ಸಿದ್ದರಾಮಯ್ಯ ವಿರುದ್ದ ಪ್ರಾಸಿಕ್ಯೂಷನ್‌ ಅನುಮತಿ, ತುಷಾರ್ ಮೆಹ್ತಾ ವಾದದಿಂದ ಹೆಚ್ಚಾಯ್ತು ಟೆನ್ಷನ್!

ಸಂಪುಟ ತೆಗೆದುಕೊಂಡ ನಿರ್ಣಯ, ಸಲಹೆಯನ್ನು ರಾಜ್ಯಪಾಲರು ಪರಿಗಣಿಸಬೇಕು ಎಂದಿಲ್ಲ. 17ಎ ಅಡಿಯಲ್ಲಿ ತನಿಖೆಗೆ ಅನುತಿ ನೀಡಲಾಗಿದೆ ಎಂದು ರಾಜ್ಯಪಾಲರ ಪರ ತುಷಾರ್ ಮೆಹ್ತಾ ಹೈಕೋರ್ಟ್‌ನಲ್ಲಿ ವಾದ ಮಂಡಿಸಿದ್ದಾರೆ. ಮೆಹ್ತಾ ವಾದ ಮಂಡಿಸುತ್ತಿದ್ದಂತೆ ಇದೀಗ ಆತಂಕ ಹೆಚ್ಚಾಗತೊಡಗಿದೆ.

Muda scam No need to consider cabinet decision before prosecution nod against CM says tushar mehta ckm

ಬೆಂಗಳೂರು(ಆ.31) ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ರಾಜ್ಯಪಾಲರು ಪ್ರಾಸಿಕ್ಯೂಷನ್ ಅನುಮತಿ ನೀಡಿದ ಕ್ರಮವನ್ನು ಪ್ರಶ್ನಿಸಿದ ಅರ್ಜಿ ವಿಚಾರಣೆ ಹೈಕೋರ್ಟ್‌ನಲ್ಲಿ ಕಾವೇರಿದೆ. ಮುಡಾ ಹಗರಣ ಸಂಬಂಧ ರಾಜ್ಯಪಾಲರ ಪ್ರಾಸಿಕ್ಯೂಶನ್ ಆದೇಶ ರದ್ದುಪಡಿಸಲು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪರ ತುಷಾರ್ ಮೆಹ್ತಾ ವಾದ ಮಂಡಿಸಿದ್ದಾರೆ.ಈ ವೇಳೆ ಸಂಪುಟ ಸಲಹೆಯನ್ನು ರಾಜ್ಯಪಾಲರು ಪರಿಗಣಿಸಿಲ್ಲ ಅನ್ನೋ ವಾದಕ್ಕೆ ತಿರುಗೇಟು ನೀಡಿದ್ದಾರೆ. ರಾಜ್ಯಪಾಲರು ಸಂಪುಟ ಸಲಹೆ ಪರಿಗಣಿಸಬೇಕು ಎಂದಿಲ್ಲ ಎಂದು ವಾದಿಸಿದ್ದಾರೆ. ತುಷಾರ್ ಮೆಹ್ತಾ ವಾದ ಮಂಡಿಸುತ್ತಿದ್ದಂತೆ ಇತ್ತ ಸಿದ್ದರಾಮಯ್ಯ ಪಾಳಯದಲ್ಲಿ ಆತಂಕ ಹೆಚ್ಚಾಗತೊಡಗಿದೆ.

ಸಿಎಂ ವಿರುದ್ಧ ಆರೋಪ ಬಂದಿದೆ ತನಿಖೆ ಆಗಬೇಕಿದೆ. ಸಿದ್ದರಾಮಯ್ಯ ಪರ ವಕೀಲರುು ಆತ್ಮಾಹುತಿ ವಾದ ಮಂಡಿಸುತ್ತಿದ್ದಾರೆ. ಪತ್ನಿ ವಿರುದ್ಧ ಆರೋಪಕ್ಕೆ ಗಂಡನ ಹೊಣೆ ಮಾಡುತ್ತಿದ್ದಾರೆ ಅನ್ನೋ ಒಪ್ಪುವುದಾದರೆ, 17ಎ ಅವಶ್ಯಕತೆ ಇಲ್ಲ.ದೂರುದಾರ ನೇರವಾಗಿ ತನಿಖಾ ಸಂಸ್ಥೆ ಬಳಿ ಹೋಗಬಹುದಿತ್ತು.17ಎ ಅಡಿಯಲ್ಲಿ ತನಿಖೆಗೆ ಮಾತ್ರ ಅನುಮತಿ ನೀಡಲಾಗಿದೆ. ಬಿಎನ್ಎಸ್ ಕಾಯಿದೆ ಅಡಿ ತನಿಖೆಗೆ ಕೇಳಲಾಗಿದೆ ಎಂದು ತುಷಾರ್ ಮೆಹ್ತಾ ವಾದ ಮಂಡಿಸಿದ್ದಾರೆ.

ಬಿಜೆಪಿಯವರು ಪಶ್ಚಾತಾಪ ಪಡುವ ಸ್ಥಿತಿ ಬರಲಿದೆ, ಸಿದ್ದರಾಮಯ್ಯಗೆ ನ್ಯಾಯ ಸಿಕ್ಕೇ ಸಿಗುತ್ತದೆ: ಸಚಿವ ಎಂ.ಬಿ.ಪಾಟೀಲ್

ರಾಜ್ಯಪಾಲರ ಶೋಕಾಸ್ ನೋಟಿಸ್‌ಗೆ ಮುಖ್ಯಮಂತ್ರಿ ಉತ್ತರಿಸಿದ್ದಾರೆ, ಕ್ಯಾಬಿನೆಟ್ ಸಲಹೆ, ದೂರುದಾರರ ಅರ್ಜಿ ಎಲ್ಲವನ್ನು ಪರಿಗಣಿಸಿ ರಾಜ್ಯಪಾಲರು ಪ್ರಾಸಿಕ್ಯೂಶನ್ ಆದೇಶ ನೀಡಿದ್ದಾರೆ ಎಂದು ಮೆಹ್ತಾ ವಾದಿಸಿದ್ದಾರೆ. ಲಿಖಿತ ದೂರು ಆಧರಿಸಿ ತನಿಖೆಕೆ ಅನುಮತಿ ನೀಡಿದ್ದಾರೆ. ಇಲ್ಲಿ ರಾಜ್ಯಪಾಲರು ವಿವೇಚನೆ ಬಳಿಸಿ ಆದೇಶ ನೀಡಿದ್ದಾರೆ. 17ಎ ಬಳಕೆ ಬಗ್ಗೆ ಸುಪ್ರೀಂ ಕೋರ್ಟ್ ಹಲವು ತೀರ್ಪು ನೀಡಿದೆ. 17ಎ ಬಳಸಿ ತನಿಖೆಗ ಅನುಮತಿ ನೀಡುವಾಗ ವಿವರಣೆ ನೀಡಬೇಕಿಲ್ಲ. ಹೀಗೆ ಮಾಡಿದರೆ ಪೂರ್ವಗ್ರಹ ಪೀಡಿತವಾಗುತ್ತದೆ ಎಂದು ಮೆಹ್ತಾ ಹೇಳಿದ್ದಾರೆ.

2018ರ ಮುನ್ನ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ತನಿಖೆಗೆ ಅವಕಾಶ ಇರಲಿಲ್ಲ. ಯಾವದೇ ಪೂರ್ವಗ್ರಾಹ ಪೀಡಿತವಾಗಿ ತನಿಖೆಗೆ ಆದೇಶ ನೀಡಲಿಲ್ಲ. ಆದೇಶದಲ್ಲಿ ರಾಜ್ಯಪಾಲರು, ಹೀಗೆ ತನಿಖೆ ಮಾಡಬೇಕು, ಈ ಸೆಕ್ಷನ್ ಅಡಿಯಲ್ಲಿ ಶಿಕ್ಷೆ ವಿಧಿಸಬೇಕು ಎಂದು ಸೂಚಿಸಿಲ್ಲ. ಕೇವಲ ತನಿಖೆಗೆ ಅವಕಾಶ ನೀಡಲಾಗಿದೆ ಎಂದು ಮೆಹ್ತಾ ಹೇಳಿದ್ದಾರೆ.  

ಯಾವುದೇ ದೂರಿನಲ್ಲಿ ಸಂಹೇದ  ಕಂಡು ಬಂದರೆ ಈ ಕುರಿತು ರಾಜ್ಯಪಾಲರಿಗೆ ತನಿಖೆಗೆ ಆದೇಶಿಸಬಹುದು. ರಾಜ್ಯಪಾಲರಿಗೆ ತನಿಖೆಯ ಅವಶ್ಯಕತೆ ಇದೆ ಎಂದು ಎನಿಸಿದರೆ ಆದೇಶಿಸಬಹುದು. ಇದು ರಾಜ್ಯಪಾಲರ ಹಕ್ಕು ಮಾತ್ರವಲ್ಲ, ಕರ್ತವ್ಯ ಕೂಡ ಆಗಿದೆ. ಇದು ಮುಖ್ಯಮಂತ್ರಿ ಹಾಗೂ ರಾಜ್ಯಪಾಲರ ನಡುವಿನ ಪ್ರಕರಣವಲ್ಲ ಎಂದು ತುಷಾರ್ ಮೆಹ್ತಾ ವಾದಿಸಿದ್ದಾರೆ.

ಸಿಎಂ ಸಿದ್ದು, ಡಿಸಿಎಂ ಡಿಕೆಶಿ ನೇತೃತದಲ್ಲಿಂದು ಕಾಂಗ್ರೆಸ್ ರಾಜಭವನ ಚಲೋ: ಸಚಿವರು, ಶಾಸಕರ ಸಾಥ್‌
 

Latest Videos
Follow Us:
Download App:
  • android
  • ios