ಹೊಸೂರಿನಲ್ಲಿ ಉಸಿರಾಟದ ತೊಂದರೆಯಾಗಿ ಸರ್ಕಾರಿ ಶಾಲೆಯ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ
ಅವರೆಲ್ಲರೂ ಬಡ ಕುಟುಂಬದ ವಿದ್ಯಾರ್ಥಿಗಳು, ಎಂದಿನಂತೆ ಬೆಳಿಗ್ಗೆ ಎಲ್ಲಾ ಮಕ್ಕಳು ಸರ್ಕಾರಿ ಶಾಲೆಗೆ ಹೋಗಿದ್ರು. ಶಾಲೆಯಲ್ಲಿ ಪಾಠ ಕೇಳುತ್ತಿದ್ದ ಮಕ್ಕಳಿಗೆ ವಿಷಗಾಳಿ ಬೀಸುತ್ತಿರುವ ಅನುಭವವಾಗಿದೆ. ಇದಾದ ಕೆಲವೇ ಸಮಯದಲ್ಲಿ ಶಾಲೆಯ 150ಕ್ಕೂ ಅಧಿಕ ಮಂದಿ ವಿಧ್ಯಾರ್ಥಿಗಳು ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದಾರೆ.
ವರದಿ: ಟಿ.ಮಂಜುನಾಥ, ಹೆಬ್ಬಗೋಡಿ, ಬೆಂಗಳೂರು ಗ್ರಾಮಾಂತರ
ಹೊಸೂರು/ತಮಿಳುನಾಡು (ಅ.14): ಅವರೆಲ್ಲರೂ ಬಡ ಕುಟುಂಬದ ವಿದ್ಯಾರ್ಥಿಗಳು, ಎಂದಿನಂತೆ ಬೆಳಿಗ್ಗೆ ಎಲ್ಲಾ ಮಕ್ಕಳು ಸರ್ಕಾರಿ ಶಾಲೆಗೆ ಹೋಗಿದ್ರು. ಶಾಲೆಯಲ್ಲಿ ಪಾಠ ಕೇಳುತ್ತಿದ್ದ ಮಕ್ಕಳಿಗೆ ವಿಷಗಾಳಿ ಬೀಸುತ್ತಿರುವ ಅನುಭವವಾಗಿದೆ. ಇದಾದ ಕೆಲವೇ ಸಮಯದಲ್ಲಿ ಶಾಲೆಯ 150ಕ್ಕೂ ಅಧಿಕ ಮಂದಿ ವಿಧ್ಯಾರ್ಥಿಗಳು ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದಾರೆ.
ರಾಜ್ಯದ ಗಡಿ ಆನೇಕಲ್ಲಿಗೆ ಹೊಂದಿಕೊಂಡಿರುವ ಹೊಸೂರು ಮಹಾನಗರ ಪಾಲಿಕೆಯ ಕಾಮರಾಜ್ ಕಾಲೋನಿಯಲ್ಲಿ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ ಇಂದು ಮಧ್ಯಾಹ್ನ ವಿದ್ಯಾರ್ಥಿಗಳು ದಿಢೀರ್ ಅಸ್ವಸ್ಥರಾಗಿದ್ದು ಉಸಿರಾಟದ ತೊಂದರೆಯಿಂದ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ಶಾಲೆಯಲ್ಲಿ 1300 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಮಧ್ಯಾಹ್ನ 1 ಗಂಟೆಗೆ ಊಟದ ವಿರಾಮ ನೀಡಲಾಗಿದ್ದು, ಊಟ ಮುಗಿಸಿ 2 ಗಂಟೆಗೆ ವಿದ್ಯಾರ್ಥಿಗಳೆಲ್ಲರೂ ಶಾಲಾ ಕೊಠಡಿಗೆ ತೆರಳಿದ್ದರು.
Mangaluru: ಶಾಸಕ ಹರೀಶ್ ಪೂಂಜಾಗೆ ಬೆದರಿಕೆ: ಆರೋಪಿಯನ್ನು ಬಂಧಿಸಿದ ಪೊಲೀಸರು
ಸ್ವಲ್ಪ ಹೊತ್ತಿನ ಬಳಿಕ ಶಾಲೆಯ 6 ಮತ್ತು 7ನೇ ತರಗತಿಯ ಕೊಠಡಿಯಲ್ಲಿದ್ದ ವಿದ್ಯಾರ್ಥಿಗಳು ಏಕಾಏಕಿ ಉಸಿರಾಟ ಮಾಡಲು ಸಾಧ್ಯ ಆಗದೆ ಪರದಾಡಿದ್ದಾರೆ. ಶಾಲೆಯ ಕಿಟಕಿ ಪಕ್ಕದಲ್ಲಿ ಸೆಪ್ಟಿಕ್ ಟ್ಯಾಂಕ್‌ನಿಂದ ಬಂದ ವಾಸನೆಯಿಂದ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ತರಗತಿಯಲ್ಲಿದ್ದ ವಿದ್ಯಾರ್ಥಿಗಳೆಲ್ಲರೂ ಕೂಡ ದೃಷ್ಟಿ ಕಳೆದುಕೊಂಡವರಂತೆ ಹೆಚ್ಚು ವಿದ್ಯಾರ್ಥಿಗಳು ಪ್ರಜ್ಞಾಹೀನ ಸ್ಥಿತಿಯಲ್ಲಿ ಒಬ್ಬರ ನಂತರ ಒಬ್ಬರು ಬೀಳಲು ಪ್ರಾರಂಭಿಸಿದಾಗ ಶಾಲೆಯ ಶಿಕ್ಷಕರು ಮತ್ತು ಸಿಬ್ಬಂದಿ ಗಾಬರಿಗೊಂಡು ತಕ್ಷಣ ಸರ್ಕಾರಿ ಆಸ್ಪತ್ರೆಗೆ ಮಾಹಿತಿ ನೀಡಿ ಶಾಲಾ ವಿದ್ಯಾರ್ಥಿಗಳನ್ನು ಕರೆದೊಯ್ದಿದ್ದಾರೆ.
ಆಂಬುಲೆನ್ಸ್ ಮೂಲಕ ಚಿಕಿತ್ಸೆಗಾಗಿ ಹೊಸೂರು ಸರಕಾರಿ ಆಸ್ಪತ್ರೆಗೆ ವಿದ್ಯಾರ್ಥಿಗಳನ್ನು ರವಾನೆ ಮಾಡಲಾಗಿದ್ದು, ಆಸ್ಪತ್ರೆಯ ವೈದ್ಯರು ವಿದ್ಯಾರ್ಥಿಗಳಿಗೆ ತುರ್ತು ಚಿಕಿತ್ಸೆ ನೀಡಿದ್ದು, ಶಕ್ತಿ ಎಂಬ ವಿದ್ಯಾರ್ಥಿನಿ ತೀವ್ರ ಅಸ್ವಸ್ಥಳಾಗಿದ್ದು ಕೃಷ್ಣಗಿರಿ ಅಸ್ಪತ್ರೆಗೆ ಆಕೆಯನ್ನು ರವಾನಿಸಲಾಗಿದೆ. ಸರ್ಕಾರಿ ಆಸ್ಪತ್ರೆಯ ಬಳಿ ನೂರಾರು ಜನ ಪೋಷಕರು ಜಮಾಯಿಸಿದ್ದು ಮಕ್ಕಳಿಗೆ ಏನಾಗಿದೆ ಎನ್ನುವ ಆತಂಕದಲ್ಲಿ ಕಣ್ಣೀರು ಹಾಕುತ್ತಿದ್ದಾರೆ.
Murugha Mutt: ಪೀಠಾಧಿಪತಿ ಸ್ಥಾನದಿಂದ ಮುರುಘಾಶ್ರೀ ವಜಾಗೊಳಿಸಿ, ಸರ್ಕಾರಕ್ಕೆ ಮನವಿ
ಸ್ಥಳಕ್ಕೆ ಕೃಷ್ಣಗಿರಿ ಜಿಲ್ಲಾಧಿಕಾರಿ ಜಯಚಂದ್ರ ಭಾನುರೆಡ್ಡಿ ಹಾಗೂ ಹೊಸೂರು ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಒಟ್ಟಿನಲ್ಲಿ ಶಾಲೆಯ ವಿದ್ಯಾರ್ಥಿಗಳಲ್ಲಿ ದಿಡೀರ್ ಉಸಿರಾಟದ ತೊಂದರೆ ಉಂಟಾದ ಘಟನೆಯಿಂದ ಪೋಷಕರು ಹಾಗೂ ಶಾಲೆಯ ಆಡಳಿತ ಮಂಡಳಿಯಲ್ಲಿ ಆತಂಕ ಸೃಷ್ಟಿಯಾಗಿದ್ದು ಆಸ್ಪತ್ರೆಯಲ್ಲಿರುವ ಮಕ್ಕಳು ಚೇತರಿಸಿಕೊಳ್ಳುತ್ತಿದ್ದು,ಘಟನೆಗೆ ನಿಖರವಾದ ಕಾರಣ ಇನ್ನಷ್ಟೇ ತಿಳಿಯಬೇಕಿದೆ.