ಪ್ರಧಾನಿಗೆ ಅವಾಚ್ಯ ನಿಂದನೆ : ಕ್ಷಮೆಯಾಚಿಸಿದ ಶಾಸಕ ಪರಮೇಶ್ವರ ನಾಯ್ಕ
ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಮಾಜಿ ಸಚಿವ, ಹೂವಿನಹಡಗಲಿ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆದ ಬಳಿಕ ತಪ್ಪಿನ ಅರಿವಾಗಿ ಬೇಷರತ್ ಕ್ಷಮೆ ಯಾಚಿಸಿದ್ದಾರೆ.
ಹೂವಿನಹಡಗಲಿ (ನ.26): ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಮಾಜಿ ಸಚಿವ, ಹೂವಿನಹಡಗಲಿ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆದ ಬಳಿಕ ತಪ್ಪಿನ ಅರಿವಾಗಿ ಬೇಷರತ್ ಕ್ಷಮೆ ಯಾಚಿಸಿದ್ದಾರೆ.
ತೋಟವೊಂದರಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಬೆಂಬಲಿಗರೊಂದಿಗೆ ರಾಜಕೀಯ ವಿಷಯ ಚರ್ಚಿಸುತ್ತಿರುವ ಸಂದರ್ಭದಲ್ಲಿ ಪರಮೇಶ್ವರ ನಾಯ್ಕ ಅವರು ಮಾತನಾಡಿದ್ದಾರೆ. ಇಂದಿನ ಯುವಕರಿಗೆ ಅದೇನು ಆಗಿದೆಯೋ ಗೊತ್ತಿಲ್ಲ, ಎಲ್ಲರೂ ಮೋದಿ... ಮೋದಿ... ಅಂತಾರೆ ಎಂದರಲ್ಲದೆ ಅದೇ ಭರಾಟೆಯಲ್ಲಿ ಅವಾಚ್ಯ ಶಬ್ದಗಳನ್ನು ಬಳಸಿದ್ದಾರೆ. ಗ್ಯಾಸ್ ಸಿಲಿಂಡರ್, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿದ್ದಾರೆ. ನನ್ನ ಕಣ್ಣು ಎದುರಿಗೆ ಎಲ್ಲವನ್ನು ನೋಡಿದ್ದೇನೆ, ಯಾರು ಏನು ಆದರು ಎಂಬುದು ನನಗೆ ಗೊತ್ತಿದೆ ಎಂದಿದ್ದಾರೆ.
ಅಕ್ಷರ ದಾಸೋಹ ಅಕ್ಕಿಯಲ್ಲಿ ಪ್ಲಾಸ್ಟಿಕ್ ಮಿಶ್ರಿತ ಅಕ್ಕಿ ಪತ್ತೆ?
ಶಾಂತಕುಮಾರ ಎಂಬವರನ್ನು ಹರಪನಹಳ್ಳಿ ಪಿಎಲ್‌ಡಿ ಬ್ಯಾಂಕ್ ನಿರ್ದೇಶಕರನ್ನು ಮಾಡಿ, ಅಧ್ಯಕ್ಷರನ್ನು ಮಾಡಿದ್ದೇನೆ. ಆದರೆ ಅವನು ದೊಡ್ಡ ಲೀಡರ್ ಆದಂತೆ ಮಾಡುತ್ತಾನೆ. ಅವನು ಹೋಗಿ ಆ ಹೆಣ್ಣು ಮಕ್ಕಳ ಹಿಂದೆ ತಿರುಗಾಡುತ್ತಾನೆ. (ಎಂ.ಪಿ.ಪ್ರಕಾಶರ ಪುತ್ರಿಯರಾದ ಎಂ.ಪಿ.ವೀಣಾ,ಎಂ.ಪಿ. ಲತಾ) ನಾಳೆ ಅವರಿಗೆ ಪಕ್ಷ ಟಿಕೆಟ್ (ಹರಪನಹಳ್ಳಿ) ಕೊಟ್ಟು ನಿಮ್ಮ ಗ್ರಹಚಾರಕ್ಕೆ ಅವರು ಗೆದ್ದರೆ, ಅವರನ್ನು ಕಾಣಲು ನಾಳೆ ನೀವು ಬೆಂಗಳೂರಿಗೆ ಹೋಗಬೇಕಾಗುತ್ತದೆ. ಈಗಷ್ಟೇ ಇಲ್ಲೆ ಸುತ್ತಾಡುತ್ತಾರೆ. ನಾಳೆ ನಿಮ್ಮ ಕೈಗೆ ಸಿಗಲ್ಲ, ವಾರದಲ್ಲಿ 4 ದಿನ ಕ್ಷೇತ್ರದಲ್ಲಿ ಇರೋಕೆ ಅವರೇನು ಪಿ.ಟಿ. ಪರಮೇಶ್ವರ ನಾಯ್ಕನಾ? ಎಂದಿದ್ದಾರೆ.
ಹರಪನಹಳ್ಳಿಯಲ್ಲೇ ಟಿಕೆಟ್‌ಗೆ ಪ್ರಯತ್ನ ಮಾಡಿ, ಇಲ್ಲಿಂದಲೇ ಸ್ಪರ್ಧೆ ಮಾಡಿ ಎಂಬ ಕಾರ್ಯಕರ್ತರ ಪ್ರಶ್ನೆಗೆ, ಜನನೂ ಹಂಗೆ ಇದ್ದಾರೆ, .500 ಕೊಟ್ಟೋರಿಗೆ ಮತ ಹಾಕುತ್ತಾರೆ. ನನಗೆ ಕಾಂಗ್ರೆಸ್ 4 ಬಾರಿ ಶಾಸಕ, 2 ಬಾರಿ ಮಂತ್ರಿಯನ್ನಾಗಿ ಮಾಡಿದೆ. ಹಾಗಾಗಿ ನಾನು ಪಕ್ಷಕ್ಕೆ ದ್ರೋಹ ಮಾಡಲ್ಲ, ಹರಪನಹಳ್ಳಿ ಸಾಮಾನ್ಯ ಕ್ಷೇತ್ರ. ಇಲ್ಲಿ ಸ್ಪರ್ಧಿಸೋಕೆ ಆಗಲ್ಲ ಎಂದು ಹೇಳಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಬಿಜೆಪಿ ಕಾರ್ಯಕರ್ತರು ವೀಡಿಯೋ ನೋಡಿ ಕೆರಳಿ ಕೆಂಡವಾಗಿದ್ದಾರೆ.
ಗುಮ್ಮಟನಗರಿಯಲ್ಲಿ ರೈತನ ಕೈ ಹಿಡಿದ ಸೀತಾಫಲ: ಶೂನ್ಯ ಬಂಡವಾಳದ ಮೂಲಕ ಲಕ್ಷ-ಲಕ್ಷ ಲಾಭ
ಬೇಷರತ್ ಕ್ಷಮೆಯಾಚನೆ: ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಅವಹೇಳಕಾರಿಯಾಗಿ ಮಾತನಾಡಿರುವ ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ ಬೇಷರತ್ ಕ್ಷಮೆ ಯಾಚಿಸಿದ್ದಾರೆ. ಈ ಕುರಿತು ವಿಡಿಯೋ ಮಾಡಿ ಸ್ಪಷ್ಟನೆ ನೀಡಿರುವ ಅವರು, ಪ್ರಧಾನಿ ಬಗ್ಗೆ ಮಾತನಾಡಿರುವ ರೆಕಾರ್ಡ್ ಗಮನಿಸಿದ್ದೇನೆ. ರೈತರ ನೋವು ಮತ್ತು ಕಣ್ಣೀರು ನನಗೆ ಉದ್ವೇಗಕ್ಕೆ ಒಳಗಾಗುವಂತೆ ಪ್ರೇರೇಪಿಸಿತು. ಆ ಉದ್ವೇಗದ ಹಿನ್ನೆಲೆಯಲ್ಲಿ ಪ್ರಧಾನಿಯವರ ಬಗ್ಗೆ ಬಳಸಿದ ಪದಕ್ಕೆ ನಾನು ಬೇಷರತ್ ಕ್ಷಮೆ ಕೋರುತ್ತೇನೆ ಎಂದು ಸ್ಪಷ್ಟಡಿಸಿದ್ದಾರೆ.