ಬೆಂಗಳೂರು(ಸೆ.04): ಡ್ರಗ್ಸ್‌ ದಂಧೆ ವಿಚಾರದಲ್ಲಿ ನಿರ್ಮಾಪಕ ಇಂದ್ರಜಿತ್‌ ಲಂಕೇಶ್‌ ಅವರ ನಡೆಯನ್ನು ನಾನು ಸ್ವಾಗತಿಸುತ್ತೇನೆ. ಈ ವಿಚಾರವನ್ನು ಅಧಿವೇಶನದಲ್ಲಿ ಪ್ರಸ್ತಾಪಿಸಲಿದ್ದು ಸರ್ಕಾರ ಈ ದಂಧೆ ಮಟ್ಟ ಹಾಕಲು ಕ್ರಮಕೈಗೊಳ್ಳಬೇಕೆಂದು ಶಾಸಕ ಎನ್‌.ಎ.ಹ್ಯಾರಿಸ್‌ ಆಗ್ರಹಿಸಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡ್ರಗ್‌ ಮಾಫಿಯಾ ದೇಶದ ಮುಂದಿನ ಪೀಳಿಗೆಯನ್ನು ಬಲಿ ತೆಗೆದುಕೊಳ್ಳುವಂತೆ ಕಾಣುತ್ತಿದೆ. ಇದನ್ನು ತಡೆಯಬೇಕು. ಯಂಗ್‌ ಇಂಡಿಯಾ ಯಂಗ್‌ ಇಂಡಿಯಾ ಆಗಿಯೇ ಉಳಿಬೇಕು. ಸಿನೆಮಾ ರಂಗ ಸ್ಟಾರ್‌ಗಳೇ ಆಗಿರಲಿ, ರಾಜಕಾರಣಿಗಳು, ಅವರ ಮಕ್ಕಳು ಯಾರೇ ಇರಲಿ ಈ ದಂಧೆಯಲ್ಲಿ ತೊಡಗಿರುವರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.

ದಾಖಲೆ ಬಗ್ಗೆ ರಿವೀಲ್ ಮಾಡಲ್ಲ : ಡ್ರಗ್ಸ್ ಸುಳಿಯ ಬಗ್ಗೆ ಮತ್ತೆ ಮಾತಾಡಿದ್ರು ಇಂದ್ರಜಿತ್

ಆರಂಭದಲ್ಲಿ ಡ್ರಗ್ಸ್‌ ತೆಗೆದುಕೊಳ್ಳುವವರಿಗೆ ಅದರ ಅಪಾಯ ಅರ್ಥವಾಗುವುದಿಲ್ಲ. ಮುಂದೆ ಡ್ರಗ್ಸ್‌ ಸಿಗದೆ ಹೋದಾಗ ಅದರಿಂದ ಎಷ್ಟು ಅಪಾಯ ಎಂಬುದು ತಿಳಿಯುತ್ತದೆ. ಇತ್ತೀಚಿನ ಡಿ.ಜೆ.ಹಳ್ಳಿ, ಕೆಜೆ ಹಳ್ಳಿ ಗಲಭೆಯಲ್ಲೂ ಡ್ರಗ್ಸ್‌ ವ್ಯಸನಿಗಳನ್ನು ಬಳಸಲಾಗಿದೆ. ಇದೆಲ್ಲದರ ಬಗ್ಗೆ ಸಮಗ್ರ ತನಿಖೆ ನಡೆಸಿ ಸರ್ಕಾರ ಈ ಮಾಫಿಯಾವನ್ನು ಬುಡಸಮೇತ ಕಿತ್ತೊಗೆಯಬೇಕು ಎಂದು ಒತ್ತಾಯಿಸಿದ್ದಾರೆ.