Asianet Suvarna News Asianet Suvarna News

ಬಾಲ್ಯ ವಿವಾಹಗಳಿಗೆ ಸಿನಿಮಾ ಪ್ರಭಾವವೂ ಕಾರಣ: ಸಚಿವೆ ಲಕ್ಷ್ಮಿ ಹೆಬ್ಬಾಳ್ಳರ್

ಬಾಲ್ಯ ವಿವಾಹ ತಡೆಗಟ್ಟುವುದು ಕೇವಲ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕೆಲಸವಲ್ಲ. ಇದು ಹಲವು ಇಲಾಖೆಯ ವ್ಯಾಪ್ತಿಗೆ ಬರಲಿದ್ದು, ಎಲ್ಲರೂ ಸೇರಿ ಬಾಲ್ಯ ವಿವಾಹ ತಡೆಗಟ್ಟೋಣ ಎಂದು ಮನವಿ ಮಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಳರ್ 

Movies influence is also the reason for child marriages Says Minister Lakshmi Hebbalkar grg
Author
First Published Sep 5, 2024, 8:07 AM IST | Last Updated Sep 5, 2024, 8:07 AM IST

ಬೆಂಗಳೂರು(ಸೆ.05):  ಬಾಲ್ಯ ವಿವಾಹ ತಡೆಗಟ್ಟಲು ಪಾಲಕರು ಸೇರಿದಂತೆ ಎಲ್ಲರ ಸಹಕಾರ ಅತ್ಯಗತ್ಯ. ಮನೆಯ ಆರ್ಥಿಕ ಪರಿಸ್ಥಿತಿ, ಪ್ರೇಮ ವಿವಾಹ, ಸಿನಿಮಾದ ಪ್ರಭಾವವೂ ಬಾಲ್ಯ ವಿವಾಹಕ್ಕೆ ಕಾರಣವಾಗುತ್ತದೆ. ಎಲ್ಲರೂ ಸೇರಿ ಬಾಲ್ಯ ವಿವಾಹ ತಡೆಯಲು ಪ್ರಯತ್ನಿಸಬೇಕಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಳರ್ ಹೇಳಿದರು. 

ತಮ್ಮ ಗೃಹ ಕಚೇರಿಯಲ್ಲಿ ವಿಜಯನಗರ ಜಿಲ್ಲೆಯ ಭೀಮಾ ಸಂಘ, ಕಿಶೋರಿಯರ ಸಂಘದ ಸದಸ್ಯರ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಾಲ್ಯ ವಿವಾಹ ತಡೆಗಟ್ಟುವುದು ಕೇವಲ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕೆಲಸವಲ್ಲ. ಇದು ಹಲವು ಇಲಾಖೆಯ ವ್ಯಾಪ್ತಿಗೆ ಬರಲಿದ್ದು, ಎಲ್ಲರೂ ಸೇರಿ ಬಾಲ್ಯ ವಿವಾಹ ತಡೆಗಟ್ಟೋಣ ಎಂದು ಮನವಿ ಮಾಡಿದರು. 

ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಖುರ್ಚಿ ರೇಸ್‌: ಸಚಿವೆ ಲಕ್ಷ್ಮಿ ಹೆಬ್ಳಾಳ್ಕರ್ ಹೇಳಿದ್ದಿಷ್ಟು

ಮಕ್ಕಳಿಗೆ ಶಿಕ್ಷಣ ಅಥವಾ ಉದ್ಯೋಗಕ್ಕೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸುವಾಗ ತಂದೆ ಹೆಸರನ್ನು ಕಡ್ಡಾಯವಾಗಿ ನಮೂದಿಸುವುದು, ಮದ್ಯ ಮಾರಾಟ, ಅಂಗವಿಕಲ ಮಕ್ಕಳಿಗೆ ಅಗತ್ಯ ಸೌಲಭ್ಯಗಳ ಕೊರತೆ ಮತ್ತಿತರ ವಿಷಯಗಳ ಕುರಿತು ಚರ್ಚೆ ನಡೆಸಲಾಯಿತು. ಇಲಾಖೆ ಸಹ ನಿರ್ದೇಶಕಿ ಕೃಪಾ, ಕಾರ್ಯಕಾರಿ ಉಪಸ್ಥಿತರಿದ್ದರು. 

Latest Videos
Follow Us:
Download App:
  • android
  • ios