Asianet Suvarna News Asianet Suvarna News

ಶೇ.50ರಷ್ಟು ಅಪ​ಘಾತ ತಗ್ಗಿ​ಸುವ ಗುರಿ ಮುಟ್ಟಲು ವಿಫ​ಲ: ಕೇಂದ್ರ ಸಚಿವ ನಿತಿನ್‌ ಗಡ್ಕರಿ

2024ರ ಗುರಿ ಅನ್ವಯ ನಾವು ರಸ್ತೆ ಅಪಘಾತವನ್ನು ಶೇ.50ರಷ್ಟು ಕಡಿಮೆ ಮಾವುವ ಗುರಿ ತಲು​ಪು​ವುದು ಸಂದೇ​ಹಾ​ಸ್ಪ​ದ. ಇದಕ್ಕೆ ಪ್ರಮುಖ ಕಾರಣವೆಂದರೆ ಸರ್ಕಾರದ ನ್ಯೂನತೆ ಹಾಗೂ ಗುಣಮಟ್ಟವನ್ನು ರಾಜಿ ಮಾಡಿಕೊಳ್ಳುತ್ತಿರುವ ಕಂಪನಿಗಳು’ ಎಂದ​ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್‌ ಗಡ್ಕರಿ 

Failed to Reach the Target of Reducing Accidents by 50 Percent in India Says Nitin Gadkari grg
Author
First Published Jun 9, 2023, 1:30 AM IST

ನವದೆಹಲಿ(ಜೂ.09):  2024ರ ವೇಳೆಗೆ ಭಾರತದಲ್ಲಿ ರಸ್ತೆ ಅಪಘಾತವನ್ನು ಶೇ.50ರಷ್ಟುಕಡಿಮೆ ಮಾಡುವ ಗುರಿ ತಲು​ಪಲು ಸಾಧ್ಯ​ವಾ​ಗು​ವು​ದಿ​ಲ್ಲ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್‌ ಗಡ್ಕರಿ ವಿಷಾ​ದಿ​ಸಿ​ದ್ದಾ​ರೆ.

ಗುರುವಾರ ಮಾತನಾಡಿದ ಅವರು,‘2024ರ ಗುರಿ ಅನ್ವಯ ನಾವು ರಸ್ತೆ ಅಪಘಾತವನ್ನು ಶೇ.50ರಷ್ಟು ಕಡಿಮೆ ಮಾವುವ ಗುರಿ ತಲು​ಪು​ವುದು ಸಂದೇ​ಹಾ​ಸ್ಪ​ದ. ಇದಕ್ಕೆ ಪ್ರಮುಖ ಕಾರಣವೆಂದರೆ ಸರ್ಕಾರದ ನ್ಯೂನತೆ ಹಾಗೂ ಗುಣಮಟ್ಟವನ್ನು ರಾಜಿ ಮಾಡಿಕೊಳ್ಳುತ್ತಿರುವ ಕಂಪನಿಗಳು’ ಎಂದ​ರು.

ಮೋದಿ ಆಡಳಿತದಲ್ಲಿ 50000 ಕಿ.ಮೀ. ಹೆದ್ದಾರಿ ನಿರ್ಮಾಣ: ಅತಿ ಉದ್ದದ ರಸ್ತೆ ಜಾಲದಲ್ಲಿ ಭಾರತ ವಿಶ್ವಕ್ಕೇ ನಂ. 2!

‘ರಸ್ತೆ ನಿರ್ಮಾಣ ಮಾಡಲು ತಯಾರಿಸುವ ಡಿಪಿಆರ್‌ನಲ್ಲಿ ಕಂಪನಿಗಳು ಹಣ ಉಳಿಸುವ ಉದ್ದೇಶವನ್ನು ಹೊಂದಿವೆಯೆ ಹೊರತು ಭದ್ರತೆ ಹಾಗೂ ಸುರ​ಕ್ಷತೆ ದೃಷ್ಟಿಹೊಂದಿಲ್ಲ’ ಎಂದೂ ವಿಷಾದಿಸಿದರು. ಇದರಿಂದಾಗಿ ದೇಶದಲ್ಲಿ ಪ್ರತಿ ವರ್ಷ 5 ಲಕ್ಷ ಅಪಘಾತಗಳು ಸಂಭವಿಸುತ್ತಿದೆ. ಇದರಲ್ಲಿ 2 ಲಕ್ಷ ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದರೆ, 3 ಲಕ್ಷ ಮಂದಿ ತೀವ್ರವಾಗಿ ಗಾಯಗೊಳ್ಳುತ್ತಿದ್ದಾರೆ ಎಂದು ಬೇಸ​ರಿ​ಸಿ​ದ​ರು.

Follow Us:
Download App:
  • android
  • ios