Asianet Suvarna News Asianet Suvarna News

ಮುರುಘಾ ಶ್ರೀಗಳ ಮೇಲೆ ಷಡ್ಯಂತ್ರ: ಸಂಗನಬಸವ ಸ್ವಾಮೀಜಿ

ಮುರುಘಾ ಮಠದ ಸ್ವಾಮೀಜಿಗಳ ಮೇಲೆ ಮಾಡಿರುವ ಷಡ್ಯಂತ್ರ ಇದಾಗಿದೆ. ಇವರ ರಾಜ್ಯದ ಪ್ರಭಾವಿ ಸ್ವಾಮೀಜಿಗಳು. ಈ ಸಂಕಷ್ಟದಿಂದ ಪಾರಾಗಿ ಬರುವ ವಿಶ್ವಾಸವಿದೆ ಎಂದು ವಿಜಯಪುರ ಜಿಲ್ಲೆಯ ಮನಗೂಳಿಮಠದ ಸಂಗನಬಸವ ಸ್ವಾಮೀಜಿ ಹೇಳಿದ್ದಾರೆ.

Murugha Matha Row Conspiracy on Murugha Shri Sanganabasava Swamiji san
Author
First Published Aug 30, 2022, 5:52 PM IST

ವಿಜಯಪುರ (ಆ. 30): ಮುರುಘಾ ಮಠದ ಶ್ರೀಗಳ ವಿರುದ್ದ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಹೊರಿಸಲಾಗಿದೆ. ಇದರ ಬೆನ್ನಲ್ಲಿಯೇ ಅವರ ವಿರುದ್ಧ ಪೋಕ್ಸೋ ಪ್ರಕರಣವೂ ದಾಖಲಾಗಿದ್ದು, ರಾಜ್ಯಾದ್ಯಂತ ಅವರ ಬಂಧನ ನಡೆಸುವಂತೆ ಪ್ರತಿಭಟನೆ ನಡೆಸಲಾಗುತ್ತಿದೆ. ಈ ನಡುವೆ ವಿವಿಧ ಮಠಾಧೀಶರು ಮುರುಘಾ ಮಠದ ಶ್ರೀಗಳ ಬೆಂಬಲಕ್ಕೆ ನಿಂತಿದ್ದು, ಇಡೀ ಆರೋಪದ ಹಿಂದೆ ದೊಡ್ಡ ಷಡ್ಯಂತ್ರವಿದೆ ಎಂದು ವಿಜಯಪುರ ಜಿಲ್ಲೆಯ ಮನಗೂಳಿಮಠದ ಸಂಗನಬಸವ ಸ್ವಾಮೀಜಿ ಹೇಳಿದ್ದಾರೆ. ವಿಜಯಪುರದ ಉತ್ನಾಳ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಪಂಚಮಸಾಲಿ ಲಿಂಗಾಯತ ಸ್ವಾಮೀಜಿಗಳ ಒಕ್ಕೂಟದ ಕಾರ್ಯದರ್ಶಿ ಆಗಿರುವ ಸಂಗನಬಸವ ಸ್ವಾಮೀಜಿ, ಮುರುಘಾ ಶರಣರು ರಾಜ್ಯದ ಪ್ರಭಾವಿ ಸ್ವಾಮೀಜಿಗಳು. ಸತ್ಯಾಂಶ ತಿಳಿದುಕೊಳ್ಳದೇ ಯಾರು ಏನು ಹೇಳೋಕೆ ಇಷ್ಟ ಇಷ್ಟಪಡುವುದಿಲ್ಲ. ಮುರುಘಾ ಶರಣರು ಎಲ್ಲಾ ಪರಂಪರೆ ಪೂಜ್ಯರನ್ನು ಪ್ರೀತಿಯಿಂದ ಕಾಣುವ ವ್ಯಕ್ತಿಗಳು. ಕಾನೂನು ಏನು ನಿರ್ಧಾರ ತೆಗೆದುಕೊಳ್ಳುತ್ತೆ ಅದಕ್ಕೆ ನಾನು ಬದ್ಧ ಎಂದು ಮುರುಘಾ ಶರಣರು ಹೇಳಿದ್ದಾರೆ. ಮುರುಘಾ ಶರಣರು ಯಾವುದೇ ತಪ್ಪು ಮಾಡಿಲ್ಲ ಅನ್ನೋದು ನನ್ನ ಅಭಿಪ್ರಾಯ ಎಂದು ಸಂಗನಬಸವ ಸ್ವಾಮೀಜಿ ಹೇಳಿದ್ದಾರೆ.

ಮುರುಘಾ ಶ್ರೀ ಜಯಶಾಲಿಯಾಗಿ ಬರುತ್ತಾರೆ: ಇದರಲ್ಲಿ ಮುರುಘಾ ಶ್ರೀ ಜಯಶಾಲಿ ಆಗಿ ಬರ್ತಾರೆ ಅನ್ನೋ ವಿಶ್ವಾಸವಿದೆ ಎಂದು ಸಂಗನಬಸವ ಸ್ವಾಮೀಜಿ ಹೇಳಿದ್ದಾರೆ. ಮುರುಘಾ ಶರಣರು ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪದ ಹಿಂದೆ ಕೈವಾಡವೂ ಇರಬಹುದು. ದೇಶ, ರಾಜ್ಯದಲ್ಲಿ ದೊಡ್ಡ ದೊಡ್ಡ ಸ್ವಾಮೀಜಿಗಳ ಬೆನ್ನಿಗೆ ಚೂರಿ ಹಾಕಲು ಬಹಳಷ್ಟು ಜನ ದೊಡ್ಡವರು ಬೆನ್ನು ಹತ್ತಿರ್ತಾರೆ. ರಾಜ್ಯದಲ್ಲಿ ಸ್ವಾಮೀಜಿಗಳು ನಿಸ್ವಾರ್ಥದಿಂದ ಕೆಲ್ಸ ಮಾಡುತ್ತಿರುತ್ತಾರೆ. ಸ್ವಾಮಿಗಳು ತಮ್ಮ ಸ್ವಂತಕ್ಕಾಗಿ ಯಾರೂ ಆಸ್ತಿ ಮಾಡುವುದಿಲ್ಲ. ಸ್ವಾಮೀಜಿಗಳು ಆಸ್ತಿ ಯಾರು ಅಂದ್ರೆ ಜಗತ್ತಿನ ತಂದೆ-ತಾಯಿಗಳು. ಇವರೇ ನಮ್ಮ ಆಸ್ತಿ ಎಂದು ಸ್ವಾಮೀಜಿ ಹೇಳಿದ್ದಾರೆ.

Murugha Matha Row: ಮುರುಘಾ ಶರಣರ ಪರ ನಿಂತ ಮಠಾಧೀಶರು

ಸ್ವಾಮೀಜಿಗಳ ಉಡುದಾರ ಕಟ್‌ ಮಾಡ್ತಾರೆ: ಮಠಕ್ಕೆ ಸೇರಬೇಕು ಎಂದಾಗ ಸ್ವಾಮೀಜಿಗಳ ಉಡುದಾರ ಕತ್ತರಿಸುತ್ತಾರೆ. ಯಾಕೆ ಗೊತ್ತೇ, ಅಲ್ಲಿಗೆ ಸ್ವಂತ ತಂದೆ ತಾಯಿಗಳೊಂದಿಗೆ ರಕ್ತ ಸಂಬಂಧ ಮುಗಿಯಿತು ಎನ್ನುವ ಅರ್ಥದಲ್ಲಿ ಇದನ್ನು ಮಾಡಲಾಗುತ್ತಿದೆ. ಆ ಬಳಿಕ ಸ್ವಾಮೀಜಿಗಳಿಗೆ ಜಗತ್ತಿನಲ್ಲಿ, ಊರಲ್ಲಿರುವವವರೆ ಬಂಧು ಬಳಗ ಎಂದು ಸಂಗನಬಸವ ಸ್ವಾಮೀಜಿ ಹೇಳಿದ್ದಾರೆ.

Murugha Matha Row: ಮುರುಘಾ ಶ್ರೀ ವಿರುದ್ಧ ಅಟ್ರಾಸಿಟಿ ಕೇಸ್‌ ದಾಖಲು

ಕೋರ್ಟ್‌ನಲ್ಲಿ ಬಾಲಕಿಯರ ಹೇಳಿಕೆ: ಈ ನಡುವೆ ಸಂತ್ರಸ್ಥ ಬಾಲಕಿ ಕೋರ್ಟ್‌ನ ಮುಂದೆ ಹೇಳಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಚಿತ್ರದುರ್ಗದ 1 ನೇ ಜೆಎಂಎಪ್ ಸಿ  ನ್ಯಾಯಾಲದಲ್ಲಿ ಜಡ್ಜ್ ಮುಂದೆ ಆರೋಪ ಮಾಡಿರುವ ಇಬ್ಬರೂ ಬಾಲಕಿಯರು ಹೇಳಿಕೆ ನೀಡಿದ್ದಾರೆ. ಸತತ ಎರಡು ಗಂಟೆಗಳ ಕಾಲ ನ್ಯಾಯಾಧೀಶರ ಬಳಿ ಸಂತ್ರಸ್ತ ಯುವತಿಯರ ಹೇಳಿಕೆ ದಾಖಲು ಪ್ರಕ್ರಿಯೆ ಆಗಿದೆ. ಬಾಲಕಿಯರ ಹೇಳಿಕೆಯನ್ನು ಸಂಪೂರ್ಣ ವಿಡಿಯೋ ರೇಕಾರ್ಡ್ ಮಾಡಲಾಗಿದೆ. ಪ್ರಕರಣದಲ್ಲಿ ಸ್ವಾಮೀಜಿಯ ಸಂಕಷ್ಟಗಳು ಯಾವ ರೀತಿ ಇರಲಿದೆ ಎನ್ನುವುದು ಬಾಲಕಿಯರು ನೀಡಿದ ಹೇಳಿಕೆಗಳ ಮೇಲೆ ನಿಂತಿರಲಿದೆ.

Follow Us:
Download App:
  • android
  • ios