Min read

ಬೇನಾಮಿ ಹೆಸರಲ್ಲಿ 600 ಮುಡಾ ಸೈಟ್‌ ಖರೀದಿ: ಇ.ಡಿ ಪತ್ತೆ

Muda Purchased 600 Sites Illegal Says Enforcement Directorate

Synopsis

ಮುಡಾ ಹಗರಣದಲ್ಲಿ 300 ಕೋಟಿ ರು. ಮೌಲ್ಯದ 142 ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡ ಬೆನ್ನಲ್ಲೇ ಈ ವಿಚಾರ ಬೆಳಕಿಗೆ ಬಂದಿದೆ. ಬೇನಾಮಿ ಹೆಸರಲ್ಲಿ 49 ಮೈಸೂರು ಸ್ಥಿರಾಸ್ತಿ ಮಾಡಿರುವ ಕುರಿತು ತನಿಖೆ ವೇಳೆ ಗೊತ್ತಾಗಿದ್ದು, ಈ ಬಗ್ಗೆ ಮಾಹಿತಿ ನೀಡುವಂತೆ ಇ.ಡಿ. ಅಧಿಕಾರಿಗಳು ಮುಡಾದಿಂದ ಮಾಹಿತಿ ಕೋರಿದ್ದಾರೆ. ಈ ಸಂಬಂಧ ಪತ್ರ ಬರೆದು ಮಾಹಿತಿ ಒದಗಿಸುವಂತೆ ತಿಳಿಸಲಾಗಿದೆ. 

ಬೆಂಗಳೂರು (ಜ.19): ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸಂಕಷ್ಟ ತಂದೊಡ್ಡಿರುವ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಹಗರಣ ಸಂಬಂಧ ತನಿಖೆ ಕೈಗೊಂಡಿರುವ ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕಾರಿಗಳು ಮತ್ತಷ್ಟು ಅಕ್ರಮಗಳನ್ನು ಬಯಲು ಮಾಡಿದ್ದು, 600ಕ್ಕೂ ಹೆಚ್ಚು ಸ್ಥಿರಾಸ್ತಿಗಳು ಬೇನಾಮಿ ಹೆಸರಲ್ಲಿರುವುದನ್ನು ಪತ್ತೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. 

ಮುಡಾ ಹಗರಣದಲ್ಲಿ 300 ಕೋಟಿ ರು. ಮೌಲ್ಯದ 142 ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡ ಬೆನ್ನಲ್ಲೇ ಈ ವಿಚಾರ ಬೆಳಕಿಗೆ ಬಂದಿದೆ. ಬೇನಾಮಿ ಹೆಸರಲ್ಲಿ 49 ಮೈಸೂರು ಸ್ಥಿರಾಸ್ತಿ ಮಾಡಿರುವ ಕುರಿತು ತನಿಖೆ ವೇಳೆ ಗೊತ್ತಾಗಿದ್ದು, ಈ ಬಗ್ಗೆ ಮಾಹಿತಿ ನೀಡುವಂತೆ ಇ.ಡಿ. ಅಧಿಕಾರಿಗಳು ಮುಡಾದಿಂದ ಮಾಹಿತಿ ಕೋರಿದ್ದಾರೆ. ಈ ಸಂಬಂಧ ಪತ್ರ ಬರೆದು ಮಾಹಿತಿ ಒದಗಿಸುವಂತೆ ತಿಳಿಸಲಾಗಿದೆ ಎಂದು ಮೂಲಗಳು ಹೇಳಿವೆ. 

ಮುಡಾ ಹಗರಣ ₹300 ಕೋಟಿ ಆಸ್ತಿ ಇ.ಡಿ ವಶಕ್ಕೆ: ತನಿಖೆ ಬಳಿಕ ರಾಜೀನಾಮೆ ಎಂದ ಸಿದ್ದರಾಮಯ್ಯ ಈಗಲಾದ್ರೂ ಕೊಡ್ತಾರಾ? - ಯದುವೀರ್ ಒಡೆಯರ್

ತನಿಖೆ ವೇಳೆ ಸುಮಾರು 600ಕ್ಕೂ ಹೆಚ್ಚು ಸ್ಥಿರಾಸ್ತಿಗಳು ಬೇನಾಮಿ ಹೆಸರಲ್ಲಿರುವುದು ತಿಳಿದುಬಂದಿದೆ. ಹೀಗಾಗಿ ಯಾರ ಹೆಸರಲ್ಲಿ ಎಷ್ಟು ಸ್ಥಿರಾಸ್ತಿಗಳಿವೆ ಎಂಬ ಮಾಹಿತಿ ಕಲೆಹಾಕಲು ಇ.ಡಿ. ಮುಂದಾಗಿದೆ. ಮುಡಾ ಮಾಜಿ ಆಯುಕ್ತರ ಹೆಸರಲ್ಲಿ ಸೇರಿ ರಿಯಲ್ ಎಸ್ಟೇಟ್ ಏಜೆಂಟ್, ಅಧಿಕಾರಿಗಳು ಮತ್ತು ರಾಜಕಾರಣಿಗಳ ಹೆಸರಲ್ಲಿ ಬೇನಾಮಿಯಾಗಿ ಆಸ್ತಿ ಖರೀದಿಸಲಾಗಿದೆ. ತನಿಖೆ ವೇಳೆ ಮೇಲ್ನೋಟಕ್ಕೆ ಈ ಕುರಿತು ಮಾಹಿತಿ ಲಭ್ಯವಾಗಿದ್ದು, ಈ ಬಗ್ಗೆ ಮಾಹಿತಿ ನೀಡಬೇಕು ಎಂದು ಮುಡಾಗೆ ಇ.ಡಿ. ಅಧಿಕಾರಿಗಳು ಕೋರಿದ್ದಾರೆ ಎನ್ನಲಾಗಿದೆ. ಇದು ಹಳೇ ಮೈಸೂರು ಭಾಗದ ರಾಜಕಾರಣಿಗಳು, ಅಧಿಕಾರಿಗಳು ಮತ್ತು ಏಜೆಂಟರ ಆತಂಕಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ.

ಪೂರ್ಣ ಮಾಹಿತಿಗಾಗಿ ಕೋರಿಕೆ: 

ಮುಡಾ ನಿವೇಶನಗಳನ್ನು ಯಾವ ರೀತಿಯಲ್ಲಿ ಹಂಚಿಕೆ ಮಾಡಲಾಗಿದೆ ಮತ್ತು ಯಾವ ಸಮಯದಲ್ಲಿ ಹಂಚಿಕೆ ಮಾಡಲಾಗಿದೆ ಎಂಬ ಮಾಹಿತಿಯನ್ನೂ ಇ.ಡಿ. ಕೋರಿದೆ. ಅಲ್ಲದೆ, ಯಾರಿಗೆ, ಯಾವ ಕಾಲದಲ್ಲಿ ಎಷ್ಟು ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ ಎಂಬ ಕುರಿತು ಸಂಪೂರ್ಣ ಮಾಹಿತಿ ನೀಡುವಂತೆ ಕೇಳಿದೆ ಎಂದು ಹೇಳಲಾಗಿದೆ.

ಸಿಎಂ ನಡುಗಿಸಿದ ಸ್ನೇಹಮಯಿ ಕೃಷ್ಣ ರಿಯಲ್ ಹೀರೋ ಆದ್ರಾ? ಅರ್ಜುನ್ ಗುರೂಜಿ ವಿರುದ್ಧ ಲೈಂಗಿಕ ಕಿರುಕುಳ ದೂರು!

ಸಿಎಂ ಸಿದ್ದು ರಾಜೀನಾಮೆ ನೀಡಲಿ: ಬಿವೈವಿ 

ಬೆಂಗಳೂರು: ಮುಡಾ ಹಗರಣ ವಿಚಾರದಲ್ಲಿ ಮುಖ್ಯಮಂತ್ರಿಗಳು ಭಂಡತನ ಬಿಟ್ಟು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಮತ್ತು ಅದಕ್ಕೂ ಮುನ್ನ ಪ್ರಕರಣವನ್ನು ಸಿಬಿಐ ತನಿಖೆಗೆ ಹಸ್ತಾಂತರಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ. ಸಿಎಂ ತಮ್ಮ ಕುಟುಂಬಕ್ಕೆ ಅಕ್ರಮವಾಗಿ 14 ನಿವೇಶನ ಪಡೆದುಕೊಂ ಡಿದ್ದಾರೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟ ಎಂದಿದ್ದಾರೆ.

ಸಿದ್ದು ಅಕ್ರಮ ಎಸಗಿಲ್ಲ, ಇದು ಪಿತೂರಿ: ಡಿಕೆಶಿ 

ಬೆಳಗಾವಿ: ಮುಡಾ ಸೈಟ್ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಕುಟುಂಬದ ವಿರುದ್ಧ ರಾಜಕೀಯ ಪಿತೂರಿ ನಡೆಯುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಿ. ಕೆ.ಶಿವಕುಮಾರ್ ಆರೋಪಿಸಿದ್ದಾರೆ. ಸಿಎಂ ಆಗಲಿ, ಅವರ ಪತ್ನಿಯಾಗಲಿ ಅಕ್ರಮದಲ್ಲಿ ಭಾಗಿಯಾಗಿಲ್ಲ. ಇದರಲ್ಲಿ ತೀರ್ಮಾನ ಮಾಡೋದು ಇ.ಡಿ. ಅಲ್ಲ, ನ್ಯಾಯಾಲಯ ಎಂದು ಹೇಳಿದ್ದಾರೆ.

Latest Videos