ಬ್ರಿಟನ್‌ ವೈರಸ್‌ಗೂ ಬೆಂಗಳೂರೇ ಹೆಬ್ಬಾಗಿಲು

ಮಾ.9ರಂದು ಬೆಂಗಳೂರು ಮೂಲಕವೇ ಚೀನಾ ವೈರಸ್‌ ರಾಜ್ಯಕ್ಕೆ ಬಂದಿತ್ತು | ಬ್ರಿಟನ್‌ ವೈರಸ್‌ನ ರಾಜ್ಯದ ಮೊದಲ ಕೇಸ್‌ ಸಹ ರಾಜಧಾನಿಯಲ್ಲೇ ಪತ್ತೆ | ಅಂದು ಮಾಡಿದ ಎಡವಟ್ಟೇ ಇಂದೂ ಪುನರಾವರ್ತನೆ | ಏರ್ಪೋರ್ಟಲ್ಲಿ ಟೆಸ್ಟ್‌ ಮಾಡದೇ ನಿರ್ಲಕ್ಷ್ಯ | ಇವರಿಂದ ರೂಪಾಂತರಿ ವೈರಸ್‌ ಹರಡುವಿಕೆ ಭೀತಿ

Muted covid19 entering Karnataka Through Bengaluru dpl

ಬೆಂಗಳೂರು(ಡಿ.30): ಮಾ.9ರಂದು ಬೆಂಗಳೂರು ಮೂಲಕವೇ ರಾಜ್ಯಕ್ಕೆ ಕಾಲಿಟ್ಟ‘ಕೋವಿಡ್‌ 19’ ಮೂಲ ವೈರಸ್‌ ಹತ್ತು ತಿಂಗಳಲ್ಲಿ 9 ಲಕ್ಷಕ್ಕೂ ಹೆಚ್ಚು ಜನರಿಗೆ ಹರಡಿ, 12 ಸಾವಿರಕ್ಕೂ ಹೆಚ್ಚು ಜನರ ಬಲಿ ಪಡೆದರೂ ಇನ್ನೂ ತನ್ನ ಆರ್ಭಟ ನಿಲ್ಲಿಸಿಲ್ಲ. ಈಗ ವೈರಸ್‌ನ ರೂಪಾಂತರಿ ಪ್ರಭೇದ ‘ಬಿ.1.1.7’ ಕೂಡ ಬೆಂಗಳೂರು ಮೂಲಕವೇ ರಾಜಕ್ಕೆ ಕಾಲಿಟ್ಟಿದ್ದು ಜನರಲ್ಲಿ ಆತಂಕ ಹೆಚ್ಚಿಸಿದೆ.

ಚೀನಾದಲ್ಲಿ ಉದ್ಭವಿಸಿದ ಮೂಲ ವೈರಸ್‌ ರಾಜ್ಯಕ್ಕೆ ಪ್ರವೇಶಿಸಿದ ಸಂದರ್ಭದಲ್ಲಿ ಮಾಡಿದ ಎಡವಟ್ಟುಗಳನ್ನೇ ಈ ಬಾರಿಯೂ ಸರ್ಕಾರ ಪುನರಾವರ್ತಿಸಿದೆ. ಅಂದರೆ ಬ್ರಿಟನ್‌ ಹಾಗೂ ಇತರ ವಿದೇಶಗಳಿಂದ ಬಂದವರನ್ನು ವಿಮಾನ ನಿಲ್ದಾಣದಲ್ಲಿ ಕೊರೋನಾ ಟೆಸ್ಟ್‌ಗೆ ಒಳಪಡಿಸದೇ ಮನೆಗೆ ಕಳಿಸಲಾಗಿದೆ. ಈಗ ಇಂಥವರಿಂದಲೇ ಸೋಂಕು ಹರಡುವಿಕೆ ಆರಂಭವಾಗಿದ್ದು, ಹೀಗಾಗಿ ಮತ್ತೆ ಸೋಂಕು ಸಂಖ್ಯೆ ಹೆಚ್ಚುವುದೇ ಎಂಬ ಆತಂಕ ಸೃಷ್ಟಿಯಾಗಿದೆ.

300ಕ್ಕೂ ಅಧಿಕ ಮಂದಿ ನಾಪತ್ತೆ:

ಏಕೆಂದರೆ, ಸರ್ಕಾರದ ಅಂಕಿ ಅಂಶಗಳ ಪ್ರಕಾರವೇ ಡಿಸೆಂಬರ್‌ ತಿಂಗಳಲ್ಲಿ ಬ್ರಿಟನ್‌ನಿಂದ 2127 ಜನರು ರಾಜ್ಯಕ್ಕೆ ಆಗಮಿಸಿದ್ದಾರೆ. ಇವರಲ್ಲಿ ಇದುವರೆಗೂ 1766 ಜನರನ್ನು ಪತ್ತೆ ಹಚ್ಚಿ ಕೋವಿಡ್‌ ಪರೀಕ್ಷೆ ನಡೆಸಲಾಗಿದೆ. ಉಳಿದ 300ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ನಾಮಪತ್ತೆಯಾಗಿರುವ ಎಷ್ಟುಜನರಲ್ಲಿ ಬ್ರಿಟನ್‌ ವೈರಸ್‌ ಇದೆಯೋ ಗೊತ್ತಿಲ್ಲ. ಅವರಿಂದ ರೂಪಾಂತರಿ ವೈರಸ್‌ ಹರಡಲಾರಂಭಿಸಿದೆಯಾ ಎಂಬ ಭಯ ಸಾರ್ವಜನಿಕರಲ್ಲಿ ಶುರು ವಾಗಿದೆ.

ಸಮೂಹಕ್ಕೆ ಹರಡುವು ಭೀತಿ:

ಆರೋಗ್ಯ ಇಲಾಖೆ ತಾನು ಪತ್ತೆ ಹಚ್ಚಲಾಗದ ಬ್ರಿಟನ್‌ ಪ್ರವಾಸಿಗಳನ್ನು ಹುಡುಕಿಕೊಡುವಂತೆ ಪೊಲೀಸರ ಮೊರೆ ಹೋಗಿದೆ. ನಾಪತ್ತೆಯಾಗಿರುವವರು ತಾವಾಗೇ ಬಂದು ಪರೀಕ್ಷೆಗೆ ಒಳಗಾಗಿದ್ದರೆ ಕಾನೂನು ಕ್ರಮ ಎಚ್ಚರಿಕೆಯನ್ನೂ ನೀಡಿದೆ. ಈಗಾಗಲೇ ಅವರೆಲ್ಲರೂ ರಾಜ್ಯಕ್ಕೆ ಹಿಂತಿರುಗಿ ಏಳೆಂಟು ದಿನ ಕಳೆದಿದೆ. ಇಷ್ಟುದಿನ ಅವರು ಎಲ್ಲಿದ್ದರು, ಯಾರಾರ‍ಯರ ಸಂಪರ್ಕದಲ್ಲಿದ್ದರು ಎಂಬುದನ್ನು ಪತ್ತೆ ಹಚ್ಚುವುದೇ ಹರಸಾಹಸದ ಕೆಲಸ. ಈ ವೇಳೆಗೆ ಅವರಲ್ಲಿ ಕೆಲವರಿಗಾದರೂ ರೂಪಾಂತರಿ ವೈರಸ್‌ ಸೋಂಕಿದ್ದರೆ ಅದು ಸಮೂಹಕ್ಕೆ ಹರಡುವ ಭೀತಿಯಿದೆ.

ಬ್ರಿಟನ್‌ ವೈರಸ್‌ ಜತೆ 2ನೇ ಅಲೆ ಎಚ್ಚರಿಕೆ

ಇದರ ಮಧ್ಯೆ ಜನವರಿ ಅಥವಾ ಫೆಬ್ರವರಿಯಲ್ಲಿ ಕೊರೋನಾ ಎರಡನೇ ಅಲೆ ಏಳುವ ಸಾಧ್ಯತೆಗಳಿವೆ ಎಂದು ತಜ್ಞರ ಎಚ್ಚರಿಕೆಯೂ ಇದೆ. ಹೀಗಾಗಿ ವೇಗವಾಗಿ ಹರಡುವ ರೂಪಾಂತರಿ ಕರೋನಾ ಜತೆಗೆ ಎರಡನೇ ಅಲೆಯೂ ಆರಂಭವಾಗಿಬಿಟ್ಟರೆ ಎಂಬ ಆತಂಕ ಸಾರ್ವಜನಿಕರನ್ನು ಕಾಡುತ್ತಿದೆ.

ಆದರೆ, ತಜ್ಞರ ಪ್ರಕಾರ ಅಂತಹ ಪರಿಸ್ಥಿತಿ ಉದ್ಭವಿಸುವ ಸಾಧ್ಯತೆ ಕಡಿಮೆ. ಏಕೆಂದರೆ, ಬ್ರಿಟನ್‌ ಕೊರೋನಾ ಮಾರಕತೆ ತೀವ್ರವಾಗಿಲ್ಲ. ಇನ್ನು ಸಮೂಹದಲ್ಲಿ ಹರ್ಡ್‌ ಇಮ್ಯೂನಿಟಿ ಬಂದಿರುವ ಸಾಧ್ಯತೆಯೂ ಇರುವುದರಿಂದ ಎರಡನೇ ಅಲೆ ಆರಂಭವಾಗುವ ಸಾಧ್ಯತೆಯೂ ತೀರಾ ಕ್ಷೀಣ.

ರೂಪಾಂತರಿ ವೈರಸ್ ನಿಂದ ಬಚಾವಾಗುವ ಪ್ಲಾನ್ ಹೇಳಿದ ICMR

ವೇಗವಾಗಿ ಹರಡಲಿದೆ ಎಂದು ಹೇಳಲಾಗುತ್ತಿರುವ ರೂಪಾಂತರಿ ವೈರಸ್‌ ರಾಜ್ಯಕ್ಕೆ ಕಾಲಿಟ್ಟಿರುವುದು ಈಗಾಗಲೇ ಕೋವಿಡ್‌ನಿಂದ ತೀವ್ರ ಸಂಕಷ್ಟಅನುಭವಿಸಿರುವ ಸಾರ್ವಜನಿಕರಲ್ಲಿ ಮತ್ತಷ್ಟುಆತಂಕ ಹೆಚ್ಚಿಸಿದೆ.

Latest Videos
Follow Us:
Download App:
  • android
  • ios