Asianet Suvarna News Asianet Suvarna News

ನನ್ನ ಜೊತೆ ಕೆಲಸ ಮಾಡೋರಿಗೆ ಸೈಟ್ ಕೊಡ್ತೇನೆ :ಮುತ್ತಪ್ಪ ರೈ

ನಾನು ಕ್ಯಾನ್ಸರ್‌ನಿಂದ ಬಳ​ಲು​ತ್ತಿ​ದ್ದು, ಎಷ್ಟುದಿನ ಬದುಕಿರುವೆ ಎಂಬುದು ಗೊತ್ತಿಲ್ಲ. ಆದರೆ, ಬದು​ಕಿ​ದ್ದಷ್ಟುದಿನವೂ ಜನರ ಸೇವೆ ಮಾಡಿ​ಕೊಂಡಿ​ರು​ವೆ...’ ಎಂದು ಜಯ​ ಕ​ರ್ನಾ​ಟಕ ಸಂಘ​ಟನೆ ಸಂಸ್ಥಾ​ಪಕ ಅಧ್ಯಕ್ಷ ಮುತ್ತಪ್ಪ ರೈ  ತಿಳಿಸಿದ್ದಾರೆ. 

Muthappa Rai Diagnosed With Cancer
Author
Bengaluru, First Published Jan 21, 2020, 7:29 AM IST
  • Facebook
  • Twitter
  • Whatsapp

 ರಾಮ​ನ​ಗರ [ಜ.21]: ‘ಯಾವಾ​ಗಲೋ ನನ್ನ ಟಿಕೆಟ್‌ ಬುಕ್‌ ಆಗಿ ಹೋಗಿದ್ದು, ಓಕೆ ಆಗಿಲ್ಲ ಅಷ್ಟೇ. ನಾನು ಕ್ಯಾನ್ಸರ್‌ನಿಂದ ಬಳ​ಲು​ತ್ತಿ​ದ್ದು, ಎಷ್ಟುದಿನ ಬದುಕಿರುವೆ ಎಂಬುದು ಗೊತ್ತಿಲ್ಲ. ಆದರೆ, ಬದು​ಕಿ​ದ್ದಷ್ಟುದಿನವೂ ಜನರ ಸೇವೆ ಮಾಡಿ​ಕೊಂಡಿ​ರು​ವೆ...’ ಎಂದು ಜಯ​ ಕ​ರ್ನಾ​ಟಕ ಸಂಘ​ಟನೆ ಸಂಸ್ಥಾ​ಪಕ ಅಧ್ಯಕ್ಷ ಮುತ್ತಪ್ಪ ರೈ ಸೋಮವಾರ ತಿಳಿಸಿದ್ದಾರೆ. ಬಹುದಿನಗಳ ಬಳಿಕ ಮಾಧ್ಯಮಗಳ ಮುಂದೆ ಕಾಣಿಸಿಕೊಂಡ ಅವರು, ತಮ್ಮ ಆರೋಗ್ಯದ ಬಗ್ಗೆ ಎಳೆ ಎಳೆಯಾಗಿ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಬಿಡದಿಯಲ್ಲಿರುವ ತಮ್ಮ ಮನೆಯಲ್ಲಿ ಸೋಮವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಕುಕ್ಕೆ ಸುಬ್ರಹ್ಮಣ್ಯದಿಂದ ವಾಪಸ್‌ ಬರುವಾಗ ಬೆನ್ನುನೋವು ಕಾಣಿಸಿಕೊಂಡಿತು. ವೈದ್ಯರ ಬಳಿ ತಪಾಸಣೆ ತೆರಳಿದಾಗ ಲಿವರ್‌ ಕ್ಯಾನ್ಸರ್‌ ಪತ್ತೆಯಾಯಿತು. ಆರು ತಿಂಗಳ ಮಾತ್ರ ಬದುಕುವ ಸಾಧ್ಯತೆಯಿದೆ ಎಂದರು. ದೆಹ​ಲಿಯ ಮ್ಯಾಕ್ಸ್‌ ಸೂಪರ್‌ ಸ್ಪೆಷಾ​ಲಿ​ಟಿ ಆಸ್ಪತ್ರೆಗೆ ದಾಖಲಾದೆ. ಅಲ್ಲಿ ಅಮೆ​ರಿ​ಕಾ​ದಲ್ಲಿ ಕ್ರಿಕೆ​ಟಿಗ ಯುವ​ರಾಜ್‌ ಸಿಂಗ್‌ಗೆ ಚಿಕಿತ್ಸೆ ನೀಡಿದ್ದ ಡಾ.ನಿ​ತೇಶ್‌ ರೋಹ​ಟಗಿ ಅವರೇ ನನಗೂ ಚಿಕಿತ್ಸೆ ಆರಂಭಿ​ಸಿ​ದರು ಎಂದಿದ್ದಾರೆ.

ಅನಾಥಪ್ರಜ್ಞೆ ಕಾಡಿತು:

ಸೋಂಕು ತಗ​ಲುವ ಸಾಧ್ಯ​ತೆ​ಯಿಂದಾಗಿ ಚಿಕಿತ್ಸೆ ಪಡೆ​ಯು​ತ್ತಿದ್ದ ವೇಳೆ ನನ್ನ​ವ​ರನ್ನು ಭೇಟಿ​ಯಾ​ಗಲು ಅವ​ಕಾಶ ನೀಡ​ದಿ​ರು​ವುದು ನನ್ನಲ್ಲಿ ಅನಾಥ ಪ್ರಜ್ಞೆ ಕಾಡು​ವಂತೆ ಮಾಡಿತು. ಕೋರಿಕೆ ಮೇರೆಗೆ ಚೆನ್ನೈ​ನ​ಲ್ಲಿ​ರುವ ಅಪೋಲೊ ಆಸ್ಪ​ತ್ರೆಗೆ ಸ್ಥಳಾಂತ​ರಿ​ಸಿ​ದರು. ಅಲ್ಲಿ ಚಿಕಿತ್ಸೆ ತರು​ವಾಯ ಕ್ಯಾನ್ಸರ್‌ ಶೇ.90ರಷ್ಟುನಿವಾ​ರ​ಣೆ​ಯಾ​ಗಿತ್ತು. 2 ತಿಂಗಳು ಚಿಕಿ​ತ್ಸೆ ಬಾಕಿ ಇದ್ದರಿಂದ ಚೆನ್ನೈ​ನಿಂದ ಬೆಂಗ​ಳೂ​ರಿನ ಮಣಿ​ಪಾಲ್‌ ಆಸ್ಪ​ತ್ರೆಗೆ ದಾಖ​ಲಾದೆ. ಇಲ್ಲಿ ತಪಾ​ಸಣೆ ವೇಳೆ ಕ್ಯಾನ್ಸರ್‌ ಮತ್ತೆ ಶೇ.90ರಷ್ಟುಹೆಚ್ಚಾ​ಗಿ​ ಬ್ರೈನ್‌ವರೆಗೆ ಹರ​ಡಿ​ರು​ವುದು ಪತ್ತೆ​ಯಾ​ಯಿತು. ಆಗ 15 ದಿನಗಳ ಕಾಲ ಬದು​ಕ​ಬ​ಹು​ದು ಎಂದರು. ಅಂತಿ​ಮ​ವಾಗಿ ಬಿಡದಿ ಮನೆಯಲ್ಲಿ ಉಳಿ​ದು​ಕೊಂಡಿ​ದ್ದೇ​ನೆ. ದೆಹಲಿ, ಚೆನ್ನೈ ಹಾಗೂ ಬೆಂಗ​ಳೂರು ಆಸ್ಪ​ತ್ರೆಯ ವೈದ್ಯ ರಿಪೋರ್ಟ್‌ ಬೇರೆ, ನನ್ನ ಆರೋ​ಗ್ಯದ ಫಲಿ​ತಾಂಶವೇ ಬೇರೆ​ಯಾ​ಗಿದೆ. ನಾನೆಂದೂ ದೇವ​ರಲ್ಲಿ ದೀರ್ಘಾ​ಯಸ್ಸು ಕೇಳಿಲ್ಲ, ಸುಖ​ವಾದ ಸಾವು ಕೊಡುವಂತೆ ಪ್ರಾರ್ಥಿ​ಸಿ​ದ್ದೇ​ನೆ. ದುಶ್ಚ​ಟ​ಗ​ಳಿಲ್ಲದಿದ್ದರೂ ಕ್ಯಾನ್ಸರ್‌ ಬಂದಿ​ರು​ವುದು ಆಶ್ಚರ್ಯ ತಂದಿದೆ. ನನ್ನ​ಲ್ಲಿ​ರುವ ಆತ್ಮ​ವಿ​ಶ್ವಾಸ ಕ್ಯಾನ್ಸರ್‌ ವಿರುದ್ಧ ಹೋರಾ​ಡು​ವಂತೆ ಮಾಡಿದ್ದು, ದಿನೇ ದಿನೇ ಗುಣ​ಮುಖ ಆಗು​ತ್ತಿ​ದ್ದೇನೆ ಎಂದಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕೆಲಸ ಮಾಡುತ್ತಿರುವವರಿಗೂ ನಿವೇಶನ

ನಾನು ಪ್ರತಿ​ಯೊಂದು ವಹಿ​ವಾ​ಟಿ​ನ​ಲ್ಲಿಯೂ ಪಾರ​ದ​ರ್ಶ​ಕ​ವಾ​ಗಿ​ದ್ದೇನೆ. ವರ್ಷಕ್ಕೆ  25ರಿಂದ 30 ಕೋಟಿ ರು. ತೆರಿಗೆ ಪಾವ​ತಿ​ಸು​ತ್ತಿ​ದ್ದೇನೆ. ಯಾರಿಗೂ ಮೋಸ ಮಾಡಿಲ್ಲ. ನನ್ನ ಪತ್ನಿ, ಮಕ್ಕಳು, ಮೊಮ್ಮ​ಕ್ಕಳು ಹಾಗೂ ಸಂಬಂಧಿ​ಕ​ರಿಗೆ ಏನು ಸಲ್ಲ​ಬೇಕೋ ಅದನ್ನು ವಿಲ್‌ನಲ್ಲಿ ಬರೆ​ಸಿ​ದ್ದೇನೆ. 15ರಿಂದ 20 ವರ್ಷಗ​ಳಿಂದ ನನ್ನೊಂದಿಗೆ ಕೆಲಸ ಮಾಡು​ತ್ತಿ​ರುವವರಿಗೆ ನಿವೇ​ಶನ ಕೊಡಲು ನಿರ್ಧ​ರಿ​ಸಿ​ದ್ದೇನೆ. ನನ್ನೊಂದಿಗೆ ಜಯ ಕರ್ನಾಟಕ ಸಂಘಟನೆ ಕೊನೆಗೊಳ್ಳಬಾರದೆಂಬ ಕಾರಣಕ್ಕಾಗಿ ಜಗದೀಶ್‌ ರಾಜ್‌ರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿರುವೆ. ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಆರೋಗ್ಯ ವಿಮೆ ಮಾಡಿ​ಸಲು ಚಾರಿ​ಟೆ​ಬಲ್‌ ಟ್ರಸ್ಟ್‌ ಸ್ಥಾಪಿಸುವೆ ಎಂದು ಮುತ್ತಪ್ಪ ಹೇಳಿದ್ದಾರೆ.

ಇಂಜೆಕ್ಷನ್‌ಗೆ 7 ಕೋಟಿ!

ಅಮೆ​ರಿಕಾದ ಆಸ್ಪ​ತ್ರೆ​ಯಲ್ಲಿ ತಲಾ .7 ಕೋಟಿ ಮೊತ್ತದ 2 ಇಂಜೆಕ್ಷನ್‌ ತೆಗೆ​ದು​ಕೊಂಡು ಚಿಕಿತ್ಸೆ ಪಡೆ​ದರೆ ಕ್ಯಾನ್ಸರ್‌ ನಿವಾ​ರ​ಣೆ​ಯಾ​ಗ​ಲಿದೆ ಎಂದು ದೆಹಲಿ ವೈದ್ಯರು ಸಲಹೆ ನೀಡಿ​ದ್ದರು. ಅಷ್ಟೊಂದು ಹಣ ಖರ್ಚು ಮಾಡಿ 68 ವರ್ಷ ವಯ​ಸ್ಸಿನ ನಾನು ಬದುಕಿ ಏನು ಮಾಡ​ಬೇ​ಕಿದೆ ಎಂದು ಸುಮ್ಮ​ನಾದೆ. ಅದೇ ಹಣ​ವನ್ನು ಬಡ​ವ​ರಿಗೆ ವಿನಿ​ಯೋ​ಗಿ​ಸಲು ನಿರ್ಧ​ರಿ​ಸಿದ್ದೇನೆ.

"

Follow Us:
Download App:
  • android
  • ios