Asianet Suvarna News Asianet Suvarna News

ಹತ್ತೇ ನಿಮಿಷದಲ್ಲಿ ಸಹಾಯಕ್ಕೆ ಬಂದ ವಿಜಯೇಂದ್ರಗೆ ಧನ್ಯವಾದ ತಿಳಿಸಿದ ಹಿಂದೂ ಕಾರ್ಯಕರ್ತ!

'ನನ್ನ ಬಿಡುಗಡೆಗೆ ಅಪಾರ ಕಾಳಜಿ ವಹಿಸಿದ ಕರ್ನಾಟಕ ಬಿಜೆಪಿ ಘಟಕದ  ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ನಾನು ಅಭಾರಿಯಾಗಿದ್ದೇನೆ' ಎಂದು @MumbaichaDon ತಮ್ಮ “ಎಕ್ಸ್” ಖಾತೆ ಹೊಂದಿರುವ ವಿನೀತ್ ನಾಯ್ಕ ಎಂಬುವವರು  ರಾಜ್ಯಾಧ್ಯಕ್ಷರಿಗೆ ವಿಶೇಷ ಧನ್ಯವಾದ ತಿಳಿಸಿದ್ದಾರೆ.

Mumbai Hindu activist vinit Naik thanked BY Vijayendra for his help rav
Author
First Published May 28, 2024, 7:19 PM IST

ಬೆಂಗಳೂರು (ಮೇ.28): 'ನನ್ನ ಬಿಡುಗಡೆಗೆ ಅಪಾರ ಕಾಳಜಿ ವಹಿಸಿದ ಕರ್ನಾಟಕ ಬಿಜೆಪಿ ಘಟಕದ  ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ನಾನು ಅಭಾರಿಯಾಗಿದ್ದೇನೆ' ಎಂದು @MumbaichaDon ತಮ್ಮ “ಎಕ್ಸ್” ಖಾತೆ ಹೊಂದಿರುವ ವಿನೀತ್ ನಾಯ್ಕ ಎಂಬುವವರು  ರಾಜ್ಯಾಧ್ಯಕ್ಷರಿಗೆ ವಿಶೇಷ ಧನ್ಯವಾದ ತಿಳಿಸಿದ್ದಾರೆ.

ಇತ್ತೀಚಿಗೆ ನನ್ನ ಟ್ವಿಟರ್ ಎಕ್ಸ್ ಖಾತೆಯಲ್ಲಿ ಕಾಂಗ್ರೆಸ್ ವಿರುದ್ಧ ಪೋಸ್ಟ್ ಹಾಕಿದ್ದ ಕಾರಣಕ್ಕೆ ಕರ್ನಾಟಕ ಪೊಲೀಸರು ಗೋವಾದಲ್ಲಿ ವಿನೀತ್ ನಾಯ್ಕ್ ಎಂಬುವವರನ್ನ ಬಂಧಿಸಿದ್ದರು. ಈ ವಿಚಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಗಮನಕ್ಕೆ ಬಂದು ಮುತುವರ್ಜಿ ವಹಿಸಿದರು. ಜೊತೆಗೆ ಬಿಜೆಪಿ ಸೋಷಿಯಲ್ ಮೀಡಿಯಾ ತಂಡದ ಅಗತ್ಯ ನೆರವು ಹಾಗೂ ಕರ್ನಾಟಕ ಕಾನೂನು ತಜ್ಞರ ಸಹಾಯದಿಂದ ಜಾಮೀನು ಸಿಕ್ಕಿದೆ.

ಕಾಂಗ್ರೆಸ್ ಸರ್ಕಾರದ ಹನಿಮೂನ್ ಪಿರೇಡ್ ಮುಗಿದಿರೂ, ಸಾಧನೆ ಮಾತ್ರ ಶೂನ್ಯ; ವಿಜಯೇಂದ್ರ ಟೀಕೆ

ಟ್ವೀಟರ್‌ನಲ್ಲಿ ಏನಿದೆ?

ಅಪರಿಚಿತ ಬೆಂಗಳೂರಿನಲ್ಲಿ ನನ್ನವರು ಅಂತ ಯಾರೂ ಇರಲಿಲ್ಲ, ಜೇಬಿನಲ್ಲಿ ಇದ್ದದ್ದು ಬರೀ 500 ರೂ ಮತ್ತು ಒಂದು ಜೊತೆ ಬಟ್ಟೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಬೆಂಬಲಕ್ಕೆ ನಿಂತಿದ್ದು ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ಸೋಷಿಯಲ್ ಮೀಡಿಯಾ ತಂಡ. ನನ್ನ ಬಂಧನವಾದ 10 ನಿಮಿಷದಲ್ಲೇ ಬಿಜೆಪಿ ನಾಯಕರು ನನ್ನ ನೆರವಿಗೆ ಧಾವಿಸಿದ್ದು, ನನ್ನಲ್ಲಿನ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಿಸಿತು. ಅಷ್ಟೇಅಲ್ಲ, ನನ್ನಂತಹ ಸಣ್ಣ ಕಾರ್ಯಕರ್ತನಿಗೆ ತೊಂದರೆ ಆದಾಗ ಇಡೀ ಮೋದಿ ಪರಿವಾರವೇ ನನ್ನಬೆಂಬಲಕ್ಕೆ ಧಾವಿಸಿದ್ದು, ನನ್ನೊಳಗಿನ ಹೋರಾಟಗಾರನಿಗೆ ಸಿಕ್ಕ ಬೆಂಬಲವಾಗಿತ್ತು. ಹತ್ತು ದಿನಗಳ ಕಾನೂನು ಹೋರಾಟದಲ್ಲಿ ಎಲ್ಲ ಬಗೆಯ ನೆರವು ನೀಡಿದ ಕರ್ನಾಟಕ ಬಿಜೆಪಿ ನಾಯಕರು(Karnataka bjp leaders ), ಕಾನೂನು ತಜ್ಞರು ಹಾಗೂ ಇಡೀ ಮೋದಿ ಕುಟುಂಬ(Modi pariwar)ಕ್ಕೆ ನನ್ನ ವಿಶೇಷ ಧನ್ಯವಾದಗಳು ಅಂತ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ. 

Latest Videos
Follow Us:
Download App:
  • android
  • ios