ನಾಳೆ ಬೆಳಗ್ಗೆ 11 ಗಂಟೆಗೆಲ್ಲ ಸ್ಟೇಡಿಯಂ ಒಳಗೆ ಇರಬೇಕು: ಬಿಜೆಪಿ ಜೆಡಿಎಸ್ ನಾಯಕರಿಗೂ ಆಹ್ವಾನಿಸಿದ ಡಿಕೆಶಿ
ನಾಳೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದೆ ಈ ಹಿನ್ನೆಲೆ ಐತಿಹಾಸಿಕ ಕಾರ್ಯಕ್ರಮ ನಡೆಯಲಿದ್ದು ನೀವೆಲ್ಲರೂ ಬೆಳಗ್ಗೆ 11 ಗಂಟೆಯೊಳಗೆ ಕಂಠೀರವ ಸ್ಟೇಡಿಯಂನಲ್ಲಿರಬೇಕು ಎಂದು ಮಾಧ್ಯಮಗಳ ಮೂಲಕ ರಾಜ್ಯದ ಜನತೆಗೆ ಆಹ್ವಾನ ಕೊಟ್ಟ. ನಿಯೋಜಿತ ಡಿಸಿಎಂ ಡಿಕೆ ಶಿವಕುಮಾರ.
ಬೆಂಗಳೂರು (ಮೇ.19) ನಾಳೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದೆ ಈ ಹಿನ್ನೆಲೆ ಐತಿಹಾಸಿಕ ಕಾರ್ಯಕ್ರಮ ನಡೆಯಲಿದ್ದು ನೀವೆಲ್ಲರೂ ಬೆಳಗ್ಗೆ 11 ಗಂಟೆಯೊಳಗೆ ಕಂಠೀರವ ಸ್ಟೇಡಿಯಂನಲ್ಲಿರಬೇಕು ಎಂದು ಮಾಧ್ಯಮಗಳ ಮೂಲಕ ರಾಜ್ಯದ ಜನತೆಗೆ ಆಹ್ವಾನ ಕೊಟ್ಟ. ನಿಯೋಜಿತ ಡಿಸಿಎಂ ಡಿಕೆ ಶಿವಕುಮಾರ.
ನಾಳೆಯ ಕಾರ್ಯಕ್ರಮಕ್ಕೆ ರಾಷ್ಟ್ರದ ನಾಯಕರು ಬರ್ತಾರೆ. ನೀವೂ ಬರಬೇಕು. ರಾಜ್ಯದ ಮುಖಂಡರಿಗೆ ಮನವಿ ಮಾಡ್ತೀವಿ. ಜೆಡಿಎಸ್, ಬಿಜೆಪಿ ನಾಯಕರಿಗೂ ಈ ಕಾರ್ಯಕ್ರಮಕ್ಕೆ ಆಹ್ವಾನಿಸಿ ಬರುವಂತೆ ಮನವಿ ಮಾಡ್ತೇವೆ ಎಂದರು.
ಇದು ಸರ್ಕಾರದ ಕಾರ್ಯಕ್ರಮ ಹಾಗಾಗಿ ಎಲ್ಲರೂ ಬರಬೇಕು ಎಂದರು. ಇದೇ ವೇಳೆ ನಾನು, ಸಿದ್ದರಾಮಯ್ಯ ದೆಹಲಿಗೆ ಹೋಗುತ್ತಿದ್ದೇವೆ. ಕ್ಯಾಬಿನೆಟ್ ಬಗ್ಗೆ ಪಕ್ಷದ ನಾಯಕರೊಂದಿಗೆ ಚರ್ಚಿಸಲಿದ್ದೇವೆ. ಚುನಾವಣೆಯಲ್ಲಿ ನಾವು ಜನತೆಗೆ ಗ್ಯಾರೆಂಟಿ ಕೊಟ್ಟಿದ್ದೇವೆ. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಸಿದ್ದರಾಮಯ್ಯ(Siddaramaiah) ನಾವು ರಾಜ್ಯದ ಜನರಿಗೆ ಗ್ಯಾರೆಂಟಿ ಕೊಟ್ಟಿದ್ದೇವೆ. ಕೊಟ್ಟ ಮಾತನ್ನು ಈಡೇರಿಸುತ್ತೇವೆ. ಕಾಂಗ್ರೆಸ್ ಪಕ್ಷದ ಗ್ಯಾರಂಟಿ(Congress Guarentee) ಕಾರ್ಯಕ್ರಮಗಳನ್ನು ಜಾರಿ ಮಾಡುತ್ತೇವೆ ಎಂದು ಭರವಸೆ ನೀಡಿದ ಡಿಕೆ ಶಿವಕುಮಾರ.(DK Shivakumar)
Karnataka CM: ಸಿದ್ದರಾಮಯ್ಯ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ನಗರ ಪೊಲೀಸ್ ಇಲಾಖೆ ಭರ್ಜರಿ ಮ್ಯಾಪಿಂಗ್!