ಬೆಂಗಳೂರು[ಜ.01]: ವಿಶ್ವದಾದ್ಯಂತ ಹೊಸ ವರ್ಷಾಚರಣೆಯ ಸಂಭ್ರಮ ಕಳೆಗಟ್ಟಿದೆ. ಆದರೆ ಈ ನಡುವೆ ನಮ್ಮ ರಾಜ್ಯದ ಶಾಸಕರು ನ್ಯೂ ಇಯರ್ ಸಲೆಬ್ರೇಟ್ ಮಾಡಲು ವಿದೇಶಕ್ಕೆ ಹಾರಿದ್ದಾರೆ. 

ಹೌದು ಶಾಸಕರು ಹೊಸ ವರ್ಷಾಚರಣೆಗೆ ಫ್ಯಾಮಿಲಿ ಜೊತೆ ದುಬೈ, ಸಿಂಗಪುರ್ ಎಂದು ವಿದೇಶಕ್ಕೆ ಹಾರಿದ್ದಾರೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ದುಬೈ ಪ್ರವಾಸಕ್ಕೆ ತೆರಳಿದರೆ ಶಾಸಕ ಅಜಯ್ ಸಿಂಗ್ ಕೂಡಾ ಅವರೊಂದಿಗೆ ತೆರಳಿದ್ದಾರೆ.

ಇತ್ತ ಪರಿಷತ್ ಸದಸ್ಯ ರಿಜ್ವಾಬ್ ಹರ್ಷದ್, ಶ್ರೀನಿವಾಸ್ ಮಾಣೆ ಕೂಡಾ ದುಬೈನಲ್ಲಿ ನೂತನ ವರ್ಷದ ಸಂಭ್ರಮಾಚರಿಸಿದ್ದಾರೆ. ಉಳಿದಂತೆ ಶಾಸಕ ಎಸ್. ಟಿ. ಸೋಮಶೇಖರ್, ಶಾಸಕ ಮುನಿರತ್ನ, ಬೈರತಿ ಬಸವರಾಜ್ ಸಿಂಗಪುರ್ ವಿಮಾನವೇರಿದ್ದಾರೆ.

ಇತ್ತ ರಾಜ್ಯದಲ್ಲಿ ಮೈತ್ರಿ ಸರ್ಕಾರಕ್ಕೆ ಆಪರೇಷನ್ ಕಮಲದ ಭೀತಿ ಇದ್ದರೂ, ಹೊಸ ವರ್ಷದ ಆಚರಣೆಗೆ ರಾಜಕೀಯ ನಾಯಕರು ವಿದೆಶಕ್ಕೆ ತೆರಳಿರುವುದು ಅಚ್ಚರಿ ಮೂಡಿಸಿದೆ.