Boycott Muslim Traders: ರಾಜ್ಯದಲ್ಲಿ ಮತ್ತೆ ಶುರುವಾಯ್ತು ಧರ್ಮ ದಂಗಲ್. ಕುಕ್ಕೆಯಲ್ಲಿ ಅನ್ಯಧರ್ಮೀರಿಗೆ ವ್ಯಾಪಾರ ನಿಷೇಧ!

ಕರಾವಳಿಯಲ್ಲಿ ಹಿಜಾಬ್‌ ವಿವಾದ ವೇಳೆ ಸದ್ದು ಮಾಡಿದ್ದ ಅನ್ಯಮತೀಯರಿಗೆ ವ್ಯಾಪಾರ ನಿರ್ಬಂಧ ಆಂದೋಲನ ಮತ್ತೆ ಸದ್ದು ಮಾಡಿದೆ. ಕಡಲೆಕಾಯಿ ಪರಿಷೆ, ಕುಕ್ಕೆ ಸುಬ್ರಹ್ಮಣ್ಯ ಚಂಪಾಷಷ್ಠಿ ಜಾತ್ರೋತ್ಸವದಲ್ಲಿ ಅನ್ಯಧರ್ಮಿಯರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದೆಂದು ಒತ್ತಾಯಿಸಲಾಗಿದೆ.

muslim traders ban in kukke subramanya temple gow

ಸುಬ್ರಹ್ಮಣ್ಯ (ನ.24): ಕರಾವಳಿಯಲ್ಲಿ ಹಿಜಾಬ್‌ ವಿವಾದ ವೇಳೆ ಸದ್ದು ಮಾಡಿದ್ದ ಅನ್ಯಮತೀಯರಿಗೆ ವ್ಯಾಪಾರ ನಿರ್ಬಂಧ ಆಂದೋಲನ ಮತ್ತೆ ಸದ್ದು ಮಾಡಿದೆ. ಕುಕ್ಕೆ ಸುಬ್ರಹ್ಮಣ್ಯ ಚಂಪಾಷಷ್ಠಿ ಜಾತ್ರೋತ್ಸವ ಸಂದರ್ಭ ಅನ್ಯಮತೀಯರಿಗೆ ವ್ಯಾಪಾರ ವಹಿವಾಟು ನಿಷೇಧ ಎಂಬ ಬ್ಯಾನರ್‌ ಸುಬ್ರಹ್ಮಣ್ಯದಲ್ಲಿ ಇದೀಗ ಪ್ರತ್ಯಕ್ಷವಾಗಿದೆ. ಕ್ಷೇತ್ರದ ಕುಮಾರಧಾರ ದ್ವಾರದ ಬಳಿ ಈ ಬ್ಯಾನರ್‌ ಹಾಕಲಾಗಿದ್ದು, ಹಿಂದೂ ಜಾಗರಣಾ ವೇದಿಕೆ ಸುಬ್ರಹ್ಮಣ್ಯ ಘಟಕದ ಹೆಸರಿದೆ. ಈ ಬಾರಿ ಕ್ಷೇತ್ರದಲ್ಲಿ ಜಾತ್ರಾ ಸಮಯ ಸಂತೆಗಳಲ್ಲಿ ಹಿಂದೂ ಗಳಿಗೆ ಬಿಟ್ಟು ಹಿಂದೂಯೇತರರಿಗೆ ವ್ಯಾಪಾರ ವಹಿವಾಟುಗಳಿಗೆ ಅವಕಾಶ ಮಾಡಿಕೊಡಬಾರದೆಂದು ಕೂಡ ಒತ್ತಾಯಿಸಿದೆ. ಇದರಿಂದ ಜಿಲ್ಲೆಯಲ್ಲಿ ಮತ್ತೆ ಧರ್ಮ ಸಂಘರ್ಷ ಕಾಣಿಸಿಕೊಳ್ಳುವ ಆತಂಕ ಶುರುವಾಗಿದೆ.

ಇನ್ನು ಕುಕ್ಕೆ ಸುಬ್ರಹ್ಮಣ್ಯದ ಚಂಪಾಷಷ್ಟಿಯಲ್ಲಿ ಮುಸ್ಲಿಂ ವ್ಯಾಪಾರ ಬಹಿಷ್ಕಾರ ಹಾಕಿರುವ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಮುಸ್ಲಿಂ ಮುಖಂಡ ಮೊಹಮ್ಮದ್ ಖಾಲಿದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಸ್ಲಿಂ ವ್ಯಕ್ತಿ ತಪ್ಪು ಮಾಡಿದ್ರೆ ಯಾವೊಬ್ಬ ಮುಸ್ಲಿಂಮರು ಅವ್ರ ಪರವಾಗಿ ನಿಲ್ಲುವುದಿಲ್ಲ. ಬೇರೆ ಧರ್ಮಗಳಲ್ಲಿ ತಪ್ಪು ಮಾಡಿದವರ ಪರವಾಗಿ ನಿಲ್ಲೋದನ್ನ ನಾವು ನೋಡಿದ್ದೇವೆ. ಮುಸ್ಲಿಂ ಮಹಿಳೆ ಮೇಲೆ ರೇಪ್ ಮಾಡಿದ 12 ಜನರು ಜೈಲಿಂದ ಹೊರಗಡೆ ಬಂದಾಗ ಸ್ವಾಗತ ಮಾಡಿದ್ದಾರೆ.

ಮುಸ್ಲಿಂ ಅವ್ರನ್ನ ಕೊಂದು ಜೈಲಿಂದ ಹೊರಗಡೆ ಬಂದವರನ್ನ ರಾಜ್ಯ ಅತಿಥಿ ನೀಡಿ, ರಾಜಕೀಯ ವ್ಯಕ್ತಿಯಾಗಿ ಬೆಳೆಸಿದ್ದಾರೆ. ಆದ್ರೆ ಮುಸ್ಲಿಂ ಸಮುದಾಯದಲ್ಲಿ ಒಂದು ತಪ್ಪು ಮಾಡ್ತೇವೆ. ತಪ್ಪು ನಡೆದಾಗ ಮೌನವಾಗಿ‌ ಇರುತ್ತೇವೆ. ಮುಸ್ಲಿಂ ವ್ಯಾಪಾರ ವಿರೋಧ ಮಾಡ್ತೀರಾ ಅಂದ್ರೆ, ಮುಸ್ಲಿಂ ರಾಷ್ಟ್ರಗಳಿಂದ ನೀವು ಯಾವುದನ್ನು ಖರೀದಿ ಮಾಡ್ಬೇಡಿ. ಒಂದು ಸಮಾಜ ಶಾಂತಿ ಇರಬೇಕು ಅಂದ್ರೆ ಎಲ್ಲಾ ಜಾತಿಯರು ಅನ್ಯಮಿತವಾಗಿರಬೇಕು ಅದು ಅವಶ್ಯಕತೆ ಕೂಡ ಅನಿವಾರ್ತೆ ಕೂಡ ಇಲ್ಲಾಂದ್ರೆ ಎಲ್ಲಾ ಮುಸ್ಲಿಂರನ್ನ ಕೊಂದು ಹಿಂದೂ ರಾಷ್ಟ್ರ ನಿರ್ಮಾಣ ಮಾಡಿ ಎಂದು ಆಕ್ರೋಶ ಹೊರಹಾಕಿದ್ದಾರೆ.

ಒಂದು ಕಮ್ಯೂನಿಟಿಯನ್ನ ಹೇಗೆ ಟರ್ಗೇಟ್ ಮಾಡಬೇಕು ಅನ್ನೋದನ್ನ ನಾವು ಹಿಂದೂ ಜಾಗರಣ ವೇದಿಕೆಯಿಂದ ಕಲಿಬೇಕು. ಅಪರಾಧ ಮಾಡಿದ ವ್ಯಕ್ತಿ ಯಾವ ಧರ್ಮದವನೇ ಆಗಿದ್ರು ಅವರು ಅಪರಾಧಿಯೇ. ಯಾವುದೇ ಧರ್ಮದ ದೃಷ್ಟಿ ಕೋನದಲ್ಲಿ ನೋಡಬಾರದು. ಹಿಂದೂ ಜಾಗರಣ ವೇದಿಕೆಯನ್ನ  ಪೂರ್ತಿಯಾಗಿ ತಪ್ಪಿತಸ್ಥರನ್ನಾಗಿ ಮಾಡುವುದು ನಮ್ಮ ತಪ್ಪೆ. ಅವರು ಆರೋಪ ಮಾಡಿದಾಗ ನಾವು ವಹಿಸಿದ್ದು ನಮ್ಮ ತಪ್ಪು. ಆಗ ಅವರು ಎಲ್ಲ ಮುಸ್ಲಿಂಮರು ಒಂದೇ ಅನ್ನೋ ಭಾವನೆ ಮೂಡುತ್ತೆ.ಯಾವುದಾದ್ರೂ ವಿಚಾರದ ಬಗ್ಗೆ ನಾವು ಮಾತನಾಡಿದ್ರೆ ಇವನೇನು ಮುಖಂಡನ ಅಂತಾರೆ. ನಾನು ಮುಖಂಡ ಅಲ್ಲ ಸ್ವಾಮಿ, ಆದ್ರೆ ಮುಖಂಡ ಅಂತಾ ನೀವು ಯಾರನ್ನ ಭಾವಿಸಿದ್ದೀರಿ ಅವರ್ಯಾಕೆ ಮಾತನಾಡಲ್ಲ. ಇದ್ರಿಂದ ಅನ್ಯ ಧರ್ಮೀಯರಿಗೆ ಮುಸ್ಲಿಂಮರೆಲ್ಲ ಕೆಟ್ಟವರೇ ಅನ್ನೋ ಭಾವನೆ ಮೂಡಿದೆ. ನೀವು ಹಿಂದೂ ರಾಷ್ಟ್ರದ ಐಕ್ಯತೆ ಬೇಡ ಅಂದ್ರೆ.  ಹಿಂದೂ ರಾಷ್ಟ್ರದಲ್ಲಿರುವ ಮುಸ್ಲಿಂಮರನ್ನ ಕೊಂದು. ನಿಮ್ಮ ಕನಸಿನ ಹಿಂದೂ ರಾಷ್ಟ್ರವನ್ನ ಕಟ್ಟಿಕೊಳ್ಳಿ ಎಂದು ಮೊಹಮ್ಮದ್ ಖಾಲಿದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Kukke Subramanya ChampaShashti: ಸುಬ್ರಹ್ಮಣ್ಯದಲ್ಲಿ ನಾಳೆ ಬೆಳಗ್ಗೆ ದೇವರ ದರ್ಶನ ಇಲ್ಲ

ಬೇರೆ ಧರ್ಮದವರಿಗೆ ವ್ಯಾಪಾರ ಮಾಡಲು ಅವಕಾಶ ನೀಡದಂತೆ ಆಗ್ರಹ: ಜಾತ್ರಾ ಮಹೋತ್ಸಗಳು ನಡೆಯುವ ಸಂದರ್ಭದಲ್ಲಿ ಹಿಂದೂಗಳಿಗೆ ಮಾತ್ರ ವ್ಯಾಪಾರ ವಹಿವಾಟು ನಡೆಸುವ ಅವಕಾಶ ನೀಡುವಂತೆ ಆಗ್ರಹಿಸಲಾಗಿದೆ. ಹಿಂದೂ ಧರ್ಮದವರನ್ನು ಹೊರತು ಪಡಿಸಿ ಬೇರೆ ಧರ್ಮದವರಿಗೆ ವ್ಯಾಪಾರ ಮಾಡಲು ಅವಕಾಶ ನೀಡದಂತೆ ಆಗ್ರಹ ಮಾಡಲಾಗಿದೆ. ಹಿಂದೂ ಸಂಘಟನೆಗಳಿಂದ ಧಾರ್ಮಿಕ ದತ್ತಿ‌ ಇಲಾಖೆಗೆ ಹಾಗೂ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಬೆಂಗಳೂರಿನ ಕಡಲೆಕಾಯಿ ಪರಿಷೆಯಲ್ಲಿ ಅನ್ಯ ಧರ್ಮಿಯರು ವ್ಯಾಪಾರ ವಹಿವಾಟುಗಳಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಈ ಆಗ್ರಹ ಕೇಳಿಬಂದಿದೆ. 

ಅಕ್ಷಯ ತೃತೀಯದಂದು ಹಿಂದೂ ಅಂಗಡಿಗಳಲ್ಲೇ ಚಿನ್ನ ಖರೀದಿಸಿ: ಹಿಂದೂಪರ ಸಂಘಟನೆಗಳ ಕರೆ

ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ಭಾಗದಲ್ಲಿ ಜಾತ್ರಾ ಮಹೋತ್ಸವಗಳು ಶುರುವಾಗಲಿರುವ ಹಿನ್ನೆಲೆ ಜಾತ್ರೆ ಸಂದರ್ಭದಲ್ಲಿ  ದೇವಸ್ಥಾನದ  ಆವರಣದಲ್ಲಿ ಹಿಂದೂ ಗಳಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶ ನೀಡುವಂತೆ ಮನವಿ ಮಾಡಲಾಗಿದೆ. 2002 ರ ಧಾರ್ಮಿಕ ದತ್ತಿ ಇಲಾಖೆ ಕಾಯ್ದೆಯಲ್ಲಿಯೂ ಈ ಬಗ್ಗೆ ಉಲ್ಲೇಖವಿದ್ದು, ಇದೇ ತಿಂಗಳು ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯುವ  ಚಂಪಾಕ ಷಷ್ಠಿ ಆಚರಣೆಯಲ್ಕಿಯೂ ಅನ್ಯಮತಿಯರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದೆದ್ದು ಹಿಂದೂ ಜನಜಾಗೃತಿ ಸಮಿತಿ ಅಧ್ಯಕ್ಷ ಮೋಹನ್ ಗೌಡ ಮನವಿ ಮಾಡಿದ್ದಾರೆ.

Latest Videos
Follow Us:
Download App:
  • android
  • ios