ಬೆಲೆ ಏರಿಕೆ ನಡುವೆಯೂ ಏಪ್ರಿಲ್‌ನ ದಾಖಲೆ ಮುರಿದ ಮೇ ತಿಂಗಳ ಬಿಯರ್‌ ಮಾರಾಟ!

ಏಪ್ರಿಲ್‌ ತಿಂಗಳಿನಲ್ಲಿ ಅಬಕಾರಿ ಇಲಾಖೆಯ ಇತಿಹಾಸದಲ್ಲೇ ದಾಖಲೆ ಪ್ರಮಾಣದ ಬಿಯರ್‌ ಮಾರಾಟವಾಗಿ ದಾಖಲೆಯಾಗಿತ್ತು. ಆದರೆ ಮೇ ತಿಂಗಳಿನಲ್ಲಿ ಈ ಸಾರ್ವಕಾಲಿಕ ದಾಖಲೆಯೂ ‘ಬ್ರೇಕ್‌’ ಆಗಿದ್ದು ಭಾರೀ ಪ್ರಮಾಣದಲ್ಲಿ ಮದ್ಯ ಬಿಕರಿಯಾಗಿದೆ.

More than 50 lakh boxes of beer worth 3185 crores were sold in month of May in Karnataka rav

ಸಿದ್ದು ಚಿಕ್ಕಬಳ್ಳೇಕೆರೆ

ಬೆಂಗಳೂರು (ಜೂ.17) : ಏಪ್ರಿಲ್‌ ತಿಂಗಳಿನಲ್ಲಿ ಅಬಕಾರಿ ಇಲಾಖೆಯ ಇತಿಹಾಸದಲ್ಲೇ ದಾಖಲೆ ಪ್ರಮಾಣದ ಬಿಯರ್‌ ಮಾರಾಟವಾಗಿ ದಾಖಲೆಯಾಗಿತ್ತು. ಆದರೆ ಮೇ ತಿಂಗಳಿನಲ್ಲಿ ಈ ಸಾರ್ವಕಾಲಿಕ ದಾಖಲೆಯೂ ‘ಬ್ರೇಕ್‌’ ಆಗಿದ್ದು ಭಾರೀ ಪ್ರಮಾಣದಲ್ಲಿ ಮದ್ಯ ಬಿಕರಿಯಾಗಿದೆ.

ಪ್ರಸಕ್ತ 2024ರ ಏಪ್ರಿಲ್‌ ತಿಂಗಳಿನಲ್ಲಿ 48.72 ಲಕ್ಷ ಬಾಕ್ಸ್‌ ಬಿಯರ್‌ (ಒಂದು ಬಾಕ್ಸ್‌ನಲ್ಲಿ 7.8 ಲೀ.) ಅಂದರೆ, 3.80 ಕೋಟಿ ಲೀ. ಬಿಯರ್‌ ಮಾರಾಟವಾಗಿತ್ತು. ಅಬಕಾರಿ ಇಲಾಖೆಯ ‘ಇತಿಹಾಸ’ದಲ್ಲೇ ಒಂದು ತಿಂಗಳಿನಲ್ಲಿ ಇಷ್ಟೊಂದು ಭಾರೀ ಪ್ರಮಾಣದಲ್ಲಿ ಬಿಯರ್‌ ಮಾರಾಟವಾಗಿರಲಿಲ್ಲ. ಆದ್ದರಿಂದ ಇದು ಸಾರ್ವತ್ರಿಕ ದಾಖಲೆಯಾಗಿತ್ತು. ಆದರೆ ಮೇ ಮಾಹೆಯಲ್ಲಿ ಬರೋಬ್ಬರಿ 50.71 ಲಕ್ಷ ಬಾಕ್ಸ್‌ ಬಿಯರ್‌, ಅಂದರೆ 3.95 ಕೋಟಿ ಲೀ. ಬಿಯರ್‌ ಮಾರಾಟವಾಗಿ ಏಪ್ರಿಲ್‌ ದಾಖಲೆ ಮುರಿದು ಬಿದ್ದಿದೆ.

ಹೆಚ್ಚು ಕಿಕ್ ಕೊಡುತ್ತೆಂದು ಎಕ್ಸ್‌ಪೈರಿ ಡೇಟ್‌ ಆಗಿರೋ ಓಲ್ಡ್ ಬೀಯರ್ ಕುಡಿಬೇಡಿ, ಸಾಯ್ತೀರಿ ಅಷ್ಟೇ!

ಶೇ.30.63 ಬೆಳವಣಿಗೆ:

2023 ರ ಏಪ್ರಿಲ್‌-ಮೇ ತಿಂಗಳಿನಲ್ಲಿ ಒಟ್ಟಾರೆ 115.25 ಲಕ್ಷ ಬಾಕ್ಸ್‌ ಐಎಂಎಲ್‌ ಮದ್ಯ(ಒಂದು ಬಾಕ್ಸ್‌ನಲ್ಲಿ 8.64 ಲೀ.), 76.88 ಲಕ್ಷ ಲಕ್ಷ ಬಾಕ್ಸ್‌ ಬಿಯರ್‌ ಮಾರಾಟವಾಗಿದ್ದು ಅಬಕಾರಿ ಇಲಾಖೆಯು 4915.59 ಕೋಟಿ ರು. ರಾಜಸ್ವ ಸಂಗ್ರಹಿಸಿತ್ತು. 2024 ರ ಏಪ್ರಿಲ್‌-ಮೇ ನಲ್ಲಿ 118.27 ಲಕ್ಷ ಬಾಕ್ಸ್‌ ಐಎಂಎಲ್‌ ಮದ್ಯ, 100.43 ಲಕ್ಷ ಬಾಕ್ಸ್‌ ಬಿಯರ್‌ ಮಾರಾಟವಾಗಿ 5449.80 ಕೋಟಿ ರು. ರಾಜಸ್ವ ಸಂಗ್ರಹಿಸಲಾಗಿದೆ. ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ 534.21 ಕೋಟಿ ರುಪಾಯಿ ಅಧಿಕ ರಾಜಸ್ವ ಸಂಗ್ರಹವಾಗಿದ್ದು ಬಿಯರ್‌ ಮಾರಾಟದಲ್ಲಿ ಶೇ.30.63 ಬೆಳವಣಿಗೆಯಾಗಿದೆ.

ಬಿಯರ್‌ ಮಾತ್ರವಲ್ಲ ಐಎಂಎಲ್‌ ಮದ್ಯ ಮಾರಾಟವೂ ಕಳೆದ ಏಪ್ರಿಲ್‌-ಮೇ ತಿಂಗಳಿಗೆ ಹೋಲಿಸಿದರೆ ಪ್ರಸ್ತಕ ಸಾಲಿನಲ್ಲಿ ಹೆಚ್ಚಳವಾಗಿದೆ. 2023 ಏಪ್ರಿಲ್‌ನಲ್ಲಿ 52.90 ಲಕ್ಷ ಬಾಕ್ಸ್‌ ಐಎಂಎಲ್‌ ಮದ್ಯ ಮಾರಾಟವಾಗಿದ್ದರೆ, 2024 ಏಪ್ರಿಲ್‌ನಲ್ಲಿ 54.46 ಲಕ್ಷ ಬಾಕ್ಸ್‌ ಬಿಕರಿಯಾಗಿ ಮಾರಾಟ ಶೇ.2.95 ರಷ್ಟು ಅಧಿಕವಾಗಿತ್ತು. 2023 ಮೇ ತಿಂಗಳಿನಲ್ಲಿ 62.35 ಲಕ್ಷ ಬಾಕ್ಸ್‌ ಐಎಂಎಲ್‌ ಮದ್ಯ ಮಾರಾಟವಾಗಿದ್ದರೆ, 2024 ಮೇ ಮಾಹೆಯಲ್ಲಿ 63.81 ಲಕ್ಷ ಬಾಕ್ಸ್‌ ಮಾರಾಟವಾಗಿದೆ.

ರಾಜ್ಯದಲ್ಲಿ ಬಿಸಿಲಿನ ತಾಪ ಹೆಚ್ಚಾಗಿದ್ದುದು ಮೇ ತಿಂಗಳಿನಲ್ಲಿ ಬಿಯರ್‌ ಮಾರಾಟ ಅಧಿಕವಾಗಲು ಕಾರಣವಾದರೆ, ಮತ್ತೊಂದೆಡೆ, ಲೋಕಸಭೆಗೆ ಮೇ 7 ರಂದು ರಾಜ್ಯದಲ್ಲಿ ಎರಡನೇ ಹಂತದ ಚುನಾವಣೆ ನಡೆದಿದ್ದು, ಚುನಾವಣೆಯ ಹಿನ್ನೆಲೆಯೂ ಬಿಯರ್‌ ಮಾರಾಟ ಅಧಿಕವಾಗಲು ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

ಚಿಲ್ಡ್ ಬಿಯರ್, ಕೋಲ್ಡ್ ನೀರು... ಬೇಸಿಗೆಯಲ್ಲಿ ಹೃದಯಾಘಾತಕ್ಕೆ ಇವೂ ಆಗಬಹುದು ಕಾರಣ

ವರ್ಷ ಮೇ ತಿಂಗಳು ರಾಜಸ್ವ ಸಂಗ್ರಹ(ಕೋಟಿ ರು.)

  • 2012 951.23
  • 2013 1039.97
  • 2014 1381.83
  • 2015 1469.18
  • 2015 1404.05
  • 2017 1470.53
  • 2018 1703.46
  • 2019 2052.54
  • 2020 1403.02
  • 2021 1474
  • 2022 2339.09
  • 2023 2607.41
  • 2024 3185.57
Latest Videos
Follow Us:
Download App:
  • android
  • ios