ಸಂಸದ ಬಿವೈ ರಾಘವೇಂದ್ರರಿಂದ ಫಲಾನುಭವಿಗಳಿಗೆ ಕೇಂದ್ರ ಸರ್ಕಾರ ವಿವಿಧ ಯೋಜನೆಗಳ ಸಾಲ ಸೌಲಭ್ಯ ವಿತರಣೆ
ಇಂದು ದೇಶದ ಸರ್ಕಾರಿ ವಲಯದಲ್ಲಿ ಶೇ.3.5ರಷ್ಟು ಮಂದಿ ಕೆಲಸ ಮಾಡುತ್ತಿದ್ದಾರೆ. ಉಳಿದ ಶೇ.70ರಷ್ಟು ಮಂದಿ ಕೃಷಿಯಲ್ಲಿ ತೊಡಗಿದ್ದಾರೆ ಎಂದು ಸಂಸದ ಬಿವೈ ರಾಘವೇಂದ್ರ ತಿಳಿಸಿದರು.
ಶಿವಮೊಗ್ಗ (ಡಿ.24) ಇಂದು ದೇಶದ ಸರ್ಕಾರಿ ವಲಯದಲ್ಲಿ ಶೇ.3.5ರಷ್ಟು ಮಂದಿ ಕೆಲಸ ಮಾಡುತ್ತಿದ್ದಾರೆ. ಉಳಿದ ಶೇ.70ರಷ್ಟು ಮಂದಿ ಕೃಷಿಯಲ್ಲಿ ತೊಡಗಿದ್ದಾರೆ ಎಂದು ಸಂಸದ ಬಿವೈ ರಾಘವೇಂದ್ರ ತಿಳಿಸಿದರು.
ಕೇಂದ್ರ ಸರ್ಕಾರದ ಪಿಎಂ ಸ್ವನಿಧಿ, ಪಿಎಂ ಸೂರ್ಯಘರ್, ವಿಶ್ವಕರ್ಮ ಸೇರಿದಂತೆ ಸುಮಾರು 9 ಯೋಜನೆಗಳ 1040 ಫಲಾನುಭವಿಗಳಿಗೆ ಸಾಲದ ಆದೇಶ ಪತ್ರ ಚೆಕ್ ವಿತರಣೆ ಮಾಡಿದ ಬಳಿಕ ಮಾತನಾಡಿದ ಸಂಸದರು, ಇಂದು ಸರ್ಕಾರಿ ವಲಯಕ್ಕಿಂತ ಖಾಸಗಿ ವಲಯ ಇಲ್ಲವೇ ಸ್ವಯಂ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಅದರಲ್ಲೇ ಯಶಸ್ವಿಯಾಗಿದ್ದಾರೆ ಎಂದರು.
ಉತ್ತರ ಭಾರತದಲ್ಲಿ ಇರುವಂತೆ ಕರ್ನಾಟಕದಲ್ಲೂ ಗ್ರೀನ್ ಫೀಲ್ಡ್ ಕಾರಿಡಾರ್ ಯೋಜನೆ: ಸೋಮಣ್ಣ
ಇಂದು ದೇಶದಲ್ಲಿರುವ ದುಡಿಯುವ ಶಕ್ತಿ, ಯೋಜನೆಗೆ ತಕ್ಕಂತೆ ಬ್ಯಾಂಕ್‌ಗಳಿಂದ ಆರ್ಥಿಕ ನೆರವು ದೊರೆಯುತ್ತಿದೆ. ಅದರ ಸದ್ಬಳಕೆ ಮಾಡಿಕೊಂಡು ಫಲಾನುಭವಿಗಳು ಆರ್ಥಿಕವಾಗಿ ಸದೃಢವಾಗಬೇಕು. ಬ್ಯಾಂಕ್ ಸಿಬ್ಬಂದಿ ಜನಸ್ನೇಹಿಯಾಗಿ ಕಾರ್ಯನಿರ್ವಹಿಸಿ ಫಲಾನುಭವಿಗಳಿಗೆ ತ್ವರಿತವಾಗಿ ಸೌಲಭ್ಯ ಒದಗಿಸಬೇಕು ಎಂದು ಸೂಚಿಸಿದರು.
ಈ ವೇಳೆ ಜಿಪಂ ಸಿಇಒ ಎನ್.ಹೇಮಂತ್, ಕೆನರಾ ಬ್ಯಾಂಕ್ ಶಿವಮೊಗ್ಗ ಪ್ರಾದೇಶಿಕ ಕಚೇರಿ ಡಿಜಿಎಂ ಆರ್.ದೇವರಾಜ್, ಬೆಂಗಳೂರು ಆರ್‌ಬಿಐ ನ ವ್ಯವಸ್ಥಾಪಕ ವೆಂಕಟರಾಮಯ್ಯ ಉಪಸ್ಥಿತರಿದ್ದರು.