ರಸ್ತೆ ಅಪಘಾತಕ್ಕೆ ತಾಯಿ ಮಗ ಸಾವು: ಮತ್ತೊಂದಡೆ ವಿದ್ಯುತ್ ಅವಘಡಕ್ಕೆ ಸ್ಥಳದಲ್ಲೇ ಮಗು ದುರ್ಮರಣ!
ಕೊಪ್ಪಳ ತಾಲೂಕಿನ ಮಂಗಳಪುರ ರಾಷ್ಟ್ರೀಯ ಹೆದ್ದಾರಿ ಬಳಿ ನಿಂತಿದ್ದ ಲಾರಿಗೆ ಬೈಕೊಂಡು ಗುದ್ದಿ ಸ್ಥಳದಲ್ಲಿಯೇ ತಾಯಿ ಹಾಗೂ ಮಗ ಮೃತಪಟ್ಟಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ. ಇನ್ನೊಂದಡೆ ಗದಗನಲ್ಲಿ ವಿದ್ಯುತ್ ಅವಘಡದಿಂದ ಸ್ಥಳದಲ್ಲಿಯೇ ಬಾಲಕನೋರ್ವ ಮೃತಪಟ್ಟಿರುವ ಘಟನೆ ನಡೆದಿದೆ. ಗಜೇಂದ್ರಗಡದ ಜನತಾ ಪ್ಲಾಟ್ ನ ಪಂಕಜ್ ರಾಮು ಕಲಾಲ್ (12) ಮೃತ ದುರ್ದೈವಿ..
ಕೊಪ್ಪಳ (ಜೂ.12): ಕೊಪ್ಪಳ ತಾಲೂಕಿನ ಮಂಗಳಪುರ ರಾಷ್ಟ್ರೀಯ ಹೆದ್ದಾರಿ ಬಳಿ ನಿಂತಿದ್ದ ಲಾರಿಗೆ ಬೈಕೊಂಡು ಗುದ್ದಿ ಸ್ಥಳದಲ್ಲಿಯೇ ತಾಯಿ ಹಾಗೂ ಮಗ ಮೃತಪಟ್ಟಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ.
ಮೃತರನ್ನು ಗದಗ್ ಜಿಲ್ಲೆಯ ರೋಣ ತಾಲೂಕಿನ ಗಜೇಂದ್ರಗಡದ ಪುಟ್ಟರಾಜು ವಸ್ತ್ರದ(46) ಹಾಗೂ ಗಂಗಮ್ಮ ವಸ್ತ್ರದ(70) ಗುರುತಿಸಲಾಗಿದೆ. ಇವರು ಗಜೇಂದ್ರಗಡ ದಿಂದ ಕೊಪ್ಪಳ ಮಾರ್ಗವಾಗಿ ಹೊಸಪೇಟೆಗೆ ಬೈಕ್ ನಲ್ಲಿ ತೆರಳುತ್ತಿದ್ದರು. ತಾಲೂಕಿನ ಮಂಗಳಾಪುರ ಬಳಿ ರಾಷ್ಟ್ರೀಯ ಹೆದ್ದಾರಿ ಬೈಪಾಸ್ ರಸ್ತೆಯ ಪಕ್ಕದಲ್ಲಿ ನಿಂತಿರುವ ಲಾರಿಗೆ ಇವರ ದ್ವಿಚಕ್ರ ವಾಹನವು ಗುದ್ಧಿ ಇಬ್ಬರು ತೀವ್ರ ಅಪಘಾತಕ್ಕೆ ಒಳಗಾಗಿ ರಕ್ತಸ್ರಾವದಿಂದ ಬಳಲಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಶೇ.50ರಷ್ಟು ಅಪಘಾತ ತಗ್ಗಿಸುವ ಗುರಿ ಮುಟ್ಟಲು ವಿಫಲ: ಕೇಂದ್ರ ಸಚಿವ ನಿತಿನ್ ಗಡ್ಕರಿ
ಅಪಘಾತ ಘಟನಾ ಸ್ಥಳಕ್ಕೆ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದು ಪ್ರಕರಣ ನಡೆದಿದೆ.
ವಿದ್ಯುತ್ ಅವಘಡ: ಸ್ಥಳದಲ್ಲಿಯೇ ಬಾಲಕ ಸಾವು
ಗದಗ: ವಿದ್ಯುತ್ ಅವಘಡದಿಂದ ಸ್ಥಳದಲ್ಲಿಯೇ ಬಾಲಕನೋರ್ವ ಮೃತಪಟ್ಟಿರುವ ಘಟನೆ ನಡೆದಿದೆ. ಗಜೇಂದ್ರಗಡದ ಜನತಾ ಪ್ಲಾಟ್ ನ ಪಂಕಜ್ ರಾಮು ಕಲಾಲ್ (12) ಮೃತ ದುರ್ದೈವಿ..
ಗಜೇಂದ್ರಗಡ- ಯಲಬುರ್ಗಾ ರಸ್ತೆಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ. ಆಟವಾಡುತ್ತಿದ್ದ ಪಂಕಜ್ ಕಲಾಲ್(Pankaj kalal) ರಾಷ್ಟ್ರೀಯ ಹೆದ್ದಾರಿ ರಸ್ತೆಯ ಬದಿಯಲ್ಲಿ ಅಳವಡಿಸಿರುವ ವಿದ್ಯುತ್ ಕಂಬವನ್ನು ಮುಟ್ಟಿದ ತಕ್ಷಣವೇ ವಿದ್ಯುತ್ ಪ್ರವಹಿಸಿ ಬಾಲಕ ಸಾವು.. ತಪ್ಪಿತ್ತಸ್ಥರ ಮೇಲೆ ಶಿಸ್ತು ಕ್ರಮ ಹಾಗೂ ಅಧಿಕಾರಿಗಳು ಸ್ಥಳಕ್ಕೆ ಬರಬೇಕು ಹಾಗೂ ಸೂಕ್ತ ಪರಿಹಾರಕ್ಕೆ ಆಗ್ರಹಿಸಿ ಜನತಾ ಪ್ಲಾಟ್ ನಿವಾಸಿಗಳು ಹಾಗೂ ವಿವಿಧ ಸಂಘಟನೆಯ ಮುಖಂಡರಿಂದ ಹೆದ್ದಾರಿ ತಡೆದು ಪ್ರತಿಭಟನೆ.
Road accidents: ಪ್ರತ್ಯೇಕ ಅಪಘಾತ ಮೂವರು ಸ್ಥಳದಲ್ಲೇ ಸಾವು!