ಮಾರು ವೇಷದಲ್ಲಿ ಆರ್‌ಟಿಒ ಕಚೇರಿಗೆ ಬಂದ ಶಾಸಕ ಭರತ್ ರೆಡ್ಡಿ; ತಪ್ಪಿಸಿಕೊಂಡು ಓಡಿಹೋದ ಬ್ರೋಕರ್‌ಗಳು!
ಭ್ರಷ್ಟಾಚಾರದ ಕೂಪವಾಗಿರುವ ಬಳ್ಳಾರಿ ಆರ್‌ಟಿಓ ಕಚೇರಿಗೆ ಮಾರುವೇಷದಲ್ಲಿ ದಿಢೀರ್ ಭೇಟಿ ನೀಡಿ ಆರ್‌ಟಿಒ ಅಧಿಕಾರಿಗಳಿಗೆ, ಬ್ರೋಕರ್‌ಗಳಿಗೆ ಶಾಕ್ ಕೊಟ್ಟ ಶಾಸಕ ಭರತ್ ರೆಡ್ಡಿ ಈ ವೇಳೆ ಶಾಸಕರು ಬಂದಿರುವುದು ಕಂಡು ಓಡಿ ಹೋದ ಬ್ರೋಕರ್‌ಗಳು.
ವರದಿ : ನರಸಿಂಹ ಮೂರ್ತಿ ಕುಲಕರ್ಣಿ
ಬಳ್ಳಾರಿ (ನ.3): ನಿಯಂತ್ರಣಕ್ಕೆ ಬಾರದಷ್ಟು ಬಳ್ಳಾರಿಯ ಆರ್‌ಟಿಒ ಕಚೇರಿ ಭ್ರಷ್ಟಾಚಾರದಿಂದ ತುಂಬಿ ತುಳುಕುತ್ತಿದೆ. ಯಾರೇ ಬಂದ್ರೂ ಯಾರೇ ಹೋದ್ರು ಇದಕ್ಕೆ ಕಡಿವಾಣ ಹಾಕೋದಕ್ಕೆ ಆಗುತ್ತಿಲ್ಲ. ಬ್ರೋಕರ್ ಗಳ ಕಾಟಕ್ಕೆ ಬೇಸತ್ತ ಜನರು ಅದೆಷ್ಟೋ ಬಾರಿ ದೂರು ನೀಡಿದ್ರು ಯಾವುದೇ ಪ್ರಯೋಜನವಾಗಿರಲಿಲ್ಲ. ಆದ್ರೆ ದಿಢೀರನೇ ಗ್ರಾಹಕರಂತೆ ಬೈಕ್ ಮೇಲೆ ಬಂದ ಜನಪ್ರತಿನಿಧಿಯೊಬ್ಬರು ಅಧಿಕಾರಿಗಳ ಬೆವರಿಳಿಸಿದ್ದಾರೆ. ಅಷ್ಟಕ್ಕೂ ಅಲ್ಲಿ ನಡೆಯುತ್ತಿರೋ ದಂಧೆಯಾದ್ರೂ ಏನು ? ಯಾಕಾಗಿ ಮಾರು ವೇಷದಲ್ಲಿ ಬರಬೇಕಾಯ್ತು ಗೊತ್ತಾ?
ಭ್ರಷ್ಟಾಚಾರದ ಕೂಪ ಬಳ್ಳಾರಿ ಆರ್‌ಟಿಒ ಆಫೀಸ್
ಬಡತನ ಮೆಟ್ಟಿನಿಂತು ಏಷ್ಯನ್ ಗೇಮ್ಸ್‌ನಲ್ಲಿ ನಂದಿನಿ ಸಾಧನೆ; ಹೆಚ್ಚಿನ ತರಬೇತಿಗೆ ಶಾಸಕ ಭರತ್ ರೆಡ್ಡಿ ಧನ ಸಹಾಯ
ಹಿಂದಿನ ಸರ್ಕಾರದಲ್ಲಿ ಏನು ಮಾಡಿದ್ರೋ ಗೊತ್ತಿಲ್ಲ ನಮ್ಮ ಸರ್ಕಾರದಲ್ಲಿ ಭ್ರಷ್ಟಾಚಾರ ಮಾಡಿದ್ರೇ ನಡೆಯೋದಿಲ್ಲ. ಜನರೆದುರಲ್ಲಿಯೇ ಆರ್‌ಟಿಒ ಅಧಿಕಾರಿಗಳಿಗೆ ತೀವ್ರ ತರಾಟೆಗೆ ತೆಗೆದುಕೊಂಡ ಶಾಸಕ ಭರತ್ ರೆಡ್ಡಿ.
ಹೌದು, ಮೈನಿಂಗ್ ನಡೆಯುತ್ತಿರೋ ವೇಳೆ ಬೆಂಗಳೂರು ಹೊರತು ಪಡಿಸಿದ್ರೇ ಬಳ್ಳಾರಿ ಮತ್ತು ಹೊಸಪೇಟೆ ಆರ್ಟಿಓ ಕಚೇರಿಯಿಂದ ರಾಜ್ಯ ಸರ್ಕಾರಕ್ಕೆ ಅತಿಹೆಚ್ಚು ಆದಾಯ ಬರುತ್ತಿತ್ತು. ಆದ್ರೇ, ಈಗ ರಾಜ್ಯ ಸರ್ಕಾರಕ್ಕೆ ಸ್ವಲ್ಪ ಆದಾಯ ಕಡಿಮೆಯಾಗಿದೆಯಾದ್ರೂ ಇಲ್ಲಿರೋ ಅಧಿಕಾರಿಗಳಿಗೆ ಮತ್ತು ಬ್ರೋಕರ್ಗಳಿಗೆ ಮಾತ್ರ ಯಾವುದೇ ರೀತಿಯ ಆದಾಯ ಕಡಿಮೆಯಾಗಿಲ್ಲ. ಹೀಗಾಗಿ ಬಳ್ಳಾರಿ ಆರ್ಟಿಓ ಕಚೇರಿ ಅಂದ್ರೇ, ಅದು ಭ್ರಷ್ಟಾಚಾರದ ಮೂಲ ಸ್ಥಾನ ಎನ್ನುವಂತಾಗಿದೆ. ಇಲ್ಲಿ ಜನರಿಗಿಂತ ದಲ್ಲಾಲಿಗಳು ಮತ್ತು ಬ್ರೋಕರ್ ಗಳು ಹೇಳಿದ ಕೆಲಸವೇ ಬೇಗ ಆಗುತ್ತದೆ ಎನ್ನುವ ಆರೋಪವಿದೆ. ಅದನ್ನು ಪರೀಕ್ಷೆಸಲು ಬಳ್ಳಾರಿ ನಗರ ಶಾಸಕ ಭರತ್ ರೆಡ್ಡಿ ಬೈಕ್ ಮೇಲೆ ಗ್ರಾಹಕರಂತೆ ಬಂದು ಪರೀಕ್ಷೆ ಮಾಡಿದ್ದಾರೆ.
ಈ ವೇಳೆ ಅಧಿಕಾರಿಗಳ ಕಳ್ಳಾಟ ಮತ್ತು ಬ್ರೋಕರ್ ಗಳ ಮೇಲಾಟ ಗೊತ್ತಾಗಿದೆ. ಕೆಲ ಬ್ರೋಕರ್ಗಳು ಶಾಸಕರನ್ನು ನೋಡಿದ ಕೂಡಲೇ ಓಡಿ ಹೋಗಿದ್ದಾರೆ.ಸ್ಥಳದಲ್ಲಿದ್ದ ಕೆಲವರನ್ನು ವಿಚಾರಣೆ ಮಾಡಿದಾಗ ನೇರವಾಗಿ ಕಚೇರಿಯಲ್ಲಿ ಯಾವುದೇ ಕೆಲಸವಾಗಲ್ಲ ಬ್ರೋಕರ್ ಜೊತೆಗೆ ಬೇಕೆಬೇಕು ಎಂದು ದೂರು ನೀಡಿದ್ದಾರೆ. ಇದರಿಂದ ಆಕ್ರೋಶಗೊಂಡ ಶಾಸಕ ಭರತ್ ರೆಡ್ಡಿ ಅಧಿಕಾರಿಗಳಗೆ ತರಾಟೆಗೆ ತೆಗೆದುಕೊಂಡರು.
ರಾಜಕೀಯ ಮಾಡಬೇಡಿ ಕೆಲಸ ಮಾಡಿ
ಇನ್ನೂ ಆರ್‌ಟಿಒ ಇನ್ಸಪೆಕ್ಟರ್ ನಾಗೇಶ್ ಅವರು ಜನಾರ್ದನ ರೆಡ್ಡಿ ಪಕ್ಷದಿಂದ ಚುನಾವಣೆ ನಿಲ್ಲಲು ಭಾರಿ ಪ್ರಯತ್ನ ನಡೆಸಿದ್ರು. ಆದ್ರೇ ಕೊನೆ ಕ್ಷಣದಲ್ಲಿ ಕೈತಪ್ಪಿತ್ತು. ಆದ್ರೇ, ನಾಗೇಶ್ ಮಾತ್ರ ಕೆಲಸಕ್ಕಿಂತ ರಾಜಕೀಯ ಮಾಡುತ್ತಾನೆಂದು ಕಚೇರಿಗೆ ಬಂದ ಜನರು ದೂರು ನೀಡಿದ್ರು. ಚುನಾವಣೆ ನಿಲ್ಲೋದಿದ್ರೇ ರಾಜೀನಾಮೆ ನೀಡಿ. ರಾಜಕೀಯ ಮಾಡೋಕೆ ಕಚೇರಿಗೆ ಬರಬೇಡಿ ಎಂದ ನಾಗೇಶ್ ಅವರಿಗೆ ವಾರ್ನಿಂಗ್ ನೀಡಿದ್ರು. ಯಾರೇ ಬಂದರೂ ಹಣವಿಲ್ಲದೇ ಕೆಲಸ ಆಗಬೇಕು. ಇದು ಮೊದಲ ಸಲವಾಗಿರೋದ್ರಿಂದ ವಾರ್ನಿಂಗ್ ನೀಡಿರುವೆ ಮತ್ತೊಮ್ಮೆ ಮಾಡಿದ್ರೇ ಸಸ್ಪಂಡ್ ಮಾಡುವೆ ಎಚ್ಚರಿಸಿದ್ರು. ಸಮಜಾಯಿಷಿ ನೀಡಲು ಬಂದ ಆರ್ಟಿಓ ಅಧಿಕಾರಿ ಶೇಖರಪ್ಪ ಅವರನ್ನು ತರಾಟೆಗೆ ತೆಗೆದುಕೊಂಡರು.
ಆರ್‌ಟಿಒ ಕಚೇರಿ ಸ್ಥಿತಿ ಬದಲಾವಣೆ ಮಾಡಬೇಕಿದೆ
ರಾಜ್ಯದ ಬಹುತೇಕ ಜಿಲ್ಲೆಯಲ್ಲಿಯ ಆರ್ಟಿಓ ಕಚೇರಿಯಲ್ಲಿ ಬ್ರೋಕರ್ಗಳ ವಾಸ ಅವರು ಆಡಿದ್ದೇ ಆಟ ಅನ್ನೋದು ಮಾಮೂಲಿ ಆದ್ರೇ, ಆಗೋಮ್ಮೆ ಈಗೋಮ್ಮೆ ಈ ರೀತಿ ಜನಪ್ರತಿನಿಧಿಗಳ ಭೇಟಿಯಿಂದಾದ್ರೂ ಅದಕ್ಕೆ ಕಡಿವಾಣ ಬೀಳಬೇಕಿದೆ ಎನ್ನುವುದ ಸಾರ್ವಜನಿಕರ ಆಗ್ರಹವಾಗಿದೆ.