ಬೆಳಗಾವಿ, (ಡಿ. 10): ಬಿಜೆಪಿ ಅವರಿಗೆ ರಾಜಕೀಯ ಮಾಡೋದು ಬಿಟ್ಟು ಬೇರೇನು ಗೊತ್ತಿಲ್ಲ. ಮಾಡೋಕೆ ಬೇರೆ ಕೆಲಸವಿಲ್ಲದವರು ಈ ರೀತಿ ಗೊಂದಲ ಸೃಷ್ಟಿ ಮಾಡುತ್ತಾರೆಂದು ಬಿಜೆಪಿ ವಿರುದ್ಧ ಸಚಿವ ಡಿ.ಕೆ.ಶಿವಕುಮಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

"

ಸಿದ್ದಗಂಗಾ ಶ್ರೀಗಳಿಗೆ ಚಿಕಿತ್ಸೆ ನೀಡ್ತೀರೋದು ಒಳ್ಳೆಯ ಡಾಕ್ಟರ್ ಒಳ್ಳೆಯ ಹೆಸರು ಇದೆ ಎಂದು ಹೇಳಿದೆ. ಅದರೆ, ಅದರಲ್ಲಿ ಇಲ್ಲಸಲ್ಲದ ಗೊಂದಲ ಸೃಷ್ಠಿ ಮಾಡುವ ಮೂಲಕ ಸ್ವಾಮೀಜಿ ಹೆಸರಲ್ಲೂ ನೀಚ ರಾಜಕಾರಣ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ವೈದ್ಯರಿಗೆ ’ಮುಸ್ಲೀಂ’ ಲೇಪ ಹಚ್ಚಿದ ಡಿಕೆಶಿ; ವ್ಯಕ್ತವಾಯ್ತು ಭಾರೀ ವಿರೋಧ

ಶ್ರೀಗಳ ವಿಚಾರದಲ್ಲಿ ಜಾತಿ ತರೋಕೆ ಇಷ್ಟವಿಲ್ಲ .ಅಕಸ್ಮಾತ್ ಯಾರಿಗಾದ್ರೂ ನನ್ನ ಹೇಳಿಕೆಯಿಂದ ನೋವಾಗಿದ್ದರೆ ಕ್ಷಮೆ ಕೇಳುವೆ. ಸ್ವಾಮೀಜಿ ವಿಚಾರದಲ್ಲಿ ಕ್ಷಮೆ‌ ಕೇಳಿದ್ರೇ ತಪ್ಪೆನಿಲ್ಲ ಎಂದರು.

ನಾವೆಲ್ಲಾ ಜಾತಿ, ಧರ್ಮ ಎಂದೆಲ್ಲಾ ಮಾತನಾಡುತ್ತೇವೆ. ಡಾ. ಮಹಮ್ಮದ್ ರೇಲಾ ಎನ್ನುವ ಮುಸಲ್ಮಾನ ವೈದ್ಯರು ಅವರ ಹೆಸರಿನಲ್ಲಿ ಆಸ್ಪತ್ರೆಯನ್ನು ಕಟ್ಟಿದ್ದಾರೆ. ತುಂಬಾ ಚೆನ್ನಾಗಿ ಟ್ರೀಟ್ ಮೆಂಟ್ ನೀಡುತ್ತಾರೆ.

ಕರ್ನಾಟಕದಲ್ಲಿ ರೇಲಾ ರೀತಿಯ ಆಸ್ಪತ್ರೆ ನಾನು ನೋಡಿಲ್ಲ. 450 ಬೆಡ್​ಗಳಲ್ಲಿ 150 ಐಸಿಯು ಬೆಡ್​ ಇದೆ. ವೈದ್ಯಕೀಯ ಶಿಕ್ಷಣ ಸಚಿವನಾಗಿ ಈ ಆಸ್ಪತ್ರೆ ಬಗ್ಗೆ ಮೆಚ್ಚುಗೆ ಇದೆ ಎಂದು ಡಿ ಕೆ ಶಿವಕುಮಾರ್ ಹೇಳಿದ್ದರು.

ಆದ್ರೆ ಇದಕ್ಕೆ ಕೆಲವರು ಜಾತಿ ಲೇಪನ ಹಚ್ಚಿ ಬೇರೆ ಹಾದಿಗೆ ತಿರುಚಲು ಯತ್ನಿಸಿದ್ದಾರೆ.