ಬೆಂಗಳೂರು (ನ.26): ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಬೋಧಕರಿಗೆ ಕೊರೋನಾ ಟೆಸ್ಟ್ ಮುಂದುವರಿದಿದ್ದು, ರಾಜ್ಯದಲ್ಲಿ ಕಾಲೇಜು ಆರಮಭವಾದ ವಾರದಲ್ಲಿ 500ಕ್ಕೂ ಅಧಿಕ ವಿದ್ಯಾರ್ಥಿಗಳಲ್ಲಿ ಸೋಂಕು ದೃಢವಾಗಿದೆ. 

ಬೆಂಗಳೂರಿನಲ್ಲಿ ಬುಧವಾರ 7 ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ಒಟ್ಟು ವಿದ್ಯಾರ್ಥಿಗಳು, ಶಿಕ್ಷಕರ ಸೋಂಕಿತರ ಸಮಖ್ಯೆ 209ಕ್ಕೆ ಏರಿಕೆಯಾಗಿದೆ. 

ಇದರಲ್ಲಿ 148 ಜನ ವಿದ್ಯಾರ್ಥಿಗಳು ಹಾಗೂ 61 ಮಂದಿ ಸಿಬ್ಬಂದಿಯಾಗಿದ್ದಾರೆ. 

ಬೆಂಗಳೂರಲ್ಲಿ ಕೊರೋನಾಗೆ ಬಲಿ ಆದವರ ಸಂಖ್ಯೆ 4100ಕ್ಕೆ ಏರಿಕೆ ..

ಕಾಲೇಜು ಆರಂಭವಾಗಿ ಇದುವರೆಗೆ ವಿದ್ಯಾರ್ಥಿಗಳು ಸೇರಿದಂತೆ ಚಿತ್ರದುರ್ಗ ಜಿಲ್ಲೆಯಲ್ಲಿ 110. ಬಳ್ಳಾರಿ 69, ಉತ್ತರ ಕನ್ನಡ ಜಿಲ್ಲೆಯಲ್ಲಿ 29, ಧಾರವಾಡ ಜಿಲ್ಲೆಯಲ್ಲಿ 11, ಗದಗ 3, ಬೀದರ್ 1, ಕಲಬುರಗಿ 7 ಮೈಸೂರು 6, ವಿಜಯಪುರದಲ್ಲಿ 29 ಉಡುಪಿಯಲ್ಲಿ 23 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.