ಆನಂದ್ ಸಿಂಗ್ ಮೇಲಿನ ಹಲ್ಲೆ ಕೇಸ್ ಗೆ ಟ್ವಿಸ್ಟ್ ಕೊಟ್ಟ ಶಾಸಕ ಗಣೇಶ್
ಆಪರೇಷನ್ ಕಮಲ ಭೀತಿಯಿಂದ ರೆಸಾರ್ಟ್ ವಾಸ್ತವ್ಯ ನಡೆಸಿದ್ದ ಕಾಂಗ್ರೆಸ್‌ನ ಶಾಸಕರಿಬ್ಬರ ಮಧ್ಯೆ ಮದ್ಯದ ಅಮಲಿನಲ್ಲಿ ಮಾರಾಮಾರಿ ನಡೆದಿದ್ದು, ಈ ಘಟನೆಯಲ್ಲಿ ಕಂಪ್ಲಿ ಶಾಸಕ ಗಣೇಶ್ ಅವರು ವಿಜಯನಗರ ಶಾಸಕ ಆನಂದಸಿಂಗ್ ಮೇಲೆ ತೀವ್ರ ಹಲ್ಲೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಆದರೆ ಈ ಪ್ರಕರಣಕ್ಕೆ ಗಣೇಶ್ ಹೊಸ ಟ್ವಿಸ್ಟ್ ನೀಡಿದ್ದಾರೆ.
ರಾಮನಗರ : ಆಪರೇಷನ್ ಕಮಲ ಭೀತಿಯಿಂದ ರೆಸಾರ್ಟ್ ವಾಸ್ತವ್ಯ ನಡೆಸಿದ್ದ ಕಾಂಗ್ರೆಸ್‌ನ ಶಾಸಕರಿಬ್ಬರ ಮಧ್ಯೆ ಮದ್ಯದ ಅಮಲಿನಲ್ಲಿ ಮಾರಾಮಾರಿ ನಡೆದಿದ್ದು, ಈ ಘಟನೆಯಲ್ಲಿ ಕಂಪ್ಲಿ ಶಾಸಕ ಗಣೇಶ್ ಅವರು ವಿಜಯನಗರ ಶಾಸಕ ಆನಂದಸಿಂಗ್ ಮೇಲೆ ತೀವ್ರ ಹಲ್ಲೆ ಮಾಡಿದ್ದಾರೆ ಎಂದು ಹೇಳಲಾಗಿದೆ.
ಆದರೆ ಈ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ಗಣೇಶ್ ಆನಂದ್ ಸಿಂಗ್ ಹಾಗೂ ನನ್ನ ನಡುವೆ ನಡೆದ ಗಲಾಟೆ ಸುಳ್ಳು. ವೈಕ್ತಿಕವಾಗಿ ಆನಂದ್ ಸಿಂಗ್ ನನಗೆ ಅಣ್ಣನಿದ್ದಂತೆ. ಅವರು ನಮ್ಮ ಕುಟುಂಬಕ್ಕೂ ಕೂಡ ತುಂಬಾ ಆತ್ಮೀಯರು ಎಂದು ಬಿಡದಿಯ ಈಗಲ್ಟನ್ ರೆಸಾರ್ಟ್ ನಲ್ಲಿ ಹೇಳಿದ್ದಾರೆ.
ಆನಂದ್ ಸಿಂಗ್ ಮೇಲೆ ಗಣೇಶ್ ಹಲ್ಲೆ : ಬಯಲಾಯ್ತು ಸೀಕ್ರೇಟ್!
ಭೀಮಾನಯ್ಕ್ ಹಾಗೂ ಆನಂದ್ ಸಿಂಗ್ ಅವರನ್ನು ಒಗ್ಗೂಡಿಸಲು ಪ್ರಯತ್ನ ಮಾಡಿದ್ದೆ. ನನ್ನಿಂದ ಆನಂದ್ ಸಿಂಗ್ ಗೆ ತೊಂದರೆ ಆಗಿದ್ದರೆ ಕ್ಷಮೆ ಕೇಳುತ್ತೇನೆ. CLP ಸಭೆಯ ನಂತರ ಘಟನೆಗಳು ಈ ನಡೆದಿದೆ. ನಾವೂ ಮೂವರು ಈ ಘಟನೆ ಕುರಿತು ಚರ್ಚೆ ಮಾಡುತ್ತಿದ್ದೆವು. ಮಾತಿಗೆ ಮಾತು ಬೆಳೆದು ಹೀಗಾಗಿದೆ.
ಕೈ ಶಾಸಕರ ಬಡಿದಾಟ: ಆತಂಕ ತಂದ ಆನಂದ ಸಿಂಗ್ ಹೆಲ್ತ್ ರಿಪೋರ್ಟ್
ಕುಡಿದಿದ್ದು, ನನಗೆ ತಿಳಿದಿಲ್ಲ. ನಮ್ಮ ಮುಂದೆಯೆ ಅವರು ಬಿದ್ದರು. ಪಕ್ಷಕ್ಕೆ ಮುಜುಗರ ಆಗುತ್ತದೆ ಎನ್ನುವ ನಿಟ್ಟಿನಲ್ಲಿ ನಾನು ಇಂದು ಬಂದು ಹೇಳಿಕೆ ನೀಡುತ್ತಿದ್ದೇನೆ. ನಾನು ನನ್ನ ಕುಟುಂಬ ಇಂದು ಹೋಗಿ ಆನಂದ್ ಸಿಂಗ್ ಬಳಿ ಕ್ಷಮೆ ಕೇಳುತ್ತೇನೆ. ಎಲ್ಲವು ಮಾಧ್ಯಮದರ ಸೃಷ್ಟಿ. ಗನ್ ಮ್ಯಾನ್ ಗೆ ಕಚ್ಚಿದ್ದೇನೆ ಎಂದು ಸುದ್ದಿಯಾಗಿದೆ. ನಾನು ಯಾರಿಗೂ ಕಚ್ಚಿಲ್ಲ. ತಮ್ಮ ಜೊತೆಯೇ ಇದ್ದಾನೆ ಎಂದು ಹೇಳಿದ್ದಾರೆ.