Asianet Suvarna News Asianet Suvarna News

ಒಂಟಿಯಾಗಿ ಬದುಕುತ್ತಿದ್ದ ಸನ್ಯಾಸಿ ಮನೆಯಲ್ಲಿ ಲಕ್ಷ ಲಕ್ಷ ಹಣ ಪತ್ತೆ!

ಎಲ್ಲರಿಂದ ದೂರವಾಗಿ ಒಂಟಿಯಾಗಿ ಬದುಕುತ್ತಿದ್ದ ಸನ್ಯಾಸಿಯೋರ್ವ ಮೃತಪಟ್ಟಿದ್ದು, ಮೃತನ ಮನೆಯಲ್ಲಿ ಲಕ್ಷಾಂತರ ರೂಪಾಯಿ ಪತ್ತೆಯಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪಟ್ಟಣದಲ್ಲಿ ನಡೆದಿದೆ.

More than 30 lakh money was found in the house of a monk at chitradurga rav
Author
First Published Jun 30, 2023, 11:30 AM IST

ಚಿತ್ರದುರ್ಗ (ಜೂ.30):  ಎಲ್ಲರಿಂದ ದೂರವಾಗಿ ಒಂಟಿಯಾಗಿ ಬದುಕುತ್ತಿದ್ದ ಸನ್ಯಾಸಿಯೋರ್ವ ಮೃತಪಟ್ಟಿದ್ದು, ಮೃತನ ಮನೆಯಲ್ಲಿ ಲಕ್ಷಾಂತರ ರೂಪಾಯಿ ಪತ್ತೆಯಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪಟ್ಟಣದಲ್ಲಿ ನಡೆದಿದೆ.

ವಾರದ ಹಿಂದೆ ಮೃತಪಟ್ಟಿರುವ ಗಂಗಾಧರ ಶಾಸ್ತ್ರಿ(70) ಒಂಟಿಯಾಗಿ ಬದುಕು ನಡೆಸುತ್ತಿದ್ದ ಶಾಸ್ತ್ರಿ. ಶಾಸ್ತ್ರ ಹೇಳುವುದು, ಶುಭ ಕಾರ್ಯದ ಪೂಜೆ ಮಾಡಿಸುತ್ತಿದ್ದ. ಗಂಗಾಧರ ಶಾಸ್ತ್ರಿಗೆ 16ಎಕರೆ‌ ಜಮೀನಿದ್ದು 4ಎಕರೆ ತೆಂಗಿನ ತೋಟ, ಗದ್ದೆ ಹೊಂದಿದ್ದರು. ಕೃಷಿ ಮತ್ತಿತರೆ ಆದಾಯದಿಂದ ಬಂದ ಸುಮಾರು 30ಲಕ್ಷಕ್ಕೂ ಅಧಿಕ ಹಣ ಮನೆಯಲ್ಲಿ ಕೂಡಿಟ್ಟಿದ್ದರು. ಭಕ್ತರಿಂದ ಬಂದ ಕಾಣಿಕೆ ಹಣವೇ 46ಸಾವಿರ ರೂ.ಹೆಚ್ಚಿದೆ. 

ಜಮೀನಿಗೆ ದಾರಿ ಬಿಡಿ ಅಂದ್ರೆ, ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಂದೇಬಿಟ್ರು

ಚಿತ್ರದುರ್ಗದ ಹೊಳಲ್ಕೆರೆ ಪಟ್ಟಣದಲ್ಲಿರುವ ಗಂಗಾಧರ ಶಾಸ್ತ್ರಿ ಮೃತಪಟ್ಟ ಹಿನ್ನೆಲೆ ಎರಡು ದಿನದ ಹಿಂದೆ ಮನೆ ಪರಿಶೀಲಿಸಿದ್ದ ಭಕ್ತರು. ಈ ವೇಳೆ  ಮನೆಯಲ್ಲಿ ಲಕ್ಷಾಂತರೂ ಕೂಡಿಟ್ಟಿರುವುದು ಪತ್ತೆಯಾಗಿದೆ. ಸದ್ಯ  ಜುಲೈ 7ಕ್ಕೆ ಭಕ್ತರ ಸಭೆ ಕರೆದು ಸಮಿತಿ ರಚನೆಗೆ ಸ್ಥಳೀಯರ ನಿರ್ಧಾರ ಮಾಡಿದ್ದು.  ಜಮೀನಿನಲ್ಲಿ ಗಂಗಾಧರ ಶಾಸ್ತ್ರಿ ಗದ್ದುಗೆ ನಿರ್ಮಿಸಲು ಸ್ಥಳೀಯರು ನಿರ್ಧರಿಸಿದ್ದಾರೆ.

Follow Us:
Download App:
  • android
  • ios