ಶ್ರೀರಾಮನ ವನವಾಸದಂತೆ 14 ವರ್ಷಗಳ ಬಳಿಕ ನಾನು ಬಳ್ಳಾರಿಗೆ ಕಾಲಿಡುತ್ತೇನೆ ಅನ್ನೋ ಭಾವನೆ ಇದೆ: ಜನಾರ್ದನ ರೆಡ್ಡಿ
ಶ್ರೀರಾಮನ ವನವಾಸದಂತೆ 14 ವರ್ಷಗಳ ನಂತರ ನಾನು ಬಳ್ಳಾರಿಗೆ ಪಾದ ಇಡುತ್ತೇನೆ ಅನ್ನೋ ಭಾವನೆ ಇದೆ. ಹೀಗಾಗಿ ಹನುಮನ ಪಾದ ಹಿಡ್ಕೊ ಅಂತಾ ಶ್ರೀರಾಮ ನನ್ನನ್ನ ಗಂಗಾವತಿಗೆ ಕಳಿಸಿದ್ದಾನೆ ಅನಿಸುತ್ತೆ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಭಾವನಾತ್ಮಕವಾಗಿ ನುಡಿದರು.
ಕೊಪ್ಪಳ (ಮಾ.11): ಶ್ರೀರಾಮನ ವನವಾಸದಂತೆ 14 ವರ್ಷಗಳ ನಂತರ ನಾನು ಬಳ್ಳಾರಿಗೆ ಪಾದ ಇಡುತ್ತೇನೆ ಅನ್ನೋ ಭಾವನೆ ಇದೆ. ಹೀಗಾಗಿ ಹನುಮನ ಪಾದ ಹಿಡ್ಕೊ ಅಂತಾ ಶ್ರೀರಾಮ ನನ್ನನ್ನ ಗಂಗಾವತಿಗೆ ಕಳಿಸಿದ್ದಾನೆ ಅನಿಸುತ್ತೆ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಭಾವನಾತ್ಮಕವಾಗಿ ನುಡಿದರು.
ಇಂದು ಆನೆಗೊಂದಿ ಉತ್ಸವದಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಎಲ್ಲ ಭಾಗಗಳಲ್ಲೂ ಕಾಲಿಡಲು ಆಶೀರ್ವಾದ ಮಾಡು ಅಂತಾ ಹನುಮನ ಪಾದ ಹಿಡಿದು ಬೇಡ್ಕೊಂಡಿದ್ದೇನೆ ಎಂದರು.
ಗೀತಾ ಶಿವರಾಜ್ ಕುಮಾರ್ ಲೋಕಸಭೆಗೆ ಸ್ಪರ್ಧೆ: ಗೆಲ್ಲಲೇಬೇಕೆಂದೇ ಕಣಕ್ಕೆ ಇಳಿದಿದ್ದೇವೆ: ನಟ ಶಿವಣ್ಣ
ಬಿಜೆಪಿ ಸರ್ಕಾರದಲ್ಲಿ ಅಂಜನಾದ್ರಿಗೆ ಯಾವುದೇ ಹಣ ಬಿಡುಗಡೆಯಾಗಿರಲಿಲ್ಲ. ಅಂಜನಾದ್ರಿ ಅಭಿವೃದ್ಧಿಗೆ ಸಿಎಂ ಸಿದ್ದರಾಮಯ್ಯ ಬಳಿ ಹಣ ಕೇಳಿದ್ದೆ. ನೂರು ಕೋಟಿ ಅನುದಾನ ನೀಡಿದ್ದಾರೆ. ಅಲ್ಲದೆ ಪ್ರತಿ ವರ್ಷ ಹಣ ಕೊಡ್ತಿನಿ ಎಂದು ಸಿ ಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಹಾಡಿ ಹೊಗಳಿದರು. ಇದೇ ವೇಳೆ ಬಿಜೆಪಿ ವಿರುದ್ಧ ಕಿಡಿಕಾರಿದ ಜನಾರ್ದನರೆಡ್ಡಿ, ಲೋಕಸಭೆಯಲ್ಲಿ ಬಿಜೆಪಿಗೆ ಬೆಂಬಲ ಕೊಡಬೇಕಾದ್ರೆ ಅಂಜನಾದ್ರಿಗೆ ಮೊದಲು ಅನುಧಾನ ನೀಡಲಿ. ಲೋಕಸಭೆ ಚುನಾವಣೆಯ ನೋಟಿಫಿಕೇಶನ್ ಒಳಗೆ ಅಂಜನಾದ್ರಿಗೆ 2 ಸಾವಿರ ಕೋಟಿ ಅನುದಾನ ಕೊಡಿ. ಅಂಜನಾದ್ರಿ ಅಭಿವೃದ್ಧಿಗೆ 2 ಸಾವಿರ ಕೋಟಿ ಕೊಟ್ರೇ ಬಿಜೆಪಿ ಜೊತೆ 2 ಹೆಜ್ಜೆ ಹಾಕ್ತಿನಿ, ಅನುದಾನ ಕೊಡದೇ ಬಿಜೆಪಿಗೆ ಸಪೋರ್ಟ್ ಮಾಡೊಲ್ಲ ಎಂದರು.
Loksabha election 2024: ಶ್ರೀರಾಮುಲುಗೆ ಟಿಕೆಟ್ ನೀಡಿದರೆ ಸೋಲು ಖಚಿತ ಎಂದ ಶಾಸಕ ಜನಾರ್ದನ ರೆಡ್ಡಿ!
ನಾನು ಐಪಿಎಲ್‌ನಲ್ಲಿ ಕ್ರಿಕೆಟ್ ಪ್ಲೇಯರ್ ಇದ್ದಂಗೆ. ಶಿವರಾಜ ತಂಗಡಗಿ ಅವರು ಪಕ್ಷೇತರ ಎಂಎಲ್‌ಎ ಆಗಿದ್ದಾಗ ನಮ್ಮ ಜೊತೆ ಬಂದಿದ್ರು. ಶಿವರಾಜ ತಂಗಡಗಿ ಅವರು ನನಗೆ ಸಹಕಾರ ಕೊಡ್ತಿರೋದಕ್ಕೆ ನಾನು ಅವರ ಕಡೆ ಒಂದು ಹೆಜ್ಜೆ ಹಾಕಿರಬಹುದು ಎಂದರು.