ಶಾಸಕ ಎನ್. ಮಹೇಶ್‌ ಅವರಿಗೆ ಎದೆಯ ನೋವು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೈಸೂರಿನ ಅಪೋಲೋ ಅಸ್ಪತ್ರೆಗೆ ದಾಖಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಮುಂದುರೆದಿದೆ.

ಮೈಸೂರು (ಮಾ.12): ಶನಿವಾರ ಕೆಪಿಸಿಸಿ ಕಾರ್ಯಾಧ್ಯಕ್ಷ ಧೃವನಾರಾಯಣ ಅವರು ಸಾವನ್ನಪ್ಪಿದ ಬೆನ್ನಲ್ಲೇ ಶಾಸಕ ಎನ್. ಮಹೇಶ್‌ ಅವರು ಮೈಸೂರಿನ ನಿವಾಸಕ್ಕೆ ಹೋಗಿ ಅಂತಿಮ ದರ್ಶನ ಪಡೆದಿದ್ದರು. ಧೃವನಾರಾಯಣ ಅವರ ಮೃತದೇಹದ ಅಂತಿಮ ದರ್ಶನ ಪಡೆದಿದ್ದ ವೇಳೆ ಶಾಸಕ ಎನ್. ಮಹೇಶ್‌ ಕಂಬನಿ ಮಿಡಿದಿದ್ದರು. ಭಾರವಾದ ಮನಸ್ಸಿನಿಂದಲೇ ಮನೆಗೆ ತೆರಳಿದ್ದರು. ಆದರೆ, ಮನೆಗೆ ತೆರಳಿದ ಶಾಸಕ ಎನ್. ಮಹೇಶ್‌ ಅವರಿಗೆ ಎದೆಯ ನೋವು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲು ಮಾಡಲಾಗಿದೆ

ನಿನ್ನೆ ರಾತ್ರಿ ಮನೆಯಲ್ಲಿ ಊಟವನ್ನು ಮುಗಿಸಿ ಮಲಗಲು ಹೋದ ವೇಳೆ ತೀವ್ರವಾಗಿ ಎದೆ ನೋವು ಉಲ್ಬಣಿಸಿದೆ. ಇನ್ನು ನೋವು ತಾಳಲಾರದೇ ರಾತ್ರಿ 12.30ರಲ್ಲಿ ಶಾಸಕ ಎನ್. ಮಹೇಶ್‌ ಮೈಸೂರಿನ ಅಪೋಲೋ ಅಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ಐಸಿಯುನಲ್ಲಿ‌ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರು ಆರೋಗ್ಯದಲ್ಲಿ ಯಾವುದೇ ಗಂಭೀರ ಪ್ರಮಾಣದ ತೊಂದರೆ ಆಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.