ್ನೂ ಎರಡು ಕಡೆಗಳಿಂದ ಬೆಟ್ಟ ಹತ್ತಲು ಮಾರ್ಗಗಳಿವೆ. ಕೇವಲ ಅರ್ಧಗಂಟೆಯಲ್ಲಿ ಬೆಟ್ಟದ ತುದಿ ತಲುಪುವ ವ್ಯವಸ್ಥೆ ಇದೆ ಎಂದು ಶ್ರೀನಿವಾಸ್ ಪ್ರಸಾದ್ ಬರೆದಿದ್ದಾರೆ.
ಬೆಟ್ಟವನ್ನೇರಲು ಮಾರ್ಗ ಇರುವುದರಿಂದ ರೋಪ್‌ವೇ ಅನಗತ್ಯ. ಕೇವಲ ರೋಪ್‌ವೇ ಮಾತ್ರವಲ್ಲದೆ, ಬೆಟ್ಟದಲ್ಲಿ ಯಾವುದೇ ಹೊಸ ಕಟ್ಟಡ ನಿರ್ಮಿಸುವುದು ಪರಿಸರ ಸುರಕ್ಷತೆಯ ದೃಷ್ಟಿಯಿಂದ ಕ್ಷೇಮವಲ್ಲ. ಭಕ್ತರಿಗೆ ಈಗ ಅಲ್ಲಿ ನೀಡಿರುವ ಮೂಲಸೌಕರ್ಯ ಸಾಕೆನಿಸುತ್ತದೆ. ಇನ್ನಷ್ಟು ಸೌಲಭ್ಯ ಅನಿವಾರ್ಯ ಎನಿಸಿದರೆ, ಪರಿಸರಸ್ನೇಹಿ ವಿಧಾನದಲ್ಲಿ ಒದಗಿಸಿ ಎದು ಸಿಎಂಗೆ ಪತ್ರ ಬರೆದು ಮನವಿ ಶ್ರೀನಿವಾಸ್ ಪ್ರಸಾದ್ ಮನವಿ ಮಾಡಿಕೊಂಡಿದ್ದಾರೆ.
ಆತಿಥ್ಯ ಮತ್ತು ಪ್ರವಾಸೋದ್ಯಮ ಕ್ಷೇತ್ರದವರು ಪ್ರವಾಸಿ ಕೇಂದ್ರವಾಗಿ ಮೈಸೂರಿಗೆ ರೋಪ್ ವೇ ದೊಡ್ಡ ಪ್ಲಸ್ ಆಗಲಿದೆ ಎಂಬ ಆಧಾರದ ಮೇಲೆ ಇದನ್ನು ಸ್ವಾಗತಿಸಿದರೆ, ಪರಿಸರವಾದಿಗಳು ಮುಂದೆ ಇರುವ ಅಪಾಯಗಳನ್ನು ಎತ್ತಿ ತೋರಿಸಿದ್ದಾರೆ ಮತ್ತು ಯೋಜನೆಯು ಚಾಮುಂಡಿ ಬೆಟ್ಟದ ನೈಸರ್ಗಿಕ ಸೌಂದರ್ಯವನ್ನು ಹೇಗೆ ಹಾಳುಮಾಡುತ್ತದೆ ಮತ್ತು ಎಷ್ಟು ಪ್ರಮಾಣದ ಅರಣ್ಯ ನಾಶ ಆಗಲಿದೆ ಎನ್ನುವುದನ್ನು ವಿವರಿಸಿದೆ.
ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ವಿಂಗ್ಸ್ ಇಂಡಿಯಾ- 2022 ಪ್ರಶಸ್ತಿ.!
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ ರಾಜ್ಯ ಬಜೆಟ್‌ನಲ್ಲಿ (State Budget) ಕೇಂದ್ರದ ಪರ್ವತ ಮಾಲಾ ಯೋಜನೆಯಡಿ ಚಾಮುಂಡಿ ಬೆಟ್ಟಕ್ಕೆ ರೋಪ್‌ವೇಯನ್ನು ಪ್ರಸ್ತಾಪಿಸಲಾಗುವುದು ಎಂದು ಉಲ್ಲೇಖಿಸಲಾಗಿತ್ತು. ಇದು ಕೇವಲ ಉದ್ದೇಶದ ಅಭಿವ್ಯಕ್ತಿಯಾಗಿದ್ದರೂ ಮತ್ತು ಯಾವುದೇ ಹಣವನ್ನು ನಿಗದಿಪಡಿಸದಿದ್ದರೂ, ಇದು ಯೋಜನೆಯ ಕಾರ್ಯಸಾಧ್ಯತೆಯ ಚರ್ಚೆಯನ್ನು ಮತ್ತೆ ಜಾಗೃತ ಮಾಡಿತ್ತು. ಮೈಸೂರಿನಲ್ಲಿ ಸಾಕಷ್ಟು ಪ್ರವಾಸಿ ತಾಣಗಳಿದ್ದು, ತಾಜ್‌ಮಹಲ್ ನೋಡಲು ಆಗ್ರಾಕ್ಕೆ ತೆರಳುತ್ತಿದ್ದಂತೆಯೇ ಮೈಸೂರಿಗೆ ಅರಮನೆ, ಚಾಮುಂಡಿ ಬೆಟ್ಟ ಇತ್ಯಾದಿಗಳಿಗೆ ಪ್ರವಾಸಿಗರು ಬರುತ್ತಾರೆ ಎಂಬ ಕಾರಣಕ್ಕೆ ಹೊಸತನದ ಅಗತ್ಯವಿಲ್ಲ ಎಂದು ಸ್ಥಳೀಯ ನಾಗರೀಕರ ಒಂದು ವರ್ಗ ಅಭಿಪ್ರಾಯಪಟ್ಟಿದೆ.
ರಕ್ಷಣಾ ಸಚಿವಾಲಯದ ಅಡಿಗೆ ಬಂದ ಬೆಳಗಾವಿಯ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ !
ಈ ಹಿಂದೆ ಚಾಮುಂಡಿ ಬೆಟ್ಟಕ್ಕೆ ರೋಪ್‌ವೇ ಯೋಜನೆಗೆ ಹಲವು ಬಾರಿ ಸಲಹೆ ನೀಡಲಾಗಿತ್ತಾದರೂ ಪ್ರತಿ ಬಾರಿಯೂ ನನೆಗುದಿಗೆ ಬಿದ್ದಿತ್ತು. ಸರಸ್ವತಿ ಸಮ್ಮಾನ್ ಪುರಸ್ಕೃತ ಮತ್ತು ಕನ್ನಡ ಲೇಖಕ ಎಸ್.ಎಲ್. ಭೈರಪ್ಪ ( S.L. Bhyrappa ) ಅವರು ಚಾಮುಂಡಿ ಬೆಟ್ಟದ ಯಾವುದೇ "ಅಭಿವೃದ್ಧಿ" ಮತ್ತು ಪ್ರವಾಸಿ ತಾಣವಾಗಿ ಮಾರ್ಕೆಟಿಂಗ್ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಇದರಿಂದಾಗಿ ಸ್ಥಳದ ಆಧ್ಯಾತ್ಮಿಕ ವಾತಾವರಣವನ್ನು ನಾಶಪಡಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದರು.