Asianet Suvarna News Asianet Suvarna News

ಶಾಸಕ ವಿಜಯಾನಂದ ಕಾಶಪ್ಪನವರಗೆ ಡಬಲ್ ಧಮಾಕ; ವೀರಶೈವ ನಿಗಮ ಅಧ್ಯಕ್ಷ ಸ್ಥಾನದೊಂದಿಗೆ ಸಂಪುಟ ದರ್ಜೆ ಸ್ಥಾನಮಾನ!

ಶಾಸಕ ವಿಜಯಾನಂದ ಕಾಶಪ್ಪನವರಿಗೆ ಸರ್ಕಾರದಿಂದ ಡಬಲ್ ಧಮಾಕಾ ಸಿಕ್ಕಿದೆ. ವೀರಶೈವ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನದ ಜೊತೆಗೆ ಸಚಿವ ಸಂಪುಟ ದರ್ಜೆ ಸ್ಥಾನಮಾನವನ್ನೂ ನೀಡಲಾಗಿದೆ.

MLA Vijayananda Kashappanavar get Veerashaiva Lingayat Development Corporation President sat
Author
First Published Feb 17, 2024, 6:59 PM IST

ಬೆಂಗಳೂರು (ಫೆ.17): ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬಹುಮತ ಪಡೆದು ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರ್ಕಾರಕ್ಕೆ ಸಚಿವಾಕಾಂಕ್ಷಿಗಳ ಮನವೊಲಿಎಯೇ ದೊಡ್ಡ ಕಸರತ್ತಾಗಿತ್ತು. ಈ ಹಿನ್ನೆಲೆಯಲ್ಲಿ ಅತೃಪ್ತ ಶಾಸಕರೆಲ್ಲರಿಗೂ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಲಾಗಿತ್ತು. ಆದರೆ, ಕ್ರೀಡಾ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಶಾಸಕ ವಿಜಯಾನಂದ ಕಾಶಪ್ಪನವರಿಗೆ ಕಾನೂನು ತೊಡಲು ಎದುರಾಗಿದ್ದರಿಂದ, ಅದನ್ನು ರದ್ದುಗೊಳಿಸಿ ಈಗ ಕರ್ನಾಟಕ ವೀರಶೈವ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ಮಾಡಿ ಸಚಿವ ಸಂಪುಟ ದರ್ಜೆ ಸ್ಥಾನಮಾನವನ್ನೂ ನೀಡಲಾಗಿದೆ.

'ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ವೀರಶೈವ ಲಿಂಗಾಯತರಿಗೆ ಹಿಂದುಳಿದ ವರ್ಗದ 2ಎ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ಪಾದಯಾತ್ರೆ, ಪ್ರತಿಭಟನೆ ಹಾಗೂ ನಿರಂತರ ಧರಣಿಗಳನ್ನು ಮಾಡುವ ಮೂಲಕ ಆಡಳಿತಾರೂಢ ಸರ್ಕಾರಕ್ಕೆ ಹೊಡೆತ ನೀಡಿದ್ದರು. ಈ ಮೂಲಕ ಬಿಜೆಪಿ ಪರವಾಗಿದ್ದ ವೀರಶೈವ ಲಿಂಗಾಯತ ಮತಗಳನ್ನು ಕಾಂಗ್ರೆಸ್‌ ಕಡೆಗೆ ವಾಲಿಸುವಲ್ಲಿ ಮಹತ್ವದ ಪಾತ್ರವನ್ನೂ ನಿರ್ವಹಿಸಿದ್ದರು. ಆದರೆ, ವಿಧಾನಸಭಾ ಚುನಾವಣೆ ಬಳಿಕ 135 ಸ್ಥಾನಗಳಲ್ಲಿ ಗಳಿಸಿ ಬಹುಮತದಿಂದ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರ್ಕಾರದಲ್ಲಿ ತಮಗೆ ಸಚಿವ ಸ್ಥಾನ ಸಿಗುವುದೆಂಬ ಭರವಸೆ ಇಟ್ಟುಕೊಂಡಿದ್ದರು. ಆದರೆ, ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ತಮ್ಮ ಆಕ್ರೋಶವನ್ನ ಹೊರಹಾಕಿದ್ದರು.

ಮಹಿಳೆಗೆ ಯಜಮಾನಿಕೆ ಪದವಿ ನೀಡಿದ ಕಾಂಗ್ರೆಸ್ ಸರ್ಕಾರ: ಹುನಗುಂದ ಶಾಸಕ ಕಾಶಪ್ಪನವರ

ಇನ್ನು ಲೋಕಸಭಾ ಚುನಾವಣೆಗೂ ಮುನ್ನ ಸಂಘಟನೆ ಕಾರ್ಯಕ್ಕೆ ಪುನಃ ಎಲ್ಲ ಶಾಸಕರನ್ನು ಸಜ್ಜುಗೊಳಿಸುವ ಅನಿವಾರ್ಯತೆ ಕಾಂಗ್ರೆಸ್ ಪಕ್ಷಕ್ಕೆ ಎದುರಾಯಿತು. ಈ ವೇಳೆ ಸಚಿವ ಸ್ಥಾನ ಸಿಗದೇ ಅತೃಪ್ತಗೊಂಡಿದ್ದ ಶಾಸಕರ ಮನವೊಲಿಕೆಗೆ ಕಸರತ್ತು ನಡೆಸಿದ ಕಾಂಗ್ರೆಸ್‌ ನಾಯಕರು ಸರ್ಕಾರದಲ್ಲಿ ಖಾಲಿಯಿದ್ದ ನಿಗಮ ಮಂಡಳಿ, ಪ್ರಾಧಿಕಾರಗಳ ಮುಖ್ಯಸ್ಥ ಸ್ಥಾನಗಳನ್ನು ಹಂಚಿಕೆ ಮಾಡಲು ತೀರ್ಮಾನಿಸಿತು. ಈ ಹಿನ್ನೆಲೆಯಲ್ಲಿ 30ಕ್ಕೂ ಅಧಿಕ ನಿಗಮ ಮಂಡಳಿಗಳು, ಪ್ರಾಧಿಕಾರಗಳಿಗೆ ಶಾಸಕರನ್ನು ಅಧ್ಯಕ್ಷ ಹಾಗೂ ಮುಖ್ಯಸ್ಥರನ್ನಾಗಿ ನೇಕ ಮಾಡಿ ಆದೇಶ ಹೊರಡಿಸಿತು.

ಕಾನೂನಾತ್ಮಕ ತೊಡಕು ಹೊಂದಿದ್ದ ಕ್ರೀಡಾ ಪ್ರಾಧಿಕಾರ: ಕಾಂಗ್ರೆಸ್ ಅಧಿಕಾರಕ್ಕೆ ಬರುವಲ್ಲಿ ಪ್ರಮುಖ ಪಾತ್ರವನ್ನೂ ವಹಿಸಿದ್ದ ಶಾಸಕ ವಿಜಯಾನಂದ ಕಾಶಪ್ಪನವರಿಗೆ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಅಧ್ಯಕ್ಷ ಸ್ಥಾನವನ್ನು ನೀಡಲಾಗಿತ್ತು. ಅಧ್ಯಕ್ಷ ಸ್ಥಾನ ಹಂಚಿಕೆಯಾದ ದಿನ ಸಂತಸ ವ್ಯಕ್ತಪಡಿಸಿದ ಶಾಸಕ ಕಾಶಪ್ಪನವರಿಗೆ ಮರುದಿನ ಶಾಕ್ ಕಾದಿತ್ತು. ಕಾರಣ, ಕ್ರೀಡಾ ಪ್ರಾಧಿಕಾರಕ್ಕೆ ರಾಜ್ಯದ ಕ್ರೀಡಾ ಸಚಿವರೇ ಅಧ್ಯಕ್ಷರಾಗಿತ್ತಾರೆ ಎಂಬ ನಿಯಮವಿದೆ. ಆದರೆ, ನಿಯಮವನ್ನು ಮೀರಿ ಶಾಸಕರನ್ನು ಅಧ್ಯಕ್ಷರನ್ನಾಗಿ ಮಾಡಲು ಅವಕಾಶವಿಲ್ಲದ ಕಾರಣ, ಸೂಕ್ತ ಸ್ಥಾನಮಾನ ಸಿಗದೇ ಪುನಃ ಸರ್ಕಾರದ ಮುಖ್ಯಸ್ಥರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ಈಗ ಅವರಿಗೆ ಬದಲಿ ನಿಗಮವನ್ನು ನೀಡುವಲ್ಲಿ ಯಶಸ್ವಿಯಾಗಿದೆ.

ಆನೇಕಲ್ ಬಾಲ್ಯ ವಿವಾಹಕ್ಕೆ ಸಿಕ್ತು ರೋಚಕ ಟ್ವಿಸ್ಟ್; ಅಜ್ಜಿ ಕೊನೇ ಆಸೆ ಈಡೇರಿಸಲು ಮೊಮ್ಮಗಳ ಬಲಿ ಕೊಟ್ಟರು

ರಾಜ್ಯದಲ್ಲಿ ವೀರಶೈವ ಲಿಂಗಾಯತರ ಮೀಸಲಾತಿಗೆ ಹೋರಾಟ ಮಾಡಿದ ಹಿನ್ನೆಲೆಯಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರಿಗೆ ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷ ಸ್ಥಾನವನ್ನೇ ನೀಡಲಾಗಿದೆ. ಈ ಕುರಿತು ಆದೇಶ ಹೊರಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಜ.26ರಂದು ವಿಜಯಾನಂದ ಕಾಶಪ್ಪನವರ ಶಿವಶಂಕರಪ್ಪ ಅವರಿಗೆ ಕ್ರೀಡಾ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಿಸಿರುವುದನ್ನು ರದ್ದುಗೊಳಿಸಿ ಮುಂದಿನ 2 ವರ್ಷಗಳ ಅವಧಿಗೆ  ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಜೊತೆಗೆ, ಸಚಿವ ಸಂಪುಟ ದರ್ಜೆಯ ಸ್ಥಾನಮಾನವನ್ನು ಕಲ್ಪಿಸಲಾಗಿದೆ. ರಾಜ್ಯದ ಸಚಿವರಿಗೆ ನೀಡಲಾಗುವ ಎಲ್ಲ ಸೌಲಭ್ಯಗಳನ್ನು ಕಲ್ಪಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆದೇಶ ಹೊರಡಿಸಿದ್ದಾರೆ.

Follow Us:
Download App:
  • android
  • ios