Asianet Suvarna News Asianet Suvarna News

ಮುಡಾ ಹಗರಣ: ಸಿಎಂ ಸಿದ್ದರಾಮಯ್ಯ ಹೆಸರಿಗೆ ಧಕ್ಕೆ ತರಲು ಯತ್ನ; ಬಿಜೆಪಿ ವಿರುದ್ಧ ಪೊನ್ನಣ್ಣ ಕಿಡಿ

ಈ ಗಂಗರಾಜು ಯಾರೋ ನನಗೆ ಗೊತ್ತಿಲ್ಲ. ಆದರೆ ಈ ಪ್ರಕರಣವನ್ನು ಸಂಪೂರ್ಣ ರಾಜಕಿಕರಣ ಗೊಳಿಸಲಾಗುತ್ತಿದೆ. ಸಿದ್ದರಾಮಯ್ಯನವರ ಹೆಸರಿಗೆ ಧಕ್ಕೆ ತರಬೇಕೆಂದು ಇವರು ಪ್ರಯತ್ನ ನಡೆಸುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

MUDA scam virajpete MLA AS ponnanna outraged against bjp leaders at kodagu rav
Author
First Published Jul 6, 2024, 9:33 PM IST

ಕೊಡಗು (ಜು.6) : ಬಿಜೆಪಿಯವರು ದಿವಾಳಿಯಾಗಿದ್ದಾರೆ, ಕೋಟಿ ಕೋಟಿ ಲೂಟಿ ಮಾಡಿ ಜೈಲಿಗೆ ಹೋಗಿ ಬಂದವರೇ ಅವರಲ್ಲಿ ನಾಯಕತ್ವ ವಹಿಸಿಕೊಂಡಿದ್ದಾರೆ. ಅವರು ಮುಡಾದಲ್ಲಿ ಸಿದ್ದರಾಮಯ್ಯನವರ ಪತ್ನಿಗೆ ಹಂಚಿಕೆಯಾಗಿರುವ ನಿವೇಶನದ ವಿಷಯವನ್ನು ರಾಜಕೀಯಗೊಳಿಸುತ್ತಿದ್ದಾರೆ ಎಂದು ಸಿಎಂ ಕಾನೂನು ಸಲಹೆಗಾರ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಮುಡಾ(MUDA) ಜಾಗವನ್ನು ವಶಕ್ಕೆ ಪಡೆದು ನಿವೇಶನಗಳಾಗಿ ಪರಿವರ್ತನೆ ಮಾಡಿದ ಬಳಿಕ ಜಾಗವನ್ನು ಸಿದ್ದರಾಮಯ್ಯ(CM Siddaramaiah) ಅವರ ಸಂಬಂಧಿ ಖರೀದಿಸದಂತೆ ಇದೆ. ಹೀಗಾಗಿ ಈ ದಾಖಲೆಗಳೆಲ್ಲಾ ಸುಳ್ಳು ಎಂದು ಆರ್ ಟಿ ಐ ಕಾರ್ಯಕರ್ತ ಗಂಗರಾಜು ದಾಖಲೆ ಬಿಡುಗಡೆ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಮಡಿಕೇರಿಯಲ್ಲಿ ಸುರ್ವಣ ನ್ಯೂಸ್ ನೊಂದಿಗೆ ಪೊನ್ನಣ್ಣ ಅವರು ಮಾತನಾಡಿದ್ದಾರೆ. 

ರಾಯಚೂರು ನೂತನ ಜಿಲ್ಲಾಧಿಕಾರಿಯಾಗಿ ನಿತೀಶ್ ಕೆ ಅಧಿಕಾರ ಸ್ವೀಕಾರ

ಈ ಗಂಗರಾಜು ಯಾರೋ ನನಗೆ ಗೊತ್ತಿಲ್ಲ. ಆದರೆ ಈ ಪ್ರಕರಣವನ್ನು ಸಂಪೂರ್ಣ ರಾಜಕಿಕರಣ ಗೊಳಿಸಲಾಗುತ್ತಿದೆ. ಸಿದ್ದರಾಮಯ್ಯನವರ ಹೆಸರಿಗೆ ಧಕ್ಕೆ ತರಬೇಕೆಂದು ಇವರು ಪ್ರಯತ್ನ ನಡೆಸುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಯಾವ ತಾರೀಖಿಗೆ ಏನೆಲ್ಲಾ ಆಗಿದೆ, ಯಾವ ತಾರೀಖಿಗೆ ನೋಂದಣಿಯಾಗಿದೆ ಎನ್ನುವ ಎಲ್ಲಾ ದಾಖಲೆ ಸಹಿತ ಬಿಡುಗಡೆ ಮಾಡಿದ್ದೇನೆ. ಮತ್ತೆ ಏನೋ ಹೇಳಿಕೊಂಡು ಕುಳಿತರೆ ಏನರ್ಥ. 2004 ರಲ್ಲಿ ಆ ಜಾಗವನ್ನು ಕೊಂಡುಕೊಳ್ಳಲಾಗಿದೆ. ನಮ್ಮ ಜಾಗ ವಶಕ್ಕೆ ಪಡೆದಿದ್ದೀರಾ ಜಾಗ ಕೊಡಿ ಎಂದು 2014 ರಲ್ಲಿ ಅವರು ಅರ್ಜಿ ಹಾಕಿದ್ದಾರೆ. 2021 ರಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಪರಿಹಾರ ಕೊಡಲಾಗಿದೆ. ನಾಗರಿಕರಿಗೆ ಹಕ್ಕು ಇರುವಂತೆ ಸಿಎಂ ಅವರ ಪತ್ನಿಗೆ ಅವರ ಆಸ್ತಿಯ ಮೇಲೆ ಹಕ್ಕಿದೆ. ಸಿಎಂ ಪತ್ನಿ ಎನ್ನುವ ಕಾರಣಕ್ಕೆ ಹೇಗೇಗೋ ತೆಗೆದುಕೊಳ್ಳುವುದಕ್ಕೆ ಆಗುತ್ತಾ ಎಂದು ಪ್ರಶ್ನಿಸಿದ್ದಾರೆ. 

ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವುದಕ್ಕೆ ಸರ್ಕಾರಕ್ಕೆ ಏನು ಕಷ್ಟ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ(pralhad joshi) ಅವರು ಪ್ರಶ್ನಿಸಿರುವುದಕ್ಕೆ ಪ್ರತಿಕ್ರಿಯಿಸಿದ ಪೊನ್ನಣ್ಣ ಅವರು ಏನನ್ನು ಸಿಬಿಐ ತನಿಖೆಗೆ ಕೊಡಬೇಕು, ಯಾಕೆ ಕೊಡಬೇಕು. ಎಲ್ಲರೂ ಜಾಗಕೊಟ್ಟಿದ್ದಾರೆ ಜಾಗ ತೆಗೆದುಕೊಂಡಿದ್ದಾರೆ. ಹಾಗಾದರೆ ಅದೆಲ್ಲವನ್ನು ಸಿಬಿಐ ತನಿಖೆಗೆ ವಹಿಸಲಾಗುತ್ತಾ. ಏನಾದರೂ ಒಂದು ಅಪರಾಧಿಕರಣ ಆಗಿದ್ದರೆ ಅದನ್ನು ಸಿಬಿಐಗೆ ವಹಿಸಬಹುದು. ಸಿಎಂ ಪತ್ನಿಗೆ ಜಾಗವನ್ನು ಸುಮ್ಮನೇ ಕೊಟ್ಟಿಲ್ಲ. ಯಾವುದೋ ಕ್ಯಾಟಗೆರಿ ಮೇಲೆ ಅಲರ್ಟ್ ಮಾಡಿ ಜಾಗಕೊಟ್ಟಿಲ್ಲ. ಪರಿಹಾರದ ಬದಲಿಗೆ ಜಾಗ ಕೊಟ್ಟಿದ್ದಾರೆ. ಇಲ್ಲ ಇವತ್ತಿನ ಬೆಲೆಗೆ ತಕ್ಕಂತೆ 57 ಕೋಟಿ ರೂಪಾಯಿ ಪರಿಹಾರ ಕೊಡಲಿ. ಇಲ್ಲ ಇವರ 3 ಎಕರೆ 16 ಗುಂಟೆ ಜಾಗ ಬಿಟ್ಟುಕೊಡಲಿ ಎಂದು ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ಒತ್ತಾಯಿಸಿದ್ದಾರೆ. 

ಇಂತಹ ವಿಚಾರದಲ್ಲಿ ರಾಜಕೀಯ ಮಾಡುವುದನ್ನು ಬಿಡಲಿ. ಇನ್ನೇನು ವಿಧಾನಸಭಾ ಅಧಿವೇಶನ ಶುರುವಾಗಲಿದೆ. ಅಲ್ಲಿ ಎಲ್ಲರೂ ಭಾಗವಹಿಸಿ ಚರ್ಚೆ ಮಾಡಲಿ. ಅಭಿವೃದ್ಧಿ ವಿಚಾರದಲ್ಲಿ ಚರ್ಚೆ ಮಾಡಲಿ ಎಂದು ಪೊನ್ನಣ್ಣ ಆಗ್ರಹಿಸಿದ್ದಾರೆ.

ಪ್ರಾಕೃತಿಕ ವಿಕೋಪ ತಡೆಗೆ ಅಗತ್ಯ ಕ್ರಮಕ್ಕೆ ಸಚಿವ ಎನ್‌ಎಸ್ ಬೋಸರಾಜ್ ಸೂಚನೆ

ಎಚ್‌ಡಿಕೆ ಆರೋಪಕ್ಕೆ ಬೋಸರಾಜು ತಿರುಗೇಟು: 

ಜನಸ್ಪಂದನಕ್ಕೆ ಅವಕಾಶ ನೀಡಿಲ್ಲ ಎಂಬ ಕುಮಾರಸ್ವಾಮಿ(hd kumaraswamy) ಅವರ ಆಪಾದನೆ ರಾಜಕೀಯ ಪ್ರೇರಿತ ಎಂದು ಸಣ್ಣ ನೀರಾವರಿ ಸಚಿವ ಬೋಸರಾಜ್ ತಿರುಗೇಟು(NS Boseraju) ನೀಡಿದ್ದಾರೆ. ಕುಮಾರಸ್ವಾಮಿ ಅವರು ಕೇಂದ್ರದ ಸಚಿವರು, ಅವರಿಗೆ ಪ್ರೋಟೋಕಾಲ್ ಕೊಡುವುದನ್ನು ಕೊಡಲಾಗುತ್ತದೆ. ಅವರು ಜನಸ್ಪಂದನೆ ಕಾರ್ಯಕ್ರಮ ಮಾಡಬೇಕೆಂದರೆ ಸಂಬಂಧಿತ ಡಿಸಿ ಮೂಲಕ ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತರಬೇಕು. ಅದು ಬಿಟ್ಟು ಸುಮ್ಮನೆ ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ತರಬೇಕೆಂದು ಏನೆಲ್ಲಾ ಮಾತನಾಡಬಾರದು ಎಂದಿದ್ದಾರೆ. ಅವರ ಯಾವುದೇ ವಿಷಯವನ್ನು ಯಾರ ಗಮನಕ್ಕೂ ತರದೆ ಸಭೆ ಹೇಗೆ ನಡೆಯುತ್ತದೆ ಎಂದು ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದ್ದಾರೆ.

Latest Videos
Follow Us:
Download App:
  • android
  • ios